ಚೀನಾ: ಕೋವಿಡ್ ನಿರ್ಬಂಧದಿಂದ ತಪ್ಪಿಸಿಕೊಳ್ಳಲು ಜನರ ಹರಸಾಹಸ

ಬೀಜಿಂಗ್, ಅ.31: ಕೋವಿಡ್(Covid) ನಿರ್ಬಂಧಕ್ಕೆ ಚೀನಾ ಜಾರಿಗೊಳಿಸಿದ ಹೊಸ ಕ್ರಮಗಳ ಪರಿಣಾಮ ಶಾಂಘೈಯಲ್ಲಿನ ಡಿಸ್ನಿ ರೆಸಾರ್ಟ್ ಅನ್ನು ಮುಚ್ಚಲಾಗಿದ್ದು ಆ್ಯಪಲ್ ಸಂಸ್ಥೆ(ಆ್ಯಪಲ್ ಸಂಸ್ಥೆ)ಯ ಐಫೋನ್(iPhone) ಉತ್ಪಾದನೆ ಸಂಸ್ಥೆಯ ಮುಂದಿನ ತಿಂಗಳ ಉತ್ಪಾದನೆಯಲ್ಲಿ 30% ಕುಸಿತವಾಗಬಹುದು ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಝೆಂಗ್‌ಜೋವ್ ಪ್ರಾಂತದಲ್ಲಿರುವ `ಫಾಕ್ಸ್ಕಾನ್' (Foxconn)ಸ್ಥಾವರವು ಐಫೋನ್ ತಯಾರಿಕೆಯ ಸಹಸಂಸ್ಥೆಯಾಗಿದ್ದು ಈ ವಲಯದಲ್ಲಿ ಕೋವಿಡ್ ಸೋಂಕಿನ ಪ್ರಕರಣ ದಿಢೀರ್ ಏರಿಕೆಯಾದ್ದರಿಂದ ಕಠಿಣ ನಿರ್ಬಂಧ ಜಾರಿಗೊಳಿಸಿರುವುದು ಸಂಸ್ಥೆಯ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕಠಿಣ ನಿರ್ಬಂಧಕ್ಕೆ ಹೆದರಿ ಸಂಸ್ಥೆಯ ಸಿಬಂದಿಗಳು ಆವರಣದ ಗೋಡೆ ಹಾರಿ ತಪ್ಪಿಸಿಕೊಂಡು ಓಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪ್ರವಾಹದಿಂದ ತಪ್ಪಿಸಿಕೊಂಡು ಓಡುತ್ತಿರುವಂತೆ ಎಲ್ಲೆಲ್ಲೂ ಜನರು ಓಡುತ್ತಿರುವುದನ್ನು ಕಾಣಬಹುದು. ನಾನು `ಫಾಕ್ಸ್ಕಾನ್' ಸ್ಥಾವರದ ಕಂಪೌಂಡ್‌ನ ಮುಳ್ಳುತಂತಿಯ ಬೇಲಿ ಹಾರಿ ತಪ್ಪಿಸಿಕೊಂಡು ಮಧ್ಯಚೀನಾದಲ್ಲಿನ ಮನೆಗೆ ತಲುಪಿದ್ದೇನೆ' ಎಂದು ಯುವಾನ್ ಎಂಬ ಸಿಬಂದಿ ಹೇಳಿದ್ದಾನೆ.