ನ.1ರಿಂದ ಮೊಬೈಲ್‍ನಲ್ಲಿ ‘ನಮ್ಮ ಮೆಟ್ರೊ’ ಟಿಕೆಟ್ ಲಭ್ಯ

ಬೆಂಗಳೂರು, ಅ. 31: ಮೊಬೈಲ್ ಮೂಲಕ ಕ್ಯೂಆರ್ ಕೋಡ್ ಟಿಕೆಟ್ ಸಿದ್ಧಪಡಿಸಿಕೊಂಡು, ಅದನ್ನು ನಿಲ್ದಾಣದ ಪ್ರವೇಶ ಗೇಟ್‍ನಲ್ಲಿ ಸ್ಕ್ಯಾನ್ ಮಾಡಿ ಮೇಟ್ರೋದಲ್ಲಿ ಪ್ರಾರಂಭಿಸುವ ಯೋಜನೆಯನ್ನು ಇಂದಿನಿಂದ(ನ.1) ಆರಂಭಿಸಲಾಗಿದೆ. ಕ್ಯೂಆರ್ ಕೋಡ್ ಬಳಸಿ ಟಿಕೆಟ್ ಖರೀದಿಸಿದರೆ ಶೇ.5ರಷ್ಟು ರಿಯಾಯಿತಿ ದೊರೆಯಲಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.
ಅಂಡ್ರಾಯ್ಡ್ ಫೋನ್‍ನಲ್ಲಿ ಪ್ಲೇಸ್ಟೋರ್ ನಿಂದ ‘ನಮ್ಮ ಮೆಟ್ರೊ’ (Namma Metro App) ಆಪ್ ಡೌನ್‍ಲೋಡ್ ಮಾಡಿಕೊಂಡು ನೋಂದಾಯಿಸಿಕೊಳ್ಳಬೇಕು. ಪ್ರಯಾಣ ಆರಂಭಿಸುವ ನಿಲ್ದಾಣ ಮತ್ತು ತಲುಪಬೇಕಾದ ನಿಲ್ದಾಣಗಳನ್ನು ನಮೂದಿಸಿ ಆನ್‍ಲೈನ್‍ನಲ್ಲೇ ದರ ಪಾವತಿಸಿದರೆ ಕ್ಯೂಆರ್ ಕೋಡ್ ಸೃಷ್ಟಿಯಾಗುತ್ತದೆ. ಕೋಡ್‍ಗಳನ್ನು ಸ್ಕ್ಯಾನ್ ಮಾಡಲು ಎಲ್ಲ ಮೆಟ್ರೊ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಉಪಕರಣಗಳನ್ನು ಅಳವಡಿಸಲಾಗಿದ್ದು, ಕೋಡ್ ಸ್ಕ್ಯಾನ್ ಮಾಡಿ ಪ್ರಯಾಣಿಸಬಹುದು. ಹಾಗೆಯೇ ಬಿಎಂಆರ್‍ಸಿಎಲ್‍ನ ವ್ಯಾಟ್ಸ್‍ಆಪ್ ಸಂಖ್ಯೆ 81055 56677 ಸೇವ್ ಮಾಡಿಕೊಂಡು ‘ಹಾಯ್’ ಎಂಬ ಸಂದೇಶ ಕಳುಹಿಸುವ ಮೂಲಕವೂ ಕ್ಯೂಆರ್ ಟಿಕೆಟ್ ಖರೀದಿ ಮಾಡಬಹುದು.
ಒಮ್ಮೆ ಖರೀದಿಸಿಸುವ ಕ್ಯೂಆರ್ ಕೋಡ್ ಟಿಕೆಟ್, ಆ ದಿನದ ಅಂತ್ಯದವರೆಗೂ ಚಾಲ್ತಿಯಲ್ಲಿರುತ್ತದೆ. ಪ್ರಯಾಣ ಸಾಧ್ಯವಾಗದಿದ್ದರೆ, ದಿನ ಮುಕ್ತಾಯ ಆಗುವಷ್ಟರಲ್ಲಿ ಟಿಕೆಟ್ ರದ್ದತಿ ವಿಧಾನ ಬಳಸಿ ಮೊತ್ತ ವಾಪಸ್ ಪಡೆಯಬಹುದಾಗಿದೆ.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ, ನವೆಂಬರ್ 1, 2022 ರಿಂದ ಬಿಎಂಆರ್ಸಿಎಲ್ ನಮ್ಮ ಮೆಟ್ರೋದ ಪ್ರಯಾಣಿಕರಿಗೆ ಹೆಚ್ಚುವರಿ ಅನುಕೂಲಗಳನ್ನು ಕಲ್ಪಿಸಲಾಗುತ್ತಿದೆ. Introduction of Single Journey QR Tickets available on WattsApp & Namma Metro App. pic.twitter.com/mYHSL99YIF
— ನಮ್ಮ ಮೆಟ್ರೋ (@cpronammametro) October 31, 2022







