ಬೆಳಗಾವಿಯತ್ತ ಬರುತ್ತಿದ್ದ ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರನ್ನು ತಡೆದ ಪೊಲೀಸರು
ಬೆಳಗಾವಿ: ಕನ್ನಡ ರಾಜ್ಯೋತ್ಸವಕ್ಕೆ ಅಡ್ಡಿಪಡಿಸಲು ಗಡಿಭಾಗದಿಂದ ರಾಜ್ಯ ಪ್ರವೇಶಿಸಲು ಯತ್ನಿಸಿದ ಮಹಾರಾಷ್ಟ್ರದ ಶಿವಸೇನೆಯ ಹಲವು ಕಾರ್ಯಕರ್ತರನ್ನು ಬೆಳಗಾವಿ ಪೊಲೀಸರು ಗಡಿಯಲ್ಲೇ ತಡೆದು ಮರಳಿ ಕಳುಹಿಸಿದ್ದಾರೆ.
ವಿಜಯ ಜ್ಯೋತಿ ಹಿಡಿದು ಬೆಳಗಾವಿಯತ್ತ ಬರುತ್ತಿದ್ದ ಶಿವಸೇನೆಯ 50ಕ್ಕೂ ಹೆಚ್ಚು ಕಾರ್ಯಕರ್ತರು ನಿಪ್ಪಾಣಿ ತಾಲೂಕಿನ ಕುಗನೊಳಿ ಮೂಲಕ ಬೆಳಗಾವಿಗೆ ಹೊರಟಿದ್ದರೆನ್ನಲಾಗಿದೆ. ಕೊಗನೊಳಿ ಚೆಕ್ ಪೋಸ್ಟ್ ಬಳಿ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿವಸೇನೆಯ ಕಾರ್ಯಕರ್ತರನ್ನು ತಡೆದ ಪೊಲೀಸರು, ವಾಪಸ್ ಕಳುಹಿಸಿದ್ದಾರೆ.
ಬೆಳಗಾವಿ ಸೇರಿ ರಾಜ್ಯದ ಗಡಿ ಭಾಗಗಳಲ್ಲಿ ಎಂಇಎಸ್ ಸೇರಿ ಇನ್ನಿತರ ನಾಡ ವಿರೋಧಿ ಶಕ್ತಿಗಳು ಪುಂಡಾಟ ಮೆರೆಯಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಇದನ್ನೂ ಓದಿ: ಮಂಗಳೂರು: ಸಂಭ್ರಮದ ಕನ್ನಡ ರಾಜ್ಯೋತ್ಸವ
Next Story