ಬಂಟ್ವಾಳ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಬಂಟ್ವಾಳ, ನ.2: ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳು ಕಪಾಟಿನಲ್ಲಿರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ಬಿ.ಸಿ.ರೋಡಿನ ಚಿಕ್ಕಯ್ಯ ಮಠದಲ್ಲಿ ಮಂಗಳವಾರ ನಡೆದಿದೆ.
ಚಿಕ್ಕಯ್ಯಮಠ ನಿವಾಸಿ ಸತೀಶ್ ಎಂಬವರ ಮನೆಯಲ್ಲಿ ಈ ಕಳವು ಘಟನೆ ನಡೆದಿದೆ.
ಮನೆಯ ಬಾಗಿಲಿನ ಚಿಲಕ ಮುರಿದು ಒಳಗೆ ನುಗ್ಗಿ ಕಪಾಟಿನಲ್ಲಿದ್ದ ಸುಮಾರು 4.60 ರೂ. ಮೌಲ್ಯದ ಚಿನ್ನವನ್ನು ಕಳವು ಮಾಡಲಾಗಿದೆ ಎಂದು ಸತೀಶ್ ಅವರ ಪತ್ನಿ ಸಂಧ್ಯಾ ಎಂಬವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಹಗಲು ಹೊತ್ತಿನಲ್ಲಿ ಈ ಕಳವು ನಡೆದಿದೆ. ಸತೀಶ್ ಹಾಗೂ ಪತ್ನಿ ಸಂಧ್ಯಾ ಮನೆಯಿಂದ ಕೆಲಸಕ್ಕೆ ತೆರಳಿದ್ದು ಕೆಲಸ ಮುಗಿಸಿ ಸಂಜೆ 6 ಗಂಟೆ ವೇಳೆಗೆ ಮನೆಗೆ ಬಂದು ನೋಡಿದಾಗ ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story