ವಿಟ್ಲ ರೇಂಜ್ 'ಪ್ರತಿಭಾ ಸಂಗಮ': ಉಕ್ಕುಡದ ನೂರುಲ್ ಹುದಾ ಮದ್ರಸಕ್ಕೆ ಸತತ ಎರಡನೇ ಬಾರಿ ಪ್ರಶಸ್ತಿ

ವಿಟ್ಲ, ನ.2: ಎಸ್.ಜೆ.ಎಂ., ಎಸ್.ಎಂ.ಎ. ಕರ್ನಾಟಕ ವತಿಯಿಂದ ನಡೆದ ಪ್ರಸಕ್ತ ಸಾಲಿನ ವಿಟ್ಲ ರೇಂಜ್ ಮಟ್ಟದ 'ಪ್ರತಿಭಾ ಸಂಗಮ' ಮದ್ರಸ ವಿದ್ಯಾರ್ಥಿಗಳ ಪ್ರತಿಭೋತ್ಸವವು ಪೆರುವಾಯಿ ಬದ್ರಿಯ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಇದರಲ್ಲಿ ಉಕ್ಕುಡದ ನೂರುಲ್ ಹುದಾ ಮದ್ರಸ 411 ಅಂಕಗಳೊಂದಿಗೆ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಮಂಗಳಪದವು ಮದ್ರಸ ವಿದ್ಯಾರ್ಥಿಗಳು ದ್ವಿತೀಯ ಮತ್ತು ಒಕ್ಕೆತ್ತೂರು ತೃತೀಯ ಸ್ಥಾನವನ್ನು ಪಡೆದರು.
ಚಾಂಪಿಯನ್ ಪಟ್ಟ ಪಡೆದ ಉಕ್ಕುಡ ವಿದ್ಯಾರ್ಥಿಗಳಿಗೆ ಜಮಾಅತ್ ಬಾಂಧವರು ಮಸೀದಿ ವಠಾರದಲ್ಲಿ ಮುದರ್ರಿಸ್ ಹಾಫಿಳ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಧ್ಯಕ್ಷತೆಯಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಜಮಾಅತ್ ಕಮಿಟಿ ಅಧ್ಯಕ್ಷ T.H.M.A. ಅಬ್ಬಾಸ್ ಹಾಜಿ, ಪ್ರಧಾನ ಕಾರ್ಯದರ್ಶಿ U.ಶರೀಫ್ ತ್ವಯಿಬಾ, ಮದ್ರಸ ಮುಖ್ಯ ಶಿಕ್ಷಕ ಹಮೀದ್ ಮದನಿ ಕಾನತ್ತಡ್ಕ, ಯಾಸೀನ್ ಸಅದಿ ವಿಟ್ಲ, ಅಬ್ದುಲ್ ಖಾದರ್ ಝುಹ್ರಿ ಅಳಕೆಮಜಲು, ಅಲ್ ನೂರ್ ರಶೀದ್ ವಿಟ್ಲ, ರಶೀದ್ ದರ್ಬೆ, ಅಬೂಬಕರ್ ಮಿಹ್ರಾಜ್, ಇಕ್ಬಾಲ್ ಉಕ್ಕುಡ, T.H.M.A.ಹಮೀದ್ ,T.H.M.A.ಅನ್ವರ್, ಉಮರ್, ನೂರುದ್ದೀನ್ ಹಾಗೂ ಬದ್ರಿಯ ಜುಮಾ ಮಸೀದಿ ಉಕ್ಕುಡ, ಜಲಾಲಿಯ್ಯ ಕಮಿಟಿ, ಮುರ್ಶಿದುಲ್ ಅನಾಂ ಸ್ವಲಾತ್ ಕಮಿಟಿ, ಹಿದಾಯ ಫ್ರೆಂಡ್ಸ್ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ವಿಜಯೋತ್ಸವದ ಅಂಗವಾಗಿ ಜಮಾಅತರು, ಮುಹಿಸ್ಸುನ್ನ ದರ್ಸ್ ವಿದ್ಯಾರ್ಥಿಗಳು ದರ್ಬೆ, ಕಾನತ್ತಡ್ಕ, ಅಲಂಗಾರು ಮಾರ್ಗವಾಗಿ ವಾಹನ ಜಾಥಾವನ್ನು ನಡೆಸಿದರು.