ಸ್ವಾಧಾರ ಗೃಹದಲ್ಲಿದ್ದ ಮಹಿಳೆ ಕಾಣೆ

ಮಂಗಳೂರು : ನಗರದ ಜಪ್ಪಿನಮೊಗರಿನ ನಿರ್ಗತಿಕರ ಕೇಂದ್ರವಾದ ಸ್ವಾಧಾರ ಗೃಹದಲ್ಲಿದ್ದ 50 ವರ್ಷ ಪ್ರಾಯದ ಹುಸುಮಾ (ಮೊಕುನ್ನಿಸಾ) ಎಂಬಾಕೆ ನ.1ರಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಲತಃ ಅಸ್ಸಾಂನ ಹುಸುಮಾ ಜೂ.೮ರಂದು ಸ್ವಾಧಾರ ಗೃಹಕ್ಕೆ ದಾಖಲಾಗಿದ್ದರು. ಗೋಧಿ ಮೈಬಣ್ಣದ, ೫.೬ ಅಡಿ ಎತ್ತರದ, ಸಾಧಾರಣ ಮೈಕಟ್ಟಿನ, ಕಪ್ಪು ಮೈಬಣ್ಣ ಹೊಂದಿರುವ ಈಕೆಯ ತಲೆಕೂದಲು ಇಲ್ಲ.
ನಾಪತ್ತೆಯಾದ ವೇಳೆ ಕಂದು ಬಣ್ಣದ ನೈಟಿ, ಕೆಂಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಹಿಂದಿ ಭಾಷೆ ಮಾತನಾಡುತ್ತಾರೆ. ಈಕೆಯ ಬಗ್ಗೆ ಮಾಹಿತಿ ದೊರೆತವರು ಕಂಕನಾಡಿ ನಗರ ಠಾಣೆ (0824-2220529)ಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Next Story