ಮಾಣೂರು: ಇರ್ಷಾದಿಯಾ ಫ್ರೆಂಡ್ಸ್ ಅಸ್ತಿತ್ವಕ್ಕೆ

ಬಂಟ್ವಾಳ, ನ.3: ತುಂಬೆ ಗ್ರಾಮದ ಮಾಣೂರಿನ ಇರ್ಷಾದುಲ್ ಇಸ್ಲಾಂ ಮದ್ರಸದ ವಠಾರದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಉದ್ದೇಶಕ್ಕಾಗಿ ಇರ್ಷಾದಿಯಾ ಫ್ರೆಂಡ್ಸ್ಗೆ ನ.1ರಂದು ಚಾಲನೆ ನೀಡಲಾಯಿತು.
ಸಂಸ್ಥೆಯ ಗೌರವಾಧ್ಯಕ್ಷರಾಗಿ ಎಂ.ಎಚ್.ಹಸನಬ್ಬ, ಗೌರವ ಸಲಹೆಗಾರರಾಗಿ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ಹಮೀದ್ ಮುಸ್ಲಿಯಾರ್, ಹಮೀದ್ ವಾಟರ್ ಸಪ್ಲೈ, ಅಧ್ಯಕ್ಷರಾಗಿ ಬಶೀರ್ ಉಮನಗುಡ್ಡೆ, ಉಪಾಧ್ಯಕ್ಷರಾಗಿ ಶಹರೋಝ್, ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್ ಕುಕ್ಕಾಜೆ, ಕಾರ್ಯದರ್ಶಿಯಾಗಿ ಅಕ್ಬರ್ ಅಲಿ, ಕೋಶಾಧಿಕಾರಿಯಾಗಿ ಸದ್ದಾಂ ಮಾಣೂರು ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಮಾಣೂರು, ಸಂಶೀರ್ ಮಾಣೂರು, ಉಮರಬ್ಬ, ಮಜೀದ್, ಶಬೀರ್ ಮಾಣೂರು, ಇಸ್ಮಾಯೀಲ್ ಮಾಣೂರು, ಬದ್ರುದ್ದೀನ್ ಮಾಣೂರು, ಅಝ್ಮಾಲ್, ಫಯಾಝ್, ಮುಹಾಝ್, ಬಿಲಾಲ್, ಸಾಹಿಲ್, ಬದ್ರುದ್ದೀನ್ ಡಿ. ಅವರನ್ನು ಆಯ್ಕೆ ಮಾಡಲಾಯಿತು. ಅಕ್ಬರ್ ಮಾಣೂರು ಸ್ವಾಗತಿಸಿ, ವಂದಿಸಿದರು.
Next Story