‘ಬಾಯೋ ಆಮ್ಚೆ ಚೇಡು’ ಚಿತ್ರದ ಟ್ರೈಲರ್ ಆಡಿಯೋ ಬಿಡುಗಡೆ

ಉಡುಪಿ: ಆರ್‌ಎಸ್‌ಬಿ ಕೊಂಕಣಿ ಭಾಷೆಯ ಅದ್ದೂರಿ ಚಲನಚಿತ್ರ ಕಾಮತ್ ಕ್ರಿಯೇಷನ್ಸ್‌ರವರ ಬಾಯೋ ಆಮ್ಚೆ ಚೇಡು ಇದರ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ಅ.30ರಂದು ಮಣಿಪಾಲದ ಭಾರತ್ ಸಿನಿಮಾದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ಶಾಸಕ ಕೆ. ರಘುಪತಿ ಭಟ್ ಉದ್ಘಾಟಿಸಿದರು. ನಂತರ ಚಿತ್ರ ಮಂದಿರದ ಒಳಗೆ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಟ್ರೈಲರ್ ಬಿಡುಗಡೆಗೊಳಿಸಲಾಯಿತು. ಕನ್ನಡ ತುಳು ಚಿತ್ರನಟ ಪೃಥ್ವಿ ಅಂಬಾರ್ ಆಡಿಯೋ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಡಾ.ಜಗದೀಶ್ ಪೈ. ಗೋಕುಲದಾಸ್ ನಾಯಕ್, ಅಶೋಕ್ ನಾಯಕ್ ಹಿರ್ಗಾನ್, ದಕ್ಷಿಣ ಕನ್ನಡ ಪತ್ರಕರ್ತರ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ. ಶ್ರೀಕಾಂತ್ ನಾಯಕ್, ನವೀನ್ ನಾಯಕ್, ರವೀಂದ್ರ ಪ್ರಭು ಕಡಾರಿ, ಮೋಹಿನಿ ಎನ್.ನಾಯಕ್, ಉಷಾ ನಾಯಕ್ ಉಪಸ್ಥಿತರಿದ್ದರು. ನ.೧೩ರಂದು ಮಣಿಪಾಲ ಭಾರತ್ ಸಿನಿಮಾದಲ್ಲಿ ಪ್ರೀಮಿಯರ್ ಪ್ರದರ್ಶನ ನಡೆಯಲಿದೆ.
Next Story





