25% ಉದ್ಯೋಗಿಗಳ ವಜಾಕ್ಕೆ ಟ್ವಿಟರ್ ನಿರ್ಧಾರ : ವರದಿ

ನ್ಯೂಯಾರ್ಕ್, ಅ.31: ಕಳೆದ ವಾರ ಟ್ವಿಟರ್ ಅನ್ನು ಖರೀದಿಸಿದ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್(Elon Musk), ಸಂಸ್ಥೆಯ ಉದ್ಯೋಗಿಗಳಲ್ಲಿ 25%ದಷ್ಟು ಸಿಬಂದಿಗಳನ್ನು ಮೊದಲ ಹಂತದಲ್ಲಿ ವಜಾಗೊಳಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
2021ರ ಅಂತ್ಯದ ವೇಳೆಗೆ ಟ್ವಿಟರ್ ಸಂಸ್ಥೆಯಲ್ಲಿ 7000ಕ್ಕೂ ಅಧಿಕ ಉದ್ಯೋಗಿಗಳಿದ್ದರು ಎಂದು ಸಂಸ್ಥೆ ಸಲ್ಲಿಸಿರುವ ದಾಖಲೆಯಲ್ಲಿ ಉಲ್ಲೇಖವಿದೆ. ಇದರಲ್ಲಿ 25% ಎಂದರೆ ಸುಮಾರು 2000 ಉದ್ಯೋಗಿಗಳು ಎಂದು ವರದಿ ಹೇಳಿದೆ. ದೀರ್ಘಾವಧಿಯಿಂದ ಮಸ್ಕ್ ಅವರ ಕಾನೂನು ಪ್ರತಿನಿಧಿ, ಖ್ಯಾತ ವಕೀಲ ಅಲೆಕ್ಸ್ ಸ್ಪಿರೋ ಈ ಉಪಕ್ರಮದ ಉಸ್ತುವಾರಿ ವಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.
Next Story