ಹರೇಕಳ-ಅಡ್ಯಾರ್ ಕಿಂಡಿ ಅಣೆಕಟ್ಟು: ನ.2ರಂದು ಮುಳುಗಡೆ ಭೀತಿ ಪ್ರದೇಶದ ಸಂತ್ರಸ್ತರ ಅಹವಾಲು ಸಭೆ

ಮಂಗಳೂರು, ನ.1: ಹರೇಕಳ ಮತ್ತು ಅಡ್ಯಾರ್ ಗ್ರಾಮಗಳ ಮಧ್ಯೆ ಹಾದುಹೋಗುವ ನೇತ್ರಾವತಿ ನದಿಗೆ ಅಡ್ಡವಾಗಿ ನಿರ್ಮಿಸಲಾಗುವ ‘ಉಪ್ಪು ನೀರು ತಡೆಯುವ ಕಿಂಡಿ ಅಣೆಕಟ್ಟು’ವಿನಲ್ಲಿ ನಿಗದಿತ ಪ್ರಮಾಣದಲ್ಲಿ ನೀರು ಸಂಗ್ರಹಿಸಿದರೆ ಮುಳುಗಡೆ ಭೀತಿ ಎದುರಿಸುವ ಹರೇಕಳ, ಪಾವೂರು, ಬೋಳಿಯಾರ್ ಗ್ರಾಮಗಳ ಸಂತ್ರಸ್ತರ ಅಹವಾಲು ಸಭೆಯು ನ.2ರಂದು ಸಂಜೆ 4ಕ್ಕೆ ಪಾವೂರು ಗ್ರಾಮದ ಇನೋಳಿ ಕಂಬಳಪದವಿನ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
ಕಿಂಡಿಅಣೆಕಟ್ಟಿನಲ್ಲಿ 3 ಮೀ. ನೀರು ಸಂಗ್ರಹಿಸಿದರೆ ಆಸುಪಾಸಿನ ಐದು ಗ್ರಾಮಗಳ ನದಿತೀರದ ಕೃಷಿ ಸಮೇತ ಜಮೀನು ಮುಳುಗಡೆಯಾಗಲಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ‘ವಾರ್ತಾಭಾರತಿ’ಯು ವಿಸ್ತೃತ ವರದಿ ಮಾಡಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶಾಸಕ ಯು.ಟಿ.ಖಾದರ್ ಮುಳುಗಡೆ ಭೀತಿ ಎದುರಿಸುವ ಪ್ರದೇಶದ ಜನರ ಅಹವಾಲು ಆಲಿಸುವುದಾಗಿ ಪ್ರತಿಕ್ರಿಯಿಸಿದ್ದರು. ಅದರಂತೆ ನ.2ರಂದು ಇನೋಳಿ ಕಂಬಳಪದವು ಸರಕಾರಿ ಪ್ರೌಢಶಾಲೆಯಲ್ಲಿ ಅಹವಾಲು ಸಭೆ ನಡೆಯುವ ಬಗ್ಗೆ ಸಂತ್ರಸ್ತರು ಮಾಹಿತಿ ನೀಡಿದ್ದಾರೆ.