ಮಂಗಳೂರು: ಮೃತ ಭಕ್ತರ ಸ್ಮರಣೆ ದಿನಾಚರಣೆ

ಮಂಗಳೂರು : ಮೃತಪಟ್ಟ ಭಕ್ತ ವಿಶ್ವಾಸಿಗಳ (ಆಲ್ ಸೋಲ್ಸ್ ಡೇ) ಸ್ಮರಣೆ ದಿನವನ್ನು ಕ್ರೈಸ್ತರು ನ.2ರಂದು ಎಲ್ಲೆಡೆ ಆಚರಿಸುತ್ತಾರೆ. ಚರ್ಚ್ ಆವರಣದಲ್ಲಿರುವ ಸಂಬಂಧಿಕರ ಸಿಮೆಟ್ರಿ (ಸಮಾಧಿ)ಯನ್ನು ಶುಚಿಗೊಳಿಸಿ ಪ್ರಾರ್ಥನೆ ಸಲ್ಲಿಸುವ ಮೂಲಕ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಲಾಗುತ್ತದೆ.
ಈ ಪ್ರಯುಕ್ತ ನಗರದ ಕುಲಶೇಖರ ಪಾಲ್ದನೆ ಹಾಗೂ ಶಕ್ತಿನಗರದ ಚರ್ಚ್‌ಗಳ ಸದಸ್ಯರು ಕುಲಶೇಖರದ ಸೆಮೆಟ್ರಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯಲ್ಲಿ ಕುಲಶೇಖರದ ಪ್ರಧಾನ ಧರ್ಮಗುರುಗಳಾದ ವಂ.ಫಾ. ಕ್ಲಿಫರ್ಡ್ ಫೆರ್ನಾಂಡಿಸ್, ಪಾಲ್ದನೆ ಚರ್ಚಿನ ಧರ್ಮಗುರುಗಳಾದ ವಂ.ಫಾ. ಆಲ್ಬನ್ ಮೆನೆಜಸ್ ಪ್ರಾರ್ಥನೆ ಸಲ್ಲಿಸಿದರು. ಫಾ. ಜೊನ್ ಸಿಕ್ವೇರಾ, ಫಾ. ಐವನ್ ಕೊರ್ಡೆರೊ, ಡೀಕನ್ ಅನಾಶ್ ಪಾಯಸ್ ಉಪಸ್ಥಿತರಿದ್ದರು.
Next Story