ಕಲಬುರಗಿಯಲ್ಲಿ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಬಾಲಕನ ಬಂಧನ
ಕಲಬುರಗಿ,ನ.3: ಆಳಂದ ತಾಲೂಕಿನ ಗ್ರಾಮಯೊಂದರಲ್ಲಿ ಬಹಿರ್ದೆಸೆಗೆ ತೆರಳಿದ್ದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನೋರ್ವನನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಎಸ್.ಪಿ ಇಶಾಪಂತ್ ಮಾಹಿತಿ ನೀಡಿದ್ದು, ಬಂಧಿತ ಬಾಲಕ 16 ವರ್ಷದ ಅಪ್ರಾಪ್ತನಾಗಿದ್ದಾನೆ. ಒಬ್ಬಂಟಿಯಾಗಿ ಬಹಿರ್ದೆಸೆಗೆ ತೆರಳುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿ ಕಬ್ಬಿನ ಗದ್ದೆಯಲ್ಲಿ ಹೀನಾ ಕೃತ್ಯ ಎಸಗಿದ್ದಾನೆ. ಬಳಿಕ ಬಾಲಕಿಯ ಮುಖದ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ.
ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗುವುದೆಂದು ಇಶಾಪಂತ್ ತಿಳಿಸಿದ್ದಾರೆ.
ಪೋಷಕರಲ್ಲಿ ಮನವಿ: ಬಾಲಕ ತನ್ನ ಮೊಬೈಲ್ ನಲ್ಲಿ ನಿರಂತರವಾಗಿ ಅಶ್ಲೀಲ ವೀಡಿಯೋಗಳನ್ನು ನೋಡುತ್ತಿದ್ದದ್ದು ಕೃತ್ಯಕ್ಕೆ ಪ್ರಚೋದನೆಯಾಗಿರುವುದು ಕಂಡುಬಂದಿದೆ. ಮಕ್ಕಳು ಮೊಬೈಲ್ ನಲ್ಲಿ ಏನು ಮಾಡುತ್ತಿದ್ದಾರೆ ಎಂಬುರ ಬಗ್ಗೆ ನಿಗಾ ಇಡಬೇಕು ಎಂದು ಇಶಾಪಂತ್ ಪೋಷಕರಲ್ಲಿ ಮನವಿ ಮಾಡಿದ್ದಾರೆ.