Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ​ತೈಲ ಉತ್ಪಾದನೆ ಕಡಿತ ನಿರ್ಧಾರಕ್ಕೆ...

​ತೈಲ ಉತ್ಪಾದನೆ ಕಡಿತ ನಿರ್ಧಾರಕ್ಕೆ ಸೌದಿ, ಯುಎಇ ಸಮರ್ಥನೆ: ಅಮೆರಿಕದ ಎಚ್ಚರಿಕೆ

31 Oct 2022 10:06 PM IST
share
​ತೈಲ ಉತ್ಪಾದನೆ ಕಡಿತ ನಿರ್ಧಾರಕ್ಕೆ ಸೌದಿ, ಯುಎಇ ಸಮರ್ಥನೆ: ಅಮೆರಿಕದ ಎಚ್ಚರಿಕೆ

ಅಬುಧಾಬಿ, ಅ.31: ತೈಲ ಉತ್ಪಾದನೆ(Oil production) ಕಡಿತಗೊಳಿಸುವ ಒಪೆಕ್(OPEC) ಮತ್ತು ಅದರ ಮಿತ್ರರ ನಿರ್ಧಾರವನ್ನು ಸೌದಿ ಅರೆಬಿಯಾ ಹಾಗೂ ಯುಎಇ (UAE)ಸೋಮವಾರ ಸಮರ್ಥಿಸಿಕೊಂಡಿವೆ. ಆದರೆ ಇದರಿಂದ ಜಗತ್ತಿಗೆ ಆರ್ಥಿಕ ಅನಿಶ್ಚಿತತೆ ಎದುರಾಗಲಿದೆ ಎಂದು ಅಮೆರಿಕ ಎಚ್ಚರಿಸಿದೆ. ಒಪೆಕ್ ಹಾಗೂ ಅದರ ಮಿತ್ರರು ಘೋಷಿಸಿರುವ ತೈಲ ಕಡಿತ ನಿರ್ಧಾರ ನವೆಂಬರ್ 1ರಿಂದ ಜಾರಿಗೆ ಬರಲಿದೆ. 

ಅಬುಧಾಬಿ ಇಂಟರ್ನ್ಯಾಷನಲ್ ಪೆಟ್ರೋಲಿಯಂ ಎಕ್ಸಿಬಿಷನ್ ಆ್ಯಂಡ್ ಕಾನ್ಫರೆನ್ಸ್ನ(Abu Dhabi International Petroleum Exhibition and Conference)ಲ್ಲಿ ಮಾತನಾಡಿದ ಸೌದಿ ಅರೆಬಿಯಾದ ಇಂಧನ ಸಚಿವ ಯುವರಾಜ ಅಬ್ದುಲಝೀಝ್ ಬಿನ್ ಸಲ್ಮಾನ್(Abdulaziz bin Salman), ನಮ್ಮನ್ನು ಹೊರತುಪಡಿಸಿ ನಾವು ಯಾರ ಋಣದಲ್ಲೂ ಇಲ್ಲ ಎಂದು ಹೇಳಿದ್ದಾರೆ. ಮುಂಬರುವ ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಶೃಂಗಸಭೆ ಈಜಿಪ್ಟ್ ಮತ್ತು ಯುಎಇಯಲ್ಲಿ ನಡೆಯಲಿದ್ದು ಇದು ನಮಗಾಗಿ, ನಮ್ಮಿಂದ ಮತ್ತು ನಮ್ಮ ಭವಿಷ್ಯಕ್ಕಾಗಿ ನಡೆಯುತ್ತದೆ ಮತ್ತು ಅದಕ್ಕೆ ನಾವು ಬದ್ಧವಾಗಿರಬೇಕು ಎಂದವರು ಹೇಳಿದ್ದಾರೆ. 


ಇದಕ್ಕೆ ಧ್ವನಿಗೂಡಿಸಿದ ಯುಎಇ ಇಂಧನ ಸಚಿವ ಸುಹೈಲ್-ಅಲ್ ಮಝ್ರೂಯಿ, ಅಗತ್ಯ ಬಿದ್ದರೆ ಒಂದು ಫೋನ್ ಕರೆಯಲ್ಲಿ ತೈಲ ಉತ್ಪಾದನೆ ಹೆಚ್ಚಿಸಲು ಒಪೆಕ್ ಮತ್ತದರ ಮಿತ್ರರು  ಸಿದ್ಧರಿದ್ದಾರೆ. ಆದರೆ ಇಂತಹ ಅಗತ್ಯ ಶೀಘ್ರದಲ್ಲಿ ಬರುವ ನಿರೀಕ್ಷೆಯಿಲ್ಲ ಎಂದರು. ಜಾಗತಿಕ ಅಗತ್ಯಕ್ಕೆ  ತಕ್ಕಷ್ಟು ತೈಲವನ್ನು ಪೂರೈಸಲು ಒಪೆಕ್ ಮತ್ತದರ ಮಿತ್ರರು ಸಿದ್ಧವಿದ್ದೇವೆ. ಆದರೆ, ವಿಶ್ವದಲ್ಲಿ ನಾವು ಏಕೈಕ ತೈಲ ಉತ್ಪಾದಕರಲ್ಲ ಎಂಬುದನ್ನೂ ಮರೆಯಬಾರದು ಎಂದರು.  


ಅಬುಧಾಬಿ ಅಂತರಾಷ್ಟ್ರೀಯ ಪೆಟ್ರೋಲಿಯಂ ಪ್ರದರ್ಶನ ಮತ್ತು ಸಮ್ಮೇಳನದಲ್ಲಿ ವ್ಯಕ್ತವಾದ ಅಭಿಪ್ರಾಯ ಮತ್ತು ಹೇಳಿಕೆಗಳು ಅಮೆರಿಕ ಮತ್ತು ಗಲ್ಫ್ ಅರಬ್ ದೇಶಗಳ(ಅಮೆರಿಕದ ಮಿಲಿಟರಿ ನೆರವು ಪಡೆಯುತ್ತಿರುವ ಮಧ್ಯಪ್ರಾಚ್ಯ ದೇಶಗಳು) ನಡುವಿನ ಸಂಪೂರ್ಣ ಒಡಕನ್ನು ತೋರಿಸಿದೆ. ಅಮೆರಿಕದ ರಾಜಕಾರಣಿಗಳು  ಸೌದಿ ಅರೆಬಿಯಾದೊಂದಿಗಿನ ಶಸ್ತ್ರಾಸ್ತ್ರ ಒಪ್ಪಂದದ ಬಗ್ಗೆ ಮರುಚಿಂತನೆ ನಡೆಸಬೇಕು ಎಂದು ಒತ್ತಡ  ಹೇರುತ್ತಿದ್ದು ಉಕ್ರೇನ್ ಯುದ್ಧದಲ್ಲಿ ಸೌದಿ ಅರೆಬಿಯಾ ರಶ್ಯದ ಪರ ಪಕ್ಷಪಾತ ತೋರುತ್ತಿದೆ ಎಂದು ಆರೋಪಿಸಿದ್ದಾರೆ.


ಒಪೆಕ್ ಹಾಗೂ ರಶ್ಯ ನೇತೃತ್ವದ ಇತರ ದೇಶಗಳ ಒಕ್ಕೂಟವು ನವೆಂಬರ್ನಿಂದ   ತೈಲ ಉತ್ಪಾದನೆಯನ್ನು ದಿನಕ್ಕೆ 2 ದಶಲಕ್ಷ ಬ್ಯಾರೆಲ್ಗಳಷ್ಟು ಕಡಿಮೆಗೊಳಿಸಲು ಅಕ್ಟೋಬರ್ನಲ್ಲಿ ಒಪ್ಪಿಕೊಂಡಿದ್ದವು. ಈ ನಿರ್ಧಾರಕ್ಕೆ ಜಾಗತಿಕ ಆರ್ಥಿಕತೆಯ ಕುರಿತ ಕಳವಳ ಕಾರಣ ಎಂದು ಸೌದಿ ಅರೆಬಿಯಾ ನೇತೃತ್ವದ ಒಪೆಕ್ ಹೇಳಿತ್ತು. ಇದು ಹಣದುಬ್ಬರ ಮತ್ತು ನಂತರದ ಬಡ್ಡಿದರ ಹೆಚ್ಚಳದಿಂದ ಪಶ್ಚಿಮದಲ್ಲಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು   ಮತ್ತು ಉಕ್ರೇನ್ ಮೇಲಿನ ರಶ್ಯದ ಯುದ್ಧದಿಂದ ಆಹಾರ ಮತ್ತು ತೈಲ ಪೂರೈಕೆಯ ಮೇಲೆ ಪರಿಣಾಮ  ಬೀರಬಹುದು ಎಂದು ಅಮೆರಿಕ ಮತ್ತು ಯುರೋಪ್ನ ವಿಶ್ಲೇಷಕರು ಎಚ್ಚರಿಸಿದ್ದಾರೆ. 


ತೈಲ ಉತ್ಪಾದನೆ ಕಡಿತವು ಗ್ಯಾಸೊಲಿನ್ ದರ ಏರಿಕೆಗೆ ಕಾರಣವಾಗಬಹುದು ಎಂದು ಅಮೆರಿಕ ಆಕ್ರೋಶ ವ್ಯಕ್ತಪಡಿಸಿದೆ. ಜೂನ್ನಲ್ಲಿ ಅಮೆರಿಕದಲ್ಲಿ ಒಂದು ಗ್ಯಾಲನ್(ಸುಮಾರು 4 ಲೀಟರ್) ಗ್ಯಾಸೊಲಿನ್ನ ದರ 5 ಡಾಲರ್ (414 ರೂ.)  ಇತ್ತು . ಈಗ ಇದು 3.76 ಡಾಲರ್ಗೆ ಇಳಿದಿದ್ದರೂ ನವೆಂಬರ್ನಿಂದ ಮತ್ತೆ ಏರಿಕೆಯಾಗಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.


ಅಂತಿಮವಾಗಿ, ಜಾಗತಿಕವಾಗಿ ಆರ್ಥಿಕ ಅನಿಶ್ಚಿತತೆ ತಲೆದೋರಬಹುದು. ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವಂತೆ ಇಂಧನ ದರಗಳನ್ನು ನಿಗದಿಗೊಳಿಸಬೇಕು. ಹಾಗಾಗದಿದ್ದರೆ ದರ ಆಕಾಶಕ್ಕೆ ಏರಬಹುದು ಮತ್ತು ಆರ್ಥಿಕ ಕುಸಿತಕ್ಕೆ ವೇಗ ನೀಡಬಹುದು. ಇದು ಅಂತಿಮವಾಗಿ ಇಂಧನ ಬೇಡಿಕೆಯ ಮೇಲೆಯೂ ಪರಿಣಾಮ ಬೀರಬಹುದು ಎಂದು ಅಮೆರಿಕದ ಇಂಧನ ವ್ಯವಹಾರಕ್ಕೆ ಸಂಬಂಧಿಸಿದ ಪ್ರತಿನಿಧಿ ಅಮೋಸ್ ಹೊಚ್ಸ್ಟೈನ್ ಹೇಳಿದ್ದಾರೆ. 


ಬೈಡನ್ ಎಚ್ಚರಿಕೆ


ತೈಲ ಉತ್ಪಾದನೆ ಕಡಿತದ ನಿರ್ಧಾರದಿಂದ ರಶ್ಯಕ್ಕೆ ಒಳಿತಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್, ಈ ಉಪಕ್ರಮ ತೀವ್ರ ಪರಿಣಾಮಕ್ಕೆ ಕಾರಣವಾಗಲಿದೆ ಎಂದು ಸೌದಿ ಅರೆಬಿಯಾವನ್ನು ಎಚ್ಚರಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಸೌದಿ ಅರೆಬಿಯಾ `ತೈಲ ಕಡಿತ ನಿರ್ಧಾರ ಜಾರಿಯಲ್ಲಿ ಒಂದು ತಿಂಗಳ ವಿಳಂಬವನ್ನು ಬೈಡನ್ ಬಯಸಿದ್ದಾರೆ. ನವೆಂಬರ್ 8ರಂದು ಅಮೆರಿಕದಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆ ಸಂದರ್ಭ ಅನಿಲ ದರ ಏರಿಕೆಯ ಅಪಾಯವನ್ನು ತಪ್ಪಿಸುವುದು ಅವರ ಉದ್ದೇಶವಾಗಿದೆ' ಎಂದಿದೆ.


ಈ ವಿವಾದದಿಂದಾಗಿ ಅಮೆರಿಕ ಮತ್ತು ಸೌದಿ ಅರೆಬಿಯಾ ನಡುವಿನ ವಿಶ್ವಾಸ ಮತ್ತು  ಪರಸ್ಪರ  ಗೌರವವು ಅತ್ಯಂತ ಕನಿಷ್ಟ ಮಟ್ಟಕ್ಕೆ ತಲುಪಿದೆ ಎಂದು ನ್ಯೂಯಾರ್ಕ್ ಮೂಲದ ಚಿಂತಕರ ವೇದಿಕೆ `ದಿ ಸೌಫಾನ್ ಸೆಂಟರ್' ಸೋಮವಾರ ಹೇಳಿದೆ. 

share
Next Story
X