ಮಂಗಳೂರು: ಸಿಟಿ ಗೋಲ್ಡ್‌ನಿಂದ ‘ವೆಡ್ಡಿಂಗ್ ಆಫ್ ವಂಡರ್ಸ್’ ಪ್ರಯುಕ್ತ ಪ್ರದರ್ಶನ ಮೇಳಕ್ಕೆ ಚಾಲನೆ

ಮಂಗಳೂರು : ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿರುವ ಸಿಟಿ ಗೋಲ್ಡ್ ವತಿಯಿಂದ ನಡೆಯುವ ‘ವೆಡ್ಡಿಂಗ್ ಆಫ್ ವಂಡರ್ಸ್’ (ವೋವ್) ಪ್ರಯುಕ್ತದ ಪ್ರದರ್ಶನ ಮೇಳಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಎಐಸಿಸಿ ವಕ್ತಾರೆ ಲಾವಣ್ಯ ಬಲ್ಲಾಳ್ ಪ್ರದರ್ಶನ ಮೇಳವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಲಾವಣ್ಯ ಬಳ್ಳಾಲ್, ಸಿಟಿ ಗೋಲ್ಡ್ ಚಿನ್ನಾಭರಣ ಖರೀದಿಗೆ ಹೆಸರುವಾಸಿಯಾದ ಮಳಿಗೆಯಾಗಿದೆ. ನಂಬಿಕೆ ಮತ್ತು ವಿಶ್ವಾಸಕ್ಕೆ ಪಾತ್ರವಾಗಿರುವ ಈ ಸಂಸ್ಥೆ, ನಗು ಮುಖದ ಸಿಬ್ಬಂದಿ ವರ್ಗದ ಸೇವೆಯು ಗ್ರಾಹಕರಿಗೆ ತೃಪ್ತಿ ತರಿಸುತ್ತದೆ ಎಂದರು.
ನಾನು ಈವರೆಗೆ ಇಲ್ಲಿನ ಗ್ರಾಹಕಳಲ್ಲ. ಇನ್ಮುಂದೆ ಇಲ್ಲೇ ಚಿನ್ನಾಭರಣ ಖರೀದಿಸಿ ಇಲ್ಲಿನ ಗ್ರಾಹಕಳಾಗಿ ಮುಂದುವರಿಯುವೆ ಎಂದರು.
ಮುಖ್ಯ ಅತಿಥಿಗಳಾಗಿ ಆಯಿಶಾಝ್ ಮೇಕ್ ಓವರ್‌ನ ಮಾಲಕಿ ಆಯಿಶಾ ಶಹನಾಝ್, ಪ್ರೊ-ಮೇಕಪ್ ಆರ್ಟಿಸ್ಟ್ ವಸೀಲಾ ಝಕರಿಯಾ, ಮರ್ಸಿ ಬ್ಯೂಟಿ ಅಕಾಡಮಿಯ ಮರ್ಸಿ ವೀಣಾ ಡಿಸೋಜ, ವೆಡ್ಡಿಂಗ್ ಫೋಟೋಗ್ರಾಫರ್ ಶಾಹಿನಾ ಭಾಗವಹಿಸಿದ್ದರು.
ಸಂಸ್ಥೆಯ ಡೈರಕ್ಟರ್ ನೌಶಾದ್ ಚೂರಿ, ಬ್ರಾಂಚ್ ಮ್ಯಾನೇಜರ್ ಅಹ್ಮದ್ ಆಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ. ಹಾಗೂ ಸಿಬ್ಬಂದಿ ವರ್ಗ, ಗ್ರಾಹಕರು ಉಪಸ್ಥಿತರಿದ್ದರು.
ಅಬ್ದುಲ್ಲಾ ಉಳ್ಳಾಲ ಈ ಮೇಳದ ಪ್ರಪ್ರಥಮ ಗ್ರಾಹಕರಾಗಿದ್ದರು. ವಿಲಿಟಾ ಲೋಬೋ ಕಾರ್ಯಕ್ರಮ ನಿರೂಪಿಸಿದರು.
‘ಕೆನ್ನ ಡೈಮಂಡ್’ನ್ನು ಲಾವಣ್ಯ ಬಲ್ಲಾಳ್, ‘ವಿಂಟೇಜ್ ಪ್ರೀಮಿಯಂ ಆಂಟಿಕ್ ಕಲೆಕ್ಷನ್’ನ್ನು ಮರ್ಸಿ ವೀಣಾ ಡಿಸೋಜ, ‘ಫ್ಲೋರಾ ಫಿರೋಝಾ ಅಂಟಿಕ್ ಕಲೆಕ್ಷನ್’ನ್ನು ವಸೀಲಾ ಝಕರಿಯಾ, ‘ಜೈಪುರ್ ಟ್ರೆಂಡಿ ಆಂಟಿಕ್ ಕಲೆಕ್ಷನ್’ನ್ನು ಶಾಹಿನಾ, ‘ಮನಾಮಾ ಆಂಟಿಕ್ ಕಲೆಕ್ಷನ್’ನ್ನು ಆಯಿಶಾ ಶಹನಾಝ್, ‘ಬಿಕನೇರ್ ಎತ್ನಿಕ್ ಕಲೆಕ್ಷನ್’ನ್ನು ಆದಿತಿ, ‘ವಿಂಟೇಜ್ ಬೋಂಬೆ ಆಂಟಿಕ್ ಕಲೆಕ್ಷನ್’ನ್ನು ಖುರೈಷಿ ಮುಸ್ತಫಾ ಅನಾವರಣಗೊಳಿಸಿದರು.
*ನ.3ರಿಂದ ಆರಂಭಗೊಂಡ ‘ವೆಡ್ಡಿಂಗ್ ಆಫ್ ವಂಡರ್ಸ್’ (ವೋವ್) ಡಿಸೆಂಬರ್ 15ರವರೆಗೆ ನಡೆಯಲಿದೆ. ಆ ಹಿನ್ನೆಲೆಯಲ್ಲಿ ನ.6ರವರೆಗೆ ಬೃಹತ್ ಪ್ರದರ್ಶನ ಮೇಳವನ್ನು ಸಿಟಿ ಗೋಲ್ಡ್ ಶೋರೂಮ್‌ನಲ್ಲಿ ಆಯೋಜಿಸಲಾಗಿದೆ. ನಾಲ್ಕು ದಿನಗಳ ಕಾಲ ನಡೆಯುವ ಪ್ರದರ್ಶನ ಮೇಳದಲ್ಲಿ ದೇಶ ವಿದೇಶಗಳ ಪಾರಂಪರಿಕ ಚಿನ್ನಾಭರಣಗಳು ಹಾಗೂ ವಜ್ರ ವೈಢೂರ್ಯಗಳ ಬೃಹತ್ ಸಂಗ್ರಹಗಳಲ್ಲದೆ ವಿಂಟೇಜ್ ಪ್ರೀಮಿಯಂ ಆಂಟಿಕ್ ಕಲೆಕ್ಷನ್‌ಗಳು, ಮೆಹರ್ ವೆಡ್ಡಿಂಗ್, ಕೆನ್ನ ಡೈಮಂಡ್, ಜೈಪುರ್ ಟ್ರೆಂಡಿ ಅಂಟಿಕ್, ಫ್ಲೋರಾ ಫಿರೋಝಾ ಆಂಟಿಕ್‌ಗಳು, ಬಿಕಾನೇರ್ ಎತ್ನಿಕ್ ಕಲೆಕ್ಷನ್, ಮನಾಮ ಕಲೆಕ್ಷನ್, ವಿಂಟೇಜ್ ಬಾಂಬೆ ಆಂಟಿಕ್ ಕಲೆಕ್ಷನ್ಸ್ ಹಾಗೂ ದೇಶ ವಿದೇಶಗಳ ಪಾರಂಪರಿಕ ಚಿನ್ನಾಭರಣಗಳು ಮತ್ತು ವಜ್ರಗಳ ಪ್ರದರ್ಶನವೂ ನಡೆಯಲಿದೆ.
ಪ್ರದರ್ಶನ ಮೇಳದ ಪ್ರಯುಕ್ತ ಚಿನ್ನಾಭರಣ ಖರೀದಿ ಹಾಗೂ ಮೇಕಿಂಗ್ ಚಾರ್ಜ್ ಮೇಲೆ ಶೇ.50 ಡಿಸ್ಕೌಂಟ್ ನೀಡಲಾಗುವುದು. ಹೆಚ್ಚುವರಿಯಾಗಿ ಶೇ.10 ಮುಂದಿನ ಖರೀದಿಗೆ ಮೇಕಿಂಗ್ ಚಾರ್ಜ್ ಮೇಲೆ ರಿಯಾಯಿತು ನೀಡಲಾಗುವುದು. ವಜ್ರಾಭರಣಗಳ ಖರೀದಿಯ ಮೇಲೆ ಶೇ.25 ಹಾಗೂ ಹೆಚ್ಚುವರಿಯಾಗಿ ಮುಂದಿನ ಖರೀದಿಗೆ ಶೇ.5 ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.