Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕನ್ನಡ ಚಳವಳಿಯ ಬೇರುಗಳು

ಕನ್ನಡ ಚಳವಳಿಯ ಬೇರುಗಳು

ಚಳವಳಿಗಳು ಕಟ್ಟಿದ ಕನ್ನಡದ ‘ಮಹಾಮನೆ’

ಸಂತೋಷಕುಮಾರ್ ಎಚ್., ಸೊರಬಸಂತೋಷಕುಮಾರ್ ಎಚ್., ಸೊರಬ1 Nov 2022 10:08 AM IST
share
ಕನ್ನಡ ಚಳವಳಿಯ ಬೇರುಗಳು
ಚಳವಳಿಗಳು ಕಟ್ಟಿದ ಕನ್ನಡದ ‘ಮಹಾಮನೆ’

ಬಹುಶಃ ಇತಿಹಾಸದ ಅಸ್ತಿತ್ವ ಅದರ ಮಿತಿಗಳಲ್ಲಿದೆ. ಅಂದರೆ ಘಟಿಸುವ ಘಟನೆಗಳೆಲ್ಲವೂ ಪೂರ್ಣತೆಯಲ್ಲಿಯೇ ಪರ್ಯಾವಸಾನವಾಗದೆ ನಿರಂತರ ಬದಲಾವಣೆಗೆ ತೆರೆದುಕೊಳ್ಳುತ್ತವೆ. ಹಾಗೆಯೇ ಕನ್ನಡ ಸಂದರ್ಭದ ಚಳವಳಿಗಳೂ ಬೇರೆ ಬೇರೆ ಸಂದರ್ಭ, ಸನ್ನಿವೇಶಗಳಲ್ಲಿ ಮೈದಳೆಯುತ್ತ, ಎಲ್ಲರನ್ನೂ ಎಚ್ಚರಿಸುತ್ತ, ತನ್ಮೂಲಕ ಕನ್ನಡತ್ವದ ನಿರಂತರತೆಯನ್ನು ಕಾಪಿಡುವ ಹೊಣೆಗಾರಿಕೆಯನ್ನು ಫಲಪ್ರದವಾಗಿಯೇ ವಹಿಸಿಕೊಂಡಿವೆ.

ನಿರ್ದಿಷ್ಟ ಉದ್ದೇಶ ಸಾಧನೆ, ಧನಾತ್ಮಕ ಬದಲಾವಣೆ, ಅಸ್ಮಿತೆಯ ಪ್ರಶ್ನೆ ಹೀಗೆ ಹಲವು ಹತ್ತು ಅಂಶಗಳನ್ನು ಮುಂದೆ ಮಾಡಿ ಚಳವಳಿಗಳು ಇತಿಹಾಸದೊಂದಿಗೆ ನಡೆದುಬಂದಿವೆ. ಅವು ಫಲಪ್ರದವಾದವೋ ಇಲ್ಲವೋ ಎಂಬುದು ಪ್ರಶ್ನೆಯಾದರೂ ಚಳವಳಿಗಳು ಸತ್ಯಾಗ್ರಹ ಕಾರಣ ಮುಂದಿಟ್ಟು ಅಂತೂ ಜರುಗಿವೆ. ಕಾಲದೊಂದಿಗೆ ನಿರಂತರ ಮುಂದುವರಿಯುತ್ತವೆ. ವೈಯಕ್ತಿಕ ನೆಲೆಯಿಂದ ಸಾಮುದಾಯಿಕ ಹಂತದವರೆಗೆ ಅದರ ಸ್ವರೂಪವಿದೆ. ಕನ್ನಡ ಚಳವಳಿಯ ಸಂದರ್ಭವು ನಾಡು, ನುಡಿ, ಸಂಸ್ಕೃತಿ, ಗಡಿ, ಅಸ್ತಿತ್ವ ಈ ಎಲ್ಲಾ ಅಂಶಗಳ ಒಟ್ಟಂದವಾಗಿದೆ. ಈ ಹಿನ್ನೆಲೆಯಲ್ಲಿಯೇ ಅದನ್ನು ನಿರೂಪಿಸಬೇಕಿದೆ.

ನಮ್ಮ ಜಾನಪದರು ತಮ್ಮ ಬದುಕನ್ನು ಹಾಡಾಗಿಸಿದ್ದು ತಾವೇ ರೂಪಿಸಿಕೊಂಡ ಛಂಧೋರೂಪಗಳಲ್ಲಿ. ಬಹುಶಃ ಇದೊಂದು ಅಸ್ಮಿತೆಯ ಭಾಗ ಹಾಗೂ ನೆಲದ ಬಗೆಗಿನ ಅನನ್ಯತೆ. ಇಲ್ಲಿ ಜನಪದರ ವಿಷಯ ಪ್ರಸ್ತಾಪಿಸಿದ್ದಕ್ಕೆ ಕಾರಣವಿದೆ. ಏಕೆಂದರೆ ಅವರು ಈ ನೆಲದ ಸಂಸ್ಕೃತಿಯನ್ನು ರೂಪಿಸಿದವರು. ಅವರ ನಂತರದ ಸುಮಾರು 1,500 ವರ್ಷಗಳಿಗೂ ಮಿಗಿಲು ಕನ್ನಡ ನಾಡಿನ ಸುದೀರ್ಘ ಚರಿತ್ರೆಯಲ್ಲಿ ವೈಯಕ್ತಿಕವಾಗಿ ಹಾಗೂ ಸಾಂಘಿಕವಾಗಿ ಕನ್ನಡತ್ವದ ಪರ ಚಳವಳಿಗಳು ನಡೆದೇ ಬಂದಿವೆ. ಬಾದಾಮಿಯ ಶಾಸನದಲ್ಲಿ ಉಲ್ಲೇಖಿಸಲ್ಪಟ್ಟ ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಎಂಬ ಸಾಲುಗಳಲ್ಲಿ ಕನ್ನಡದವರು ಅಸ್ತಿತ್ವದ ಪ್ರಶ್ನೆ ಬಂದಾಗ ಎಂಥವರನ್ನೂ ಪ್ರತಿಭಟಿಸುವ ಮನೋಭಾವವನ್ನು ಹೊಂದಿದ್ದರೆಂಬುದನ್ನು ನಿರೂಪಿಸಿರುವುದು ಗಮನಿಸಬೇಕಿದೆ. ನೃಪತುಂಗನು ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದು ಕನ್ನಡದೊಳ್ ಭಾವಿಸಿದ ಜನಪದಂ ಎಂದಿದ್ದು ಕನ್ನಡ ನಾಡಿನ ವಿಸ್ತಾರ, ಅದು ಒಳಗೊಂಡ ಸಂಸ್ಕೃತಿಯ ಉಲ್ಲೇಖದೊಂದಿಗೆ ಆ ಕಾಲದ ಪರರಾಜರಿಗೆ ಕನ್ನಡ ನೆಲದ ವಿಷಯವನ್ನು ಮನಗಾಣಿಸಿದಂತಿದೆ. 

10ನೇ ಶತಮಾನದ ಪಂಪ ನಮಗೆ ಕನ್ನಡ ಸಾಹಿತ್ಯ ಸಂದರ್ಭದ ಮೊದಲ ಚಳವಳಿಗಾರನಂತೆ ಕಂಡುಬರುತ್ತಾನೆ. ಮಾರ್ಗಕಾರನಾದರೂ ದೇಶೀಯದ ಬಗೆಗಿನ ಅವನ ಆಸ್ಥೆ, ಬನವಾಸಿಯ ಹಿರಿಮೆಯನ್ನು ಸಾರುವಲ್ಲಿ ಆಸ್ಥಾನ ಕವಿಯಾದರೂ ಆತನು ತಾಳುವ ನಿಲುವುಗಳು ಕನ್ನಡತ್ವದ ಪ್ರಶ್ನೆಯನ್ನು ಅಂದೇ ಮನಗಾಣಿಸಿದ್ದವು. 

12ನೇ ಶತಮಾನದಲ್ಲಿದ್ದ ನಯಸೇನ ಶುದ್ಧ ಕನ್ನಡದೊಳ್ ತಂದಿಕ್ಕುವುದೇ ಸಕ್ಕದಮಂ ತಕ್ಕುದೆ ಬೆರೆಸಿ ಘೃತಮುಮಂ ತೈಲಮುಮಂ ಎಂದಿದ್ದು ಕನ್ನಡ ಭಾಷೆ ಮತ್ತು ಅದರ ಅಂತಃಸತ್ವದ ಬಗೆಗಿನ ಆತನ ಕಾಣ್ಕೆಯ ಫಲವಾಗಿ ಎಂಬುದು ಅರಿವಾಗದಿರದು. ಆತನ ದೃಷ್ಟಿಯಲ್ಲಿ ಕನ್ನಡವು ಆ ಕಾಲದಲ್ಲಿಯೇ ಮಾರ್ಗ ದೇಶೀಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಶಕ್ತಿಯನ್ನು ಹೊಂದಿತ್ತು. ಕನ್ನಡದಲ್ಲಿ ವಚನ ಚಳವಳಿಯ ಸಂದರ್ಭವು ಕನ್ನಡ ನಾಡನ್ನು ಮೀರಿ ಜಾಗತಿಕವಾಗಿ ಒಂದು ಹೊಸ ಆಲೋಚನಾ ಕ್ರಮಗಳನ್ನೊಳಗೊಂಡ ಮುನ್ನೋಟವನ್ನು ಹೊಂದಿದ್ದು ನಿರ್ವಿವಾದವಾಗಿದೆ. 

ಕನ್ನಡ ದೇಶೀಯತೆ, ಎಲ್ಲರನ್ನೂ ಒಳಗೊಳ್ಳುವಿಕೆ, ಸಮಾಜೋ ಆರ್ಥಿಕ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ ಈ ಎಲ್ಲಾ ಉತ್ತಮಾಂಶಗಳಲ್ಲಿ ಓರಗೆಯ ಜಗತ್ತನ್ನು ಸ್ಪಷ್ಟ ಪ್ರಭಾವಿಸುವ ಶಕ್ತಿ ಹೊಂದಿತ್ತು. ಸರಳ ಭಾಷೆ, ಆತ್ಮವಿಮರ್ಶೆ, ಹಂಚಿ ತಿನ್ನುವ ಮನೋಭಾವ, ಜಾತಿ, ಮತ, ಪಂಥಗಳನ್ನು ಮೀರಿದ ಅಧ್ಯಾತ್ಮಗಳಿಂದ ಇಡೀ ಕನ್ನಡ ನಾಡಿನ ಸಮಸ್ತ ದಿಕ್ಕುಗಳನ್ನು ಬೆಸೆಯುವ ಮಹಾಮನೆಯಾಯಿತು. ಮಹಲಿಂಗರಂಗ ಕನ್ನಡವನ್ನು ಸುಲಿದ ಬಾಳೆಯ ಹಣ್ಣು, ಕಳಿದ ಸಿಗುರಿನ ಕಬ್ಬಿಗೆ ಹೋಲಿಸಿ ಲಲಿತವಾದ ಕನ್ನಡ ನುಡಿಯಲ್ಲಿಯೇ ತನ್ನ ಮೋಕ್ಷವನ್ನು ಕಾಣಬಹುದೆಂದು ಹೇಳಿದ್ದು ತಾಯ್ನುಡಿಯ ಬಗೆಗಿನ ಆತನ ಕಾಳಜಿಯು ಕಿರಿಯರಿಗೆ ಆತ್ಮವಿಮರ್ಶೆಗೆ ಕಾರಣವಾಯಿತು. 

ಕನ್ನಡ ನೆಲದ ಕದಂಬರು, ಗಂಗರು, ರಾಷ್ಟ್ರಕೂಟರು, ಚಾಲುಕ್ಯರು, ವಿಜಯನಗರದ ಅರಸರು, ಮೈಸೂರು ದೊರೆಗಳು ಹೀಗೆ ಸಾಲು ಸಾಲು ಕನ್ನಡ ರಾಜಮನೆತನಗಳು ನಾಡು ನುಡಿ ಕಟ್ಟಿವೆ. ಚಾಲುಕ್ಯರ ಸೇನೆಯು ‘ಕರ್ಣಾಟ ಬಲ’ ಎನಿಸಿಕೊಂಡಿದ್ದು ವೈರಿ ಪಕ್ಷದವರಿಗೆ ಎದೆ ನಡುಗಿಸಿರಲು ಸಾಕು. ವಿಜಯನಗರ ಅರಸರ ಕಾಲದವರೆಗೆ ಕನ್ನಡದಲ್ಲಿಯೇ ಈ ಮನೆತನಗಳು ಆಡಳಿತ ನಡೆಸಿದ್ದೂ ಪ್ರಶಂಸನೀಯವೇ.

ಕನ್ನಡ ನಾಡು ಕಾಲದುದ್ದಕ್ಕೂ ಅಚಲವಾಗಿ ನೆಲೆಯೂರದೆ, ಅಸ್ಥಿರತೆಯನ್ನು ತನ್ನ ನೆಲದ ಗುಣವಾಗಿಸಿಕೊಂಡಿದೆ. ಬೇರೆ ಬೇರೆ ರಾಜರು, ಆಡಳಿತಗಾರರ ಹಿಡಿತದಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ನಾಡು ತನ್ನ ಭಾಷಿಕ ಹಾಗೂ ಸಾಂಸ್ಕೃತಿಕ ಅನನ್ಯತೆಯ ಕಾರಣಕ್ಕಾಗಿ ಒಂದಾಗಬೇಕಾದ ಅನಿವಾರ್ಯತೆಯನ್ನು ಮನಗಂಡಿದ್ದು ನಮ್ಮ ಹಿರಿಯರು. ಬಹುಶಃ ಕನ್ನಡ ಚಳವಳಿಯ ಪ್ರಖರ ರೂಪ ಕಂಡುಬಂದಿದ್ದು ಈ ಕಾಲಘಟ್ಟದಲ್ಲಿಯೇ. ಡೆಪ್ಯೂಟಿ ಚನ್ನಬಸಪ್ಪನವರ ಕಾಣ್ಕೆ, ಆಲೂರರ ಪರಿಶ್ರಮ, ಕುವೆಂಪು, ಶ್ರೀ, ಕೃಷ್ಣಶಾಸ್ತ್ರಿಯವರ ಕನ್ನಡ ಪರ ನಿಲುವು, ಹರ್ಡೀಕರ್, ದಿವಾಕರ್‌ರಂಥವರ ಕನ್ನಡತ್ವದ ರಾಜಕಾರಣ ಈ ಎಲ್ಲಾ ಅಂಶಗಳೂ ಸ್ವಾತಂತ್ರ್ಯ ಪೂರ್ವದಲ್ಲಿ 20 ಆಡಳಿತದಲ್ಲಿ ಹಂಚಿಹೋಗಿ 1947ರ ಸಂದರ್ಭ ದಲ್ಲಿನ ಆಡಳಿತಕ್ಕೆ ಒಳಪಟ್ಟು, 1956ರಲ್ಲಿ ಅಖಂಡತ್ವವನ್ನು ಪಡೆದದ್ದು ಇತಿಹಾಸ. ಆರಂಭದಲ್ಲಿ ಮೈಸೂರಾಗಿ, 1973ರಲ್ಲಿ ಕರ್ನಾಟಕವಾಗಿದ್ದು ವೈಶಿಷ್ಟ್ಯಪೂರ್ಣ.

ಕರ್ನಾಟಕ ಅಖಂಡವಾಯಿತೇನೋ ಸರಿ. ಆದರೆ ನೆಲ, ನೀರು, ಗಡಿ, ಭಾಷೆ, ಉದ್ಯೋಗ, ವಲಸಿಗರ ಸಮಸ್ಯೆ, ಹಿಂದುಳಿದ ಪ್ರದೇಶಗಳು, ಪ್ರಾದೇಶಿಕ ತಾರತಮ್ಯ ಹೀಗೆ ನಮ್ಮ ಮುಂದೆ ಚಳವಳಿಗೆ ಆಹಾರವಾಗುವ ಸಮಸ್ಯೆಗಳ ಸಾಲುಗಳೇ ದೊಡ್ಡದಿವೆ. ಇವುಗಳ ಪರಿಹಾರಾರ್ಥವಾಗಿ ಮಹಾಜನ ಆಯೋಗ, ಗೋಕಾಕ್ ವರದಿ, ಮಹಿಷಿ ವರದಿ, ನಂಜುಂಡಪ್ಪವರದಿ, ಬಚಾವತ್ ಆಯೋಗ, ಕಾವೇರಿ ನದಿನೀರಿನ ಸಮಸ್ಯೆಗೆ ಸಂಬಂಧಿಸಿದ ಚಳವಳಿಗಳು ರೂಪುಗೊಂಡವು. ಕನ್ನಡತ್ವದ ಉಳಿವಿಗಾಗಿ ರೂಪುಗೊಂಡ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡು ಅಭಿವೃದ್ಧಿ ಕೇಂದ್ರಗಳು, ಕನ್ನಡ ಪುಸ್ತಕ ಪ್ರಾಧಿಕಾರದಂಥವುಗಳು ಚಳವಳಿಗಳ ಸಾಂಸ್ಥಿಕ ರೂಪಗಳಾದವು.

ಇತ್ತೀಚೆಗೆ ನಮ್ಮ ಮಹಾನಗರಗಳಲ್ಲಿ ಪರಭಾಷಿಕರ ಕಾರಣ ಕನ್ನಡತನದ ನಾಶ, ಭಾಷಿಕ ಸಮಸ್ಯೆಗಳು, ಆಡಳಿತದಲ್ಲಿ ಕನ್ನಡದ ಅಸಮರ್ಪಕ ಅನುಷ್ಠಾನದ ತೊಂದರೆಗಳನ್ನು ಮುಂದೆ ಮಾಡಿ ಕನ್ನಡಪರ ಸಂಘಟನೆಗಳು ವ್ಯಾಪಕ ಚಳವಳಿಯನ್ನು ನಡೆಸುವುದು ಅಭಿನಂದನೀಯವೇ. ಕನ್ನಡತ್ವವನ್ನು ಉಸಿರಾಗಿಸಿಕೊಂಡು ಸದಾ ನಮ್ಮನ್ನು ಎಚ್ಚರಿಸುವ ಆಟೊ ಚಾಲಕರಂಥ ಶ್ರಮಿಕ ವರ್ಗದವರೂ ಕನ್ನಡ ಚಳವಳಿಯನ್ನು ಜೀವಂತವಾಗಿರಿಸಿದ್ದಾರೆ. 

ಬಹುಶಃ ಇತಿಹಾಸದ ಅಸ್ತಿತ್ವ ಅದರ ಮಿತಿಗಳಲ್ಲಿದೆ. ಅಂದರೆ ಘಟಿಸುವ ಘಟನೆಗಳೆಲ್ಲವೂ ಪೂರ್ಣತೆಯಲ್ಲಿಯೇ ಪರ್ಯಾವಸಾನವಾಗದೆ ನಿರಂತರ ಬದಲಾವಣೆಗೆ ತೆರೆದುಕೊಳ್ಳುತ್ತವೆ. ಹಾಗೆಯೇ ಕನ್ನಡ ಸಂದರ್ಭದ ಚಳವಳಿಗಳೂ ಬೇರೆ ಬೇರೆ ಸಂದರ್ಭ, ಸನ್ನಿವೇಶಗಳಲ್ಲಿ ಮೈದಳೆಯುತ್ತ, ಎಲ್ಲರನ್ನೂ ಎಚ್ಚರಿಸುತ್ತ, ತನ್ಮೂಲಕ ಕನ್ನಡತ್ವದ ನಿರಂತರತೆಯನ್ನು ಕಾಪಿಡುವ ಹೊಣೆಗಾರಿಕೆಯನ್ನು ಫಲಪ್ರದವಾಗಿಯೇ ವಹಿಸಿಕೊಂಡಿವೆ.

share
ಸಂತೋಷಕುಮಾರ್ ಎಚ್., ಸೊರಬ
ಸಂತೋಷಕುಮಾರ್ ಎಚ್., ಸೊರಬ
Next Story
X