Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕನ್ನಡ ಭಾಷೆಯ ಸುತ್ತಮುತ್ತ...

ಕನ್ನಡ ಭಾಷೆಯ ಸುತ್ತಮುತ್ತ...

ರಮೇಶ್ ಸಂಕ್ರಾಂತಿ, ಬೆಂಗಳೂರುರಮೇಶ್ ಸಂಕ್ರಾಂತಿ, ಬೆಂಗಳೂರು1 Nov 2022 11:22 AM IST
share
ಕನ್ನಡ ಭಾಷೆಯ ಸುತ್ತಮುತ್ತ...

ದೇಶ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನಂತರ, ಭಾಷಾವಾರು ಪ್ರಾಂತಗಳ ರಚನೆಯಾಗಬೇಕು ಎನ್ನುವ ಕೂಗು ತೀವ್ರವಾಯಿತು. ಕನ್ನಡ ಭಾಷೆಯನ್ನು ಮಾತನಾಡುವ ಜನರು ವಾಸಿಸುವ ಪ್ರದೇಶಗಳು ಒಗ್ಗೂಡಿಸಬೇಕು, ಕನ್ನಡ ನೆಲವನ್ನು ಕನ್ನಡಿಗರೇ ಆಳಬೇಕು ಎನ್ನುವ ಧ್ವನಿ ಪ್ರಬಲವಾಯಿತು. ಈ ಧ್ವನಿ ಚಳವಳಿಯ ರೂಪ ಪಡೆಯಿತು. ಈ ಹೋರಾಟದಲ್ಲಿ 83 ಜನ ತಮ್ಮ ಅಮೂಲ್ಯವಾದ ಪ್ರಾಣಗಳನ್ನು ಬಲಿದಾನ ನೀಡಿದರು. ಇವರ ತ್ಯಾಗ ಬಲಿದಾನದ ಫಲವಾಗಿ, 1956 ನವೆಂಬರ್ 1ರಂದು ಕನ್ನಡ ನಾಡು ಏಕೀಕರಣವಾಯಿತು. ಕನ್ನಡ ಭಾಷಿಕರು ವಾಸಮಾಡುವ ಪ್ರದೇಶಗಳನ್ನು ತರಾತುರಿಯಲ್ಲಿ ಒಗ್ಗೂಡಿಸಿ ಮೈಸೂರು ರಾಜ್ಯ ಎಂದು ನಾಮಕರಣ ಮಾಡಲಾಯಿತು.

ಮೈಸೂರು ಎನ್ನುವುದು ಸಹ ಐತಿಹಾಸಿಕವಾದ ಪ್ರಾಚೀನ ಹೆಸರೇ ಆಗಿತ್ತು. ಆ ಪ್ರಾಚೀನತೆ ಏನೆಂದರೆ, ಕ್ರಿ. ಪೂ. 150ಕ್ಕೂ ಹಿಂದೆ, ಈ ಭೂ ಪ್ರದೇಶವನ್ನು ಮಹಿಷ ಮಂಡಲ ಎಂದು ಕರೆಯುತ್ತಿದ್ದರು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ಮಹಿಷ ಮಂಡಲ, ಮಹಿಷನೂರು ನಂತರದಲ್ಲಿ ಮೈಸೂರು ಆಗಿತ್ತು.

ಮೈಸೂರು ಎಂದು ನಾಮಕರಣವಾದ ನಂತರ, ಮೈಸೂರು ಎನ್ನುವ ನಗರದ ಹೆಸರನ್ನು ರಾಜ್ಯಕ್ಕೆ ಅನ್ವಯಿಸುವುದು ಸೂಕ್ತವಲ್ಲ ಎಂದು ಕೆಲವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇದರ ಪರಿಣಾಮವಾಗಿ ಮತ್ತೆ ಈ ಭೂ ಪ್ರದೇಶಕ್ಕೆ ಸೂಕ್ತವಾದ ಹೆಸರಿನ ಅನ್ವೇಷಣೆಯಲ್ಲಿ ತೊಡಗಿದರು. ಈ ಸಂಬಂಧವಾಗಿ ತಮಿಳಿನ ಪ್ರಾಚೀನ ಕಾವ್ಯಗಳಲ್ಲಿ ಒಂದಾದ ತಿರುಕುರಳ್ ಎಂಬ ಕಾವ್ಯದಲ್ಲಿ, ಈ ಭೂ ಪ್ರದೇಶವನ್ನು ಕರಿ ನಾಡ್, ಕರಿ ನಾಡಿಗರ್ ಎಂದು ಉಲ್ಲೇಖಿಸಲಾಗಿರುವುದು ಕಂಡು ಬಂತು.

ಕೆಲವು ಸಂಶೋಧಕರು, ಈ ಶಬ್ದವನ್ನು ಕರು ನಾಡಿಗರ್, ಕರುಣೆ ಉಳ್ಳ ನಾಡಿನ ಜನ ಎಂದು ತಪ್ಪಾಗಿ ಅರ್ಥೈಸುವ ಮೂಲಕ, ಜನರನ್ನು ಮತ್ತೆ ದಿಕ್ಕು ತಪ್ಪಿಸಿದ್ದೂ ಉಂಟು.

ಕರಿ ನಾಡ್ = ಕರಿ ನಾಟ್, ಆಗಿ. ಕರ್ ನಾಟ್ ನಂತರ ಕರ್ನಾಟಕವಾಯಿತು.

ಕರಿ ಎಂದರೆ = ಎತ್ತರವಾದ, ನಾಡ್ ಎಂದರೆ = ಪ್ರದೇಶ

 ಕರಿ + ನಾಟ್ ಎಂದರೆ, ಎತ್ತರವಾಗಿರುವ ಪ್ರದೇಶ ಎಂದು ಅರ್ಥ. ಆನೆ, ಎತ್ತರವಾಗಿ ಇರುವುದರಿಂದ ಆನೆಯನ್ನು ಕರಿ ಎಂದು ಹೇಳುವುದಿದೆ. ಕರಿ ಮಲೆ, ಕರಿ ಗಿರಿ ಎನ್ನುವ ಹೆಸರುಗಳನ್ನು ನಾವು ಬಳಸುತ್ತಾ ಇರುತ್ತೇವೆ. ನಾವು ವಾಸಿಸುವ ಭೂ ಪ್ರದೇಶ, ತಮಿಳುನಾಡಿಗೆ ಎತ್ತರದಲ್ಲಿ ಇರುವುದರಿಂದ ಇದನ್ನು ಕರಿ ನಾಡು ಎಂದು ಉಲ್ಲೇಖಿಸಲಾಗಿದೆ. ಈ ಎಲ್ಲಾ ಹಿನ್ನೆಲೆಯನ್ನು ಪರಿಶೀಲಿಸಿ ಈ ಪ್ರದೇಶದ ಹೆಸರನ್ನು ಕರ್ನಾಟಕ ಎಂದು 1973ರಲ್ಲಿ ಮರು ನಾಮಕರಣ ಮಾಡಲಾಯಿತು.

ಭೌಗೋಳಿಕವಾಗಿ ನಾಡಿಗೆ ಇಟ್ಟ ಹೆಸರಿನ ವಿಚಾರದಲ್ಲಿ ಬಹುತೇಕ ಗೆಲುವು ಸಿಕ್ಕಿದೆ ಎಂದು ಭಾವಿಸೋಣ.

ಇನ್ನು ಭಾಷೆಯ ಉಗಮದ ವಿಷಯಕ್ಕೆ ಬಂದರೆ, ಕನ್ನಡ ಸ್ವತಂತ್ರವಾಗಿ ಹುಟ್ಟಿಕೊಂಡ ಭಾಷೆಯಲ್ಲ. ಯಾವುದೇ ಒಂದು ಭಾಷೆ ಏಕಾಏಕಿ ದುತ್ತೆಂದು ಹುಟ್ಟಿಕೊಳ್ಳಲು ಸಾಧ್ಯವೂ ಇಲ್ಲ. ಅಲ್ಲದೆ ಕನ್ನಡ ಭಾಷೆಯು ಸಂಸ್ಕೃತ ಭಾಷೆಯಿಂದ ಹುಟ್ಟಿದ ಭಾಷೆಯೂ ಅಲ್ಲ ಎನ್ನುವುದು ಸಾಬೀತಾಗಿದೆ.

ಇನ್ನೂ ಮುಂದುವರಿದು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಹಾಗೂ ಇತರ ಮೂವತ್ತ್ತು ಭಾಷೆಗಳು ಡ್ರಾವಿಡ ಭಾಷೆಯಿಂದ ಕವಲೊಡೆದ ಭಾಷೆಗಳು ಎನ್ನುವುದನ್ನು ಭಾಷಾ ವಿದ್ವಾಂಸರು ಈಗಾಗಲೇ ಒಮ್ಮತದಿಂದ ಒಪ್ಪಿಕೊಂಡಿರುವ ವಿಚಾರ. ಹಾಗಾದರೆ ದ್ರಾವಿಡ ಭಾಷೆ ಎಂದರೆ ಯಾವುದು ಎನ್ನುವ ಬಗ್ಗೆ ಗಮನ ಹರಿಸೋಣ.

ಭರತ ಖಂಡದಲ್ಲಿ ಉಚ್ಛ್ರಾಯ ಸ್ಥಿತಿ ತಲುಪಿದ್ದ ಸಿಂಧೂ ನಾಗರಿಕತೆಯ ಹರಪ್ಪಾ, ಮೊಹೆಂಜೋದಾರೂ ನಗರಗಳು ನಾಶವಾದ ನಂತರ, ಅಲ್ಲಿ ಬದುಕುಳಿದ ಜನ ದಕ್ಷಿಣಕ್ಕೆ ವಲಸೆ ಬಂದರು. ಈ ಜನರು ಬಳಸುತ್ತಿದ್ದ ಭಾಷೆಯೇ ದ್ರಾವಿಡ ಭಾಷೆ ಎನ್ನುವ ವಾದವೂ ಇದೆ.

 ದ್ರಾವಿಡ ಭಾಷೆಯು ಕಾಲಾನುಕ್ರಮದಲ್ಲಿ ದ್ರಾವಿಡ, ದ್ರಾಮಿಳ, ತಮಿಳ ಎಂದಾಯಿತು ಎನ್ನುವ ವಾದಗಳೂ ಇವೆ. ಪಾಲಿ ಮತ್ತು ದ್ರಾವಿಡ ಭಾಷೆಗಳು, ಪ್ರಾಂತವಾರು ಕೆಲವು ಸಣ್ಣ-ಪುಟ್ಟ ವ್ಯತ್ಯಾಸಗಳೊಂದಿಗೆ ಎರಡೂ ಒಂದೇ ಎಂದು ವಾದಿಸುವವರೂ ಇದ್ದಾರೆ.

 ಸಾಮ್ರಾಟ ಅಶೋಕನ ಶಾಸನಗಳಲ್ಲಿ ಬಳಸಲಾಗಿರುವ ಲಿಪಿಯನ್ನು ಬ್ರಾಹ್ಮಿ ಲಿಪಿ ಎಂದೂ, ಬಳಸಿರುವ ಭಾಷೆಯನ್ನು ದೇವನಾಗರಿ ಭಾಷೆ ಎಂದೂ ನಂಬಿಸಲಾಗಿತ್ತು. ಡಾಕ್ಟರ್ ಪರಮ್ ಆನಂದ್ ಎನ್ನುವ ಸಂಶೋಧಕರು ತಮ್ಮ ಪಿಹೆಚ್.ಡಿ. ಪ್ರಬಂಧದಲ್ಲಿ ಅಶೋಕನ ಶಿಲಾ ಶಾಸನದಲ್ಲಿ ಬಳಸಿರುವ ಲಿಪಿಯನ್ನು ಪಾಲಿ ಲಿಪಿ ಎಂದೂ, ಭಾಷೆಯನ್ನು ಪಾಲಿ ಭಾಷೆ ಎಂದೂ ವಾದ ಮಂಡಿಸಿದ್ದಾರೆ.

 ಅಶೋಕನ ಆಳ್ವಿಕೆಯ ಪ್ರದೇಶದಲ್ಲಿನ ಜನರಾಡುತ್ತಿದ್ದ ಪಾಲಿ ಭಾಷೆಯಲ್ಲಿ ತನ್ನ ಆದೇಶಗಳನ್ನು ಶಾಸನ ರೂಪದಲ್ಲಿ ಬಂಡೆಗಳ ಮೇಲೆ ಕೆತ್ತಿಸುತ್ತಿದ್ದರು ಎನ್ನುವುದನ್ನು ನಾವೆಲ್ಲರೂ ಓದಿದ್ದೇವೆ. ಮಹಿಷ ಮಂಡಲವೂ ಅಶೋಕನ ಆಳ್ವಿಕೆಯ ಭಾಗವಾಗಿತ್ತು. ಮಹಿಷ ಮಂಡಲ ಮತ್ತು ಅಶೋಕ ಚಕ್ರವರ್ತಿಯ ಸಂಬಂಧ ಯಾವ ಮಟ್ಟಕ್ಕೆ ಇತ್ತು ಎಂದರೆ, ಮಹಿಷ ಮಂಡಲಕ್ಕೆ ಬೌದ್ಧ ದಮ್ಮ ಪ್ರಚಾರಕ್ಕೆ ಅರಹಂತ ಮಹಾದೇವ ಥೇರ ಎಂಬ ಬೌದ್ಧ ಬಿಕ್ಕು ಒಬ್ಬರನ್ನು ಕಳುಹಿಸಲಾಗಿತ್ತು ಎಂದು ಸಿಂಹಳ ದ್ವೀಪದಲ್ಲಿ ಲಭ್ಯವಿರುವ ಗೋತಮ ವಂಶ ಮತ್ತು ಮಹಾವಂಸ ಎಂಬ ಗ್ರಂಥದಲ್ಲಿ ಉಲ್ಲೇಖವಿದೆ.

ಹೀಗೆ ಮಹಿಷ ಮಂಡಲಕ್ಕೆ ಬಂದ ಅರಹಂತ ಮಹಾದೇವ ಥೇರ ಎಂಬ ಬೌದ್ಧ ಬಿಕ್ಕುವಿನ ಹೆಸರನ್ನು ಸ್ಥಳೀಯರು ಸ್ಪಷ್ಟವಾಗಿ ಉಚ್ಚರಿಸಲಾಗದೆ, ಕಾಲಾಂತರದಲ್ಲಿ ಅರಹರ ಮಹಾದೇವ ಎಂದು ರೂಢಿಸಿಕೊಂಡರು. ಆನಂತರ ಮಹಾದೇವ ಥೇರರನ್ನು ಮಾದಪ್ಪಸ್ವಾಮಿಯಾಗಿ ಮಾಡಿಕೊಂಡರು ಎಂದು ದಾಖಲೆಗಳು ಹೇಳುತ್ತವೆ. ಸಾಮ್ರಾಟ ಅಶೋಕನು ತನ್ನ ಜೀವನದ ಕಡೆಯ ದಿನಗಳನ್ನು ಗುಲ್ಬರ್ಗ ಹತ್ತಿರ ಇರುವ ಸನ್ನದ್ದಿಯಲ್ಲಿ ಕಳೆದ ಬಗ್ಗೆ ಶಾಸನಗಳು ಲಭ್ಯವಾಗಿವೆ. ಉತ್ತರ ಭಾರತದ ಒಬ್ಬ ಚಕ್ರವರ್ತಿ, ದಕ್ಷಿಣದ ಗುಲ್ಬರ್ಗದೊಂದಿಗೆ ತನ್ನ ಸಂಪರ್ಕವನ್ನು ಇಟ್ಟುಕೊಳ್ಳುತ್ತಾನೆ ಎಂದರೆ, ಅದಕ್ಕೆ ಭಾಷೆ ಪೂರಕವಾಗಿತ್ತು ಎಂದೇ ಅರ್ಥ.

 ರಾಜ ಮಹಾರಾಜರು ಬದಲಾಗಬಹುದು. ರಾಜ್ಯದ ಗಡಿಗಳೂ ಬದಲಾಗಬಹುದು. ಆದರೆ ಭಾಷೆಗಳು ಬದಲಾಗುವುದು ಅಷ್ಟು ಸುಲಭವಲ್ಲ. ಸಾಮ್ರಾಟ ಅಶೋಕನ ಮಗಧ ಸಾಮ್ರಾಜ್ಯದ ಆಡು ಭಾಷೆಯಾಗಿದ್ದ ಪಾಲಿ ಭಾಷೆಯನ್ನು ಮಾಗಧಿ ಎಂದೂ, ಮಗಧ ರಾಜ್ಯದಿಂದ ದೂರದ ಪ್ರದೇಶಗಳಲ್ಲಿ ಚಾಲ್ತಿಯಲ್ಲಿದ್ದ ಭಾಷೆಯನ್ನು ಅರ್ಧ ಮಾಗಧಿ ಎಂದೂ ಪ್ರಾದೇಶಿಕ ವ್ಯತ್ಯಾಸಗಳೊಂದಿಗೆ ಬೇರೆ ಬೇರೆ ಹೆಸರುಗಳಿಂದ ಗುರುತಿಸುತ್ತಿದ್ದರು.

ಉದಾಹರಣೆಗೆ ಮಂಗಳೂರು ಕನ್ನಡ, ಬೆಂಗಳೂರು ಕನ್ನಡ, ಗುಲ್ಬರ್ಗ ಕನ್ನಡ, ಕೋಲಾರ ಕನ್ನಡಗಳಲ್ಲಿ ಇರುವ ವ್ಯತ್ಯಾಸದಂತೆ ಮಾಗಧಿ (ಪಾಲಿ) ಭಾಷೆಯಲ್ಲಿಯೂ ಸಣ್ಣ ಪುಟ್ಟ ವ್ಯತ್ಯಾಸಗಳಿದ್ದವು.

ಬೆಂಗಳೂರಿಗೆ ಹೊಂದಿಕೊಂಡಂತಿರುವ ಮಾಗಡಿ ಪಟ್ಟಣದಲ್ಲಿ ಕ್ರಿಸ್ತ ಪೂರ್ವದಿಂದಲ್ಲೇ ಮಾಗಧಿ ಭಾಷಿಕರಿದ್ದರು. ಆದ್ದರಿಂದ ಮಾಗಧಿಯಿಂದ ಮಾಗಡಿ ಎನ್ನುವ ಹೆಸರು ಬಂದಿದೆ ಎನ್ನಲಾಗಿದೆ. ಆದರೆ ಕೆಲವು ವಿದ್ವಾಂಸರು ಮಹಾಗಡಿಯಿಂದ ಮಾಗಡಿ ಬಂದಿದೆ ಎನ್ನುವ ವಿತಂಡವಾದವನ್ನು ಮಂಡಿಸಿದ್ದಾರೆ. ಇಂತಹ ವಿತಂಡವಾದವನ್ನು ಪ್ರಶ್ನಿಸುವ ಸಾಹಸಕ್ಕೆ ಯಾವ ಕನ್ನಡಿಗನೂ ಹೋಗಿಲ್ಲ.

 ಕನ್ನಡ, ತಮಿಳು, ತೆಲುಗು, ಮಲಯಾಳಂ ದ್ರಾವಿಡ ಭಾಷೆಯಿಂದ ಹುಟ್ಟಿದವು ಎನ್ನುವುದು ನಿಜವಾದರೆ, ದ್ರಾವಿಡ ಭಾಷೆ, ಪಾಲಿ ಭಾಷೆ. ಮಾಗಧಿ, ಅರ್ಧ ಮಾಗಧಿ ಮತ್ತು ಕನ್ನಡವೂ ಒಂದೇ ಮೂಲದಿಂದ ಬಂದಿವೆ, ಈ ಮೇಲಿನ ಎಲ್ಲಾ ಭಾಷೆಗಳಲ್ಲೂ ಬಳಸುವ ಶಬ್ದಗಳಲ್ಲಿ ಶೇಕಡಾ ಅರವತ್ತಕಿಂತ ಹೆಚ್ಚು ಪರಸ್ಪರ ಸಾಮ್ಯತೆ ಇದೆ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ.

ರೈಸ್ ಡೇವಿಡ್ ಎಂಬ ವಿದ್ವಾಂಸರು ಪಾಲಿ ನಿಘಂಟನ್ನು ರಚಿಸಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ಭಾರತ ಉಪಖಂಡದಲ್ಲಿ ಒಂದು ಸ್ವತಂತ್ರ, ಸಮೃದ್ಧವಾದ ಹಾಗೂ ಪ್ರಾಚೀನ ಭಾಷೆ ಅಸ್ತಿತ್ವದಲ್ಲಿ ಇತ್ತು ಎಂದರೆ, ಅದು ಪಾಲಿ ಭಾಷೆ ಎಂದು ಹೇಳಿದ್ದಾರೆ. ಈ ಪಾಲಿಯ ಶಬ್ದಗಳು ಕನ್ನಡ ಭಾಷೆಯಲ್ಲಿ ಹಾಸುಹೊಕ್ಕಾಗಿವೆ.

ಪಾಲಿ ಭಾಷೆಯು ಈಗಲೂ ಶ್ರೀಲಂಕಾ, ಬರ್ಮಾ, ಬಾಂಗ್ಲಾ, ಜಪಾನ್, ಚೀನಾ, ಮಲೇಶ್ಯ, ಇಂಡೋನೇಶ್ಯ, ಥಾಯ್ಲೆಂಡ್ ಮುಂತಾದ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಭಾಷೆಯಾಗಿದೆ. ಇಷ್ಟು ಪ್ರಾಚೀನ ಹಿನ್ನೆಲೆ ಮತ್ತು ಭದ್ರ ಬೆನ್ನೆಲುಬುಗಳೊಂದಿಗೆ ಉದಯಿಸಿದ ಕನ್ನಡ ಭಾಷೆಗೆ ತನ್ನ ಹುಟ್ಟಿದ ನೆಲದಲ್ಲೇ ಮಾನ್ಯತೆ ಸಿಗುತ್ತಿಲ್ಲ ಎನ್ನುವುದು ದುರಂತದ ಸಂಗತಿ. ಇದಕ್ಕೆ ಇಚ್ಛಾಶಕ್ತಿ ಇಲ್ಲದ ಆಡಳಿತಗಾರರು, ತಿಳುವಳಿಕೆ ಇಲ್ಲದ ನಾಯಕರು. ಮೇಲಾಗಿ ಮೂಲ ಕನ್ನಡ ಭಾಷೆ ಮತ್ತು ಲಿಪಿಯ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ವಿದ್ವಾಂಸರು ಕಾರಣ ಎಂದರೆ ತಪ್ಪಾಗಲಾರದು.

ಗ್ರಹಣ ಹಿಡಿದು ಮಂಕಾಗಿರುವ ಕನ್ನಡ ಭಾಷೆಯು ಮುಂದಿನ ದಿನಗಳಲ್ಲಾದರೂ ಪ್ರಖರಗೂಳ್ಳಲಿ. ಕನ್ನಡ ಭಾಷೆಯ ಬಗ್ಗೆ ಪೂರ್ವಾಗ್ರಹಗಳಿಲ್ಲದ ಸಂಶೋಧನೆಗಳಾಗಲಿ. ಭಾಷಾ ಸಾರ್ವಭೌಮತೆಯ ಇಚ್ಛಾಶಕ್ತಿಯನ್ನು ಉಳಿಸಿ ಪೋಷಿಸಬಲ್ಲ ಪಕ್ಷಗಳು ಹುಟ್ಟಿ ಬರಲಿ ಎಂದು ಹಾರೈಸೋಣ.

share
ರಮೇಶ್ ಸಂಕ್ರಾಂತಿ, ಬೆಂಗಳೂರು
ರಮೇಶ್ ಸಂಕ್ರಾಂತಿ, ಬೆಂಗಳೂರು
Next Story
X