Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಇಂಡೋನೇಶ್ಯಾ ಫುಟ್ಬಾಲ್ ಕ್ರೀಡಾಂಗಣ...

ಇಂಡೋನೇಶ್ಯಾ ಫುಟ್ಬಾಲ್ ಕ್ರೀಡಾಂಗಣ ದುರಂತಕ್ಕೆ ಅಶ್ರುವಾಯು ಪ್ರಯೋಗ ಕಾರಣ: ಮಾನವ ಹಕ್ಕು ಆಯೋಗ ವರದಿ

2 Nov 2022 10:31 PM IST
share
ಇಂಡೋನೇಶ್ಯಾ ಫುಟ್ಬಾಲ್ ಕ್ರೀಡಾಂಗಣ ದುರಂತಕ್ಕೆ ಅಶ್ರುವಾಯು ಪ್ರಯೋಗ ಕಾರಣ: ಮಾನವ ಹಕ್ಕು  ಆಯೋಗ ವರದಿ

ಜಕಾರ್ತ, ನ.2: ಕಳೆದ ತಿಂಗಳು ಪೂರ್ವ ಜಾವಾದ ಫುಟ್ಬಾಲ್ ಕ್ರೀಡಾಂಗಣ(Football stadium)ದಲ್ಲಿ ನಡೆದ ಮಾರಣಾಂತಿಕ ಕಾಲ್ತುಳಿತ ಘಟನೆಗೆ ಪೊಲೀಸರು ಅಶ್ರುವಾಯು ಪ್ರಯೋಗಿಸಿರುವುದು ಪ್ರಮುಖ ಪ್ರಚೋದಕವಾಗಿದೆ ಎಂದು ಇಂಡೊನೇಶ್ಯಾ ಮಾನವ ಹಕ್ಕುಗಳ ಆಯೋಗ (Human Rights Commission)ಬುಧವಾರ ಬಿಡುಗಡೆಗೊಳಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಕ್ಟೋಬರ್ 1ರಂದು ಜಕಾರ್ತದ ಮಲಾಂಗ್ ರೀಜೆನ್ಸಿಯ ಕಾಂಜುರುಹಾನ್ ಕ್ರೀಡಾಂಗಣ(Kanjuruhan Stadium, Malang Regency)ದಲ್ಲಿ ಎರಡು ಬದ್ಧ ಪ್ರತಿಸ್ಪರ್ಧಿ ತಂಡಗಳ ನಡುವೆ ನಡೆದ ಫುಟ್ಬಾಲ್ ಪಂದ್ಯಾಟದ ಸಂದರ್ಭ ನಡೆದ ಕಾಲ್ತುಳಿತದಲ್ಲಿ 38 ಅಪ್ರಾಪ್ತ ವಯಸ್ಕರ ಸಹಿತ 135ಕ್ಕೂ ಅಧಿಕ ಮಂದಿ ಮರಣ ಹೊಂದಿದ್ದರು.

ಪಂದ್ಯದ ಸಂದರ್ಭ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದಾಗ ಪ್ರೇಕ್ಷಕರನ್ನು ನಿಯಂತ್ರಿಸಲು ಪೊಲೀಸರು 45 ಸುತ್ತುಗಳಷ್ಟು ಅಶ್ರುವಾಯು ಪ್ರಯೋಗಿಸಿದ್ದರು. ಈ ಹಂತದಲ್ಲಿ ಉಂಟಾದ ಗೊಂದಲ, ಗಡಿಬಿಡಿ, ಧಾವಂತ, ನೂಕುನುಗ್ಗಲಿನಿಂದ ಕಾಲ್ತುಳಿತಕ್ಕೆ ಸಿಲುಕಿ ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ಮಾನವ ಹಕ್ಕುಗಳ ಆಯೋಗ(ಕೊಮ್ನಾಸ್ ಎಚ್ಎಎಮ್)ದ ವರದಿ ಹೇಳಿದೆ.

 ಈ ದುರಂತದ ಬಗ್ಗೆ ಸರಕಾರ ನೇಮಿಸಿದ್ದ ಸತ್ಯಶೋಧನಾ ತಂಡ ಕಳೆದ ತಿಂಗಳು ನೀಡಿದ್ದ ವರದಿಯಲ್ಲಿ ' ಅತ್ಯಧಿಕ ಪ್ರಮಾಣದಲ್ಲಿ ಅಶ್ರುವಾಯು ಬಳಕೆ, ಕ್ರೀಡಾಂಗಣದ ಬಾಗಿಲನ್ನು ಮುಚ್ಚಿ ಬೀಗ ಜಡಿದಿರುವುದು, ಕ್ರೀಡಾಂಗಣದಲ್ಲಿ ಸಾಮರ್ಥ್ಯಕ್ಕೆ ಮಿಕ್ಕಿ ಪ್ರೇಕ್ಷಕರಿಗೆ ಪ್ರವೇಶಾವಕಾಶ ಒದಗಿಸಿದ್ದು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ದುರಂತಕ್ಕೆ ಕಾರಣ' ಎಂದು ಉಲ್ಲೇಖಿಸಲಾಗಿತ್ತು.

ಇದೀಗ ಮಾನವ ಹಕ್ಕುಗಳ ಆಯೋಗದ ವರದಿಯಲ್ಲಿ 'ಮಕ್ಕಳ ಹಕ್ಕುಗಳ ಉಲ್ಲಂಘನೆ, ಬಲದ ಅತಿಯಾದ ಬಳಕೆ ಸಹಿತ 7 ಮಾನವ ಹಕ್ಕುಗಳ ಉಲ್ಲಂಘನೆ'ಯನ್ನು ಪಟ್ಟಿ ಮಾಡಲಾಗಿದೆ. ಈ ಪಂದ್ಯದಲ್ಲಿ ಪಾಲ್ಗೊಳ್ಳುವ 2 ಕ್ಲಬ್ ತಂಡಗಳ ಮಧ್ಯೆ ತುರುಸಿನ ಪೈಪೋಟಿಯಿದ್ದು, ತಂಡಗಳ ಬೆಂಬಲಿಗರು ಅತ್ಯಧಿಕ ಸಂಖ್ಯೆಯಲ್ಲಿ ಸೇರುವ ಕಾರಣ ಅತ್ಯಂತ ಅಪಾಯದ ಸನ್ನಿವೇಶ ಎದುರಾಗಬಹುದು ಎಂದು ಮಲಾಂಗ್ ಪೊಲೀಸರು ಪಂದ್ಯಕ್ಕೂ ಮುನ್ನ ನೀಡಿದ್ದ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದ ಸಂಘಟಕರು, ಸುರಕ್ಷತಾ ಕ್ರಮಗಳ ಬದಲು ವಾಣಿಜ್ಯ ಉದ್ದೇಶಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದು ವರದಿ ಹೇಳಿದ್ದು, ದೇಶದಲ್ಲಿರುವ ಎಲ್ಲಾ ಫುಟ್ಬಾಲ್ ಕ್ರೀಡಾಂಗಣಗಳೂ ಫಿಫಾ(ವಿಶ್ವ ಫುಟ್ಬಾಲ್ ಸಂಘಟನೆ)ಯ ಸುರಕ್ಷತಾ ಮಾನದಂಡವನ್ನು ಹೊಂದಿವೆಯೇ ಎಂಬುದರ ಪರಿಶೀಲನೆಗೆ ಸ್ವತಂತ್ರ ತಂಡವನ್ನು ನೇಮಿಸಬೇಕು. ಮೂರು ತಿಂಗಳೊಳಗೆ ಸುರಕ್ಷತೆಗೆ ಸಂಬಂಧಿಸಿದಂತೆ ಸುಧಾರಣೆ ಕಂಡುಬರದಿದ್ದರೆ ದೇಶದಲ್ಲಿ ಫುಟ್ಬಾಲ್ ಪಂದ್ಯಾಟವನ್ನು ನಿಷೇಧಿಸಬೇಕು ಎಂದು ಅಧ್ಯಕ್ಷ ಜೋಕೊ ವಿಡೊಡೊರನ್ನು ಆಗ್ರಹಿಸಲಾಗಿದೆ.

ನಿಷೇಧವಿದ್ದರೂ ಅಶ್ರುವಾಯು ಬಳಸಿರುವುದರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು.

ಫುಟ್ಬಾಲ್ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ನಿಯಂತ್ರಣಕ್ಕೆ ಅಶ್ರುವಾಯು ಬಳಸುವುದನ್ನು ಫಿಫಾ ನಿಷೇಧಿಸಿದ್ದರೂ, ಪೊಲೀಸರು 45 ಸುತ್ತು ಅಶ್ರುವಾಯು ಪ್ರಯೋಗಿಸಿದ್ದ ಬಗ್ಗೆ ಇಂಡೊನೇಶ್ಯಾದ ಅಧಿಕಾರಿಗಳು ಹಾಗೂ ಇಂಡೊನೇಶ್ಯಾ ಫುಟ್ಬಾಲ್ ಅಸೋಸಿಯೇಷನ್ ವಿರುದ್ಧ ವ್ಯಾಪಕ ಟೀಕೆ ಮತ್ತು ಖಂಡನೆ ವ್ಯಕ್ತವಾಗಿದೆ.

 ಫಿಫಾ ನಿಯಮದ ಉಲ್ಲಂಘನೆ (Violation of FIFA rules)

 ಫುಟ್ಬಾಲ್ ಟೂರ್ನಿಯ ಸಂದರ್ಭ ಪ್ರೇಕ್ಷಕರನ್ನು ನಿಯಂತ್ರಿಸಲು ಯಾವುದೇ ಕಾರಣಕ್ಕೂ ಅಶ್ರುವಾಯು ಪ್ರಯೋಗಿಸಬಾರದು ಎಂದು ಫಿಫಾದ ನಿಯಮಗಳಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಈ ನಿಯಮವನ್ನು ಇಂಡೋನೇಶ್ಯಾ ಫುಟ್ಬಾಲ್ ಸಂಘಟನೆ ಉಲ್ಲಂಘಿಸಿದೆ ಎಂಬ ಆರೋಪದ ಬಳಿಕ, ಕಳೆದ ತಿಂಗಳು ಜಕಾರ್ತದಲ್ಲಿ ಫಿಫಾ ಮುಖ್ಯಸ್ಥ ಗಿಯಾನಿ ಇನ್ಫ್ಯಾಂಟಿನೊರನ್ನು ಭೇಟಿಯಾಗಿದ್ದ ಇಂಡೋನೇಶ್ಯಾದ ಅಧ್ಯಕ್ಷರು, ದುರ್ಘಟನೆ ನಡೆದ ಕ್ರೀಡಾಂಗಣವನ್ನು ನೆಲಸಮಗೊಳಿಸಿ, ಅತ್ಯಾಧುನಿಕ ರೀತಿಯಲ್ಲಿ ಮರು ನಿರ್ಾಣ ಮಾಡುವುದಾಗಿ ಹೇಳಿದ್ದರು.

 ಈ ಮಧ್ಯೆ, ಇಂಡೊನೇಶ್ಯಾದ ಫುಟ್ಬಾಲ್ ಕ್ರೀಡಾಂಗಣಗಳಲ್ಲಿ ಸುರಕ್ಷತಾ ಕ್ರಮಗಳ ಮೇಲ್ವಿಚಾರಣೆಗೆ ಇಂಡೊನೇಶ್ಯಾದಲ್ಲಿ ಕಚೇರಿಯನ್ನು ಆರಂಭಿಸುವುದಾಗಿ ಫಿಫಾ ಘೋಷಿಸಿದೆ. ಮುಂದಿನ ವರ್ಷ ಇಂಡೊನೇಶ್ಯಾದಲ್ಲಿ 20ರ ಕೆಳಹರೆಯದವರ ವಿಶ್ವಕಪ್ ಫುಟ್ಬಾಲ್ ಟೂರ್ನಿ ನಡೆಯಲಿದೆ.

share
Next Story
X