ಕೊಪ್ಪಳ: ನಿರುದ್ಯೋಗ, ಬೆಲೆ ಏರಿಕೆ ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪ್ರತಿಭಟನೆ

ಕೊಪ್ಪಳ: ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ನಿರುದ್ಯೋಗದ ಸಮಸ್ಯೆ ಖಂಡಿಸಿ 'ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ' ಕೊಪ್ಪಳ ಜಿಲ್ಲಾ ಘಟಕ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬುಧವಾರ ಇಲ್ಲಿನ ಅಶೋಕ್ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಆದಿಲ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಲೀಮುದ್ದೀನ್, ನಗರಸಭೆ ಸದಸ್ಯರು ಸಬಿಹಾ ಪಟೇಲ್, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷರು ಸಲೀಮಾ ಜಹಾಂ, ಕಾರ್ಮಿಕರ ಘಟಕ ಜಿಲ್ಲಾ ಅಧ್ಯಕ್ಷರು ಮೌಲಾ ಹುಸೇನ್ ಹಣಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಬ್ದುಲ್ ವಾಹಿದ್, ಇಸಾಕ್ ಫಝೀಲ್, ಅಹ್ಮದ್ ಖಾನ್, ಶೈಖ್ ಇಜಾಝ್ ಅಹ್ಮದ್,ಮತ್ತಿತರು ಇದ್ದರು.
ಇದೇ ಸಂಧರ್ಭದಲ್ಲಿ ಹೈದರಾಬಾದ್ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷರು ಸಂಗಮೇಶ್. ಬಿ , ನಾಸಿರ್ ಕಂಠಿ, ಮುನೀರ್ ಸಿದ್ದಿಕಿ, ವೀರೇಶ್, ಹಬೀಬ್ ಪ್ರತಿಭಟನೆಗೆ ಆಗಮಿಸಿ, ಬೆಂಬಲ ವ್ಯಕ್ತಪಡಿಸದರು.











