ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ದುರಸ್ತಿಗೊಂಡ ಮೊರ್ಬಿಯ ಸರಕಾರಿ ಆಸ್ಪತ್ರೆ
ಪ್ರಧಾನಿ ‘ಫೋಟೊಶೂಟ್’ ಗೆ ಯಾವುದೇ ಲೋಪವಾಗದಂತೆ ಸ್ವಚ್ಛತಾ ಕಾರ್ಯ: ಕಾಂಗ್ರೆಸ್, ಆಪ್ ಟೀಕೆ

ಮೊರ್ಬಿ(ಗುಜರಾತ್): 134 ಮಂದಿ ಸಾವಿಗೆ ಕಾರಣವಾದ ಬೃಹತ್ ಸೇತುವೆ ಕುಸಿತದ ದುರಂತದಲ್ಲಿ ಬದುಕುಳಿದವರನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭೇಟಿ ನೀಡುವ ಮುನ್ನ ಗುಜರಾತ್‌ನ ಮೊರ್ಬಿಯ ಸರಕಾರಿ ಆಸ್ಪತ್ರೆಯನ್ನು ರಾತ್ರಿಯಿಡೀ ಸ್ವಚ್ಛಗೊಳಿಸಿ ದುರಸ್ತಿಗೊಳಿಸಲಾಗಿದ್ದು, ಬಿಜೆಪಿಯ ಈ ಕ್ರಮವು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ.
ಮಚ್ಚು ನದಿಗೆ ಅಡ್ಡಲಾಗಿರುವ ಕೇಬಲ್ ತೂಗು ಸೇತುವೆಯ ಭೀಕರ ಕುಸಿತದ ನಂತರ ಪ್ರಧಾನಿ ಇಂದು ಬೆಳಿಗ್ಗೆ ಮೊರ್ಬಿಗೆ ಭೇಟಿ ನೀಡಲಿದ್ದಾರೆ. ಮೃತಪಟ್ಟ 134 ಜನರಲ್ಲಿ 47 ಮಕ್ಕಳು ಸೇರಿದ್ದಾರೆ. 100 ಕ್ಕೂ ಹೆಚ್ಚು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರಲ್ಲಿ ಹಲವರು ಮೊರ್ಬಿ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
NDTV ತಂಡವು ನಿನ್ನೆ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದಾಗ ಪ್ರಧಾನ ಮಂತ್ರಿಯವರ ಭೇಟಿಗೆ ಕೆಲವೇ ಗಂಟೆಗಳ ಮೊದಲು ಮಧ್ಯರಾತ್ರಿಯ ನಂತರ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತಿರುವುದು ಕಂಡುಹಿಡಿದಿದೆ.
ಕೆಲವು ಗೋಡೆಗಳು ಹಾಗೂ ಚಾವಣಿಯ ಭಾಗಗಳನ್ನು ಹೊಸದಾಗಿ ಬಣ್ಣಬಳಿಯಲಾಗಿದೆ ಮತ್ತು ಹೊಸ ವಾಟರ್ ಕೂಲರ್‌ಗಳನ್ನು ತರಲಾಯಿತು. ಸೇತುವೆ ದುರಂತದಲ್ಲಿ ಗಾಯಗೊಂಡ ಸುಮಾರು 13 ಮಂದಿ ದಾಖಲಾಗಿರುವ ಎರಡು ವಾರ್ಡ್‌ಗಳಲ್ಲಿನ ಬೆಡ್‌ಶೀಟ್‌ಗಳನ್ನು ತ್ವರಿತವಾಗಿ ಬದಲಾಯಿಸಲಾಗಿದೆ. ತಡರಾತ್ರಿ ಅನೇಕ ಜನರು ಆವರಣವನ್ನು ಗುಡಿಸುತ್ತಿರುವುದು ಕಂಡುಬಂದಿತು. ಬೃಹತ್ ಶುಚೀಕರಣದ ದಿಂದಾಗಿ ಹಳೆಯ ವಾಟರ್ ಕೂಲರ್‌ಗಳು ಹಾಗೂ ಹಾನಿಗೊಳಗಾದ ಗೋಡೆಗಳು ಮತ್ತು ಸೀಲಿಂಗ್ ಹೊಸ ರೂಪ ಪಡೆದಿವೆ..
ಉನ್ನತ ಸರಕಾರಿ ಅಧಿಕಾರಿಗಳು ಭೇಟಿ ನೀಡುವ ಮೊದಲು ರಸ್ತೆ, ಕಟ್ಟಡವನ್ನು ಸ್ವಚ್ಛಗೊಳಿಸುವುದು ಹೊಸತೇನಲ್ಲ. ಆದರೆ ಗುಜರಾತ್ ಆಸ್ಪತ್ರೆಯಲ್ಲಿ ನಡೆದ ಈ ಕೆಲಸ ಟೀಕೆಗೆ ಗುರಿಯಾಗಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ (ಎಎಪಿ) ಪ್ರಧಾನಿಯವರಿಗೆ "ಫೋಟೋಶೂಟ್" ಅನ್ನು ಖಚಿತಪಡಿಸಿಕೊಳ್ಳಲು "ಈವೆಂಟ್ ಮ್ಯಾನೇಜ್‌ಮೆಂಟ್" ನಲ್ಲಿ ಬಿಜೆಪಿಯು ನಿರತವಾಗಿದೆ ಎಂದು ಆರೋಪಿಸಿವೆ.
ನಾಳೆ ಪ್ರಧಾನಿ ಮೋದಿ ಅವರು ಮೊರ್ಬಿಯ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮೊದಲು , ಪೇಂಟಿಂಗ್ ಹಾಕಲಾಗುತ್ತಿದೆ, ಹೊಳೆಯುವ ಟೈಲ್ಸ್ ಹಾಕಲಾಗುತ್ತಿದೆ. ಪ್ರಧಾನಿಯವರ ಚಿತ್ರಗಳಲ್ಲಿ ಯಾವುದೇ ಲೋಪವಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಅವರಿಗೆ ನಾಚಿಕೆ ಇಲ್ಲ, ಅನೇಕ ಜನರು ಸಾವನ್ನಪ್ಪಿದ್ದಾರೆ ಹಾಗೂ ಅವರು ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ನಿರತರಾಗಿದ್ದಾರೆ ಎಂದು ಕಾಂಗ್ರೆಸ್ ಹಿಂದಿಯಲ್ಲಿ ಟ್ವೀಟಿಸಿದೆ.
ಈ ವರ್ಷದ ಗುಜರಾತ್ ಚುನಾವಣೆಯಲ್ಲಿ ಪ್ರಮುಖ ಪಕ್ಷವಾಗಿ ಹೊರಹೊಮ್ಮಲು ಶ್ರಮಿಸುತ್ತಿರುವ ಆಮ್ ಆದ್ಮಿ ಪಕ್ಷ (ಎಎಪಿ), ಆಸ್ಪತ್ರೆಯ ನವೀಕರಣದ ಚಿತ್ರಗಳನ್ನು ಟ್ವೀಟ್ ಮಾಡಿದೆ. "ಮೊರ್ಬಿ ಸಿವಿಲ್ ಆಸ್ಪತ್ರೆಯಲ್ಲಿನ ದೃಶ್ಯಗಳು. ನಾಳೆ ಪ್ರಧಾನಿಯವರ ಫೋಟೋಶೂಟ್‌ನಲ್ಲಿ ಯಾವುದೇ ಲೋಪವಾಗದಂತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಕಳೆದ 27 ವರ್ಷಗಳಲ್ಲಿ ಬಿಜೆಪಿ ಕೆಲಸ ಮಾಡಿದ್ದರೆ, ಮಧ್ಯರಾತ್ರಿಯಲ್ಲಿ ಆಸ್ಪತ್ರೆಯನ್ನು ಅಲಂಕರಿಸುವ ಅಗತ್ಯವಿರಲಿಲ್ಲ" ಎಂದು ಆಪ್ ಟ್ವೀಟಿಸಿದೆ.
त्रासदी का इवेंट
— Congress (@INCIndia) October 31, 2022
कल PM मोदी मोरबी के सिविल अस्पताल जाएंगे। उससे पहले वहां रंगाई-पुताई का काम चल रहा है। चमचमाती टाइल्स लगाई जा रही हैं।
PM मोदी की तस्वीर में कोई कमी न रहे, इसका सारा प्रबंध हो रहा है।
इन्हें शर्म नहीं आती! इतने लोग मर गए और ये इवेंटबाजी में लगे हैं। pic.twitter.com/MHYAUsfaoC
Morbi Civil Hospital का दृश्य...
— AAP (@AamAadmiParty) October 31, 2022
कल प्रधानमंत्री के Photoshoot में कोई कमी ना रह जाए इसलिए अस्पताल की मरम्मत की जा रही है।
अगर भाजपा ने 27 वर्षों में काम किया होता तो आधी रात को अस्पताल को चमकाने की जरूरत न पड़ती।#BJPCheatsGujarat pic.twitter.com/h83iUmPzKA







