ಬೆಂದೂರಿನ ಸೈಂಟ್ ತೆರೇಸಾ ಸ್ಕೂಲ್ ನಲ್ಲಿ ಕನ್ನಡ ರಾಜ್ಯೋತ್ಸವ

ಬೆಂದೂರು,ನ.1: ಬೆಂದೂರಿನ ಸೈಂಟ್ ತೆರೇಸಾ ಸ್ಕೂಲ್ ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ವೈದ್ಯೆ ಡಾ. ಪ್ರತಿಭಾ ರೈ, ಫೆಡರಲ್ ಬ್ಯಾಂಕ್ ಕಂಕನಾಡಿ ಇದರ ವ್ಯವಸ್ಥಾಪಕ ಪ್ರಮೋದ್ ಪಾಟೀಲ್ ಹಾಗೂ ಶಾಲಾ ಸಂಚಾಲಕ ಶೈಲಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ವೈದ್ಯೆ ಡಾ. ಪ್ರತಿಭಾ ರೈ ಮಾತನಾಡಿ, ಕನ್ನಡವು ಒಂದು ಸುಂದರವಾದ ಭಾಷೆ. ಇದರ ಬಗ್ಗೆ ಪ್ರೀತಿ, ಅಭಿಮಾನವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಶಾಲಾ ಸಂಚಾಲಕಿ ಶೈಲಾ ಮಾತನಾಡಿ, ನಾವೆಲ್ಲರೂ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ, ಗೌರವವನ್ನು ಹೊಂದಿರಬೇಕೆಂದು ತಿಳಿಸಿದರು.
ವಿದ್ಯಾರ್ಥಿನಿ ಶ್ರಾವಣಿ ಕನ್ನಡ ರಾಜ್ಯೋತ್ಸವದ ಮಹತ್ವದ ಬಗ್ಗೆ ತಿಳಿಸಿದರು. ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯ ಮಹತ್ವವನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ಲೂರ್ಡ್ಸ್, ಉಪಪ್ರಾಂಶುಪಾಲ ಕ್ಯಾರನ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







