ಏಮ್ಸ್ ವಿದ್ಯಾಸಂಸ್ಥೆಯ ದ.ಕ. ಜಿಲ್ಲಾ ಸಮಿತಿ ರಚನೆ

ಮಂಗಳೂರು : ಏಮ್ಸ್ ವಿದ್ಯಾಸಂಸ್ಥೆಯ ದ.ಕ. ಜಿಲ್ಲಾ ಸಮಿತಿಯ ರಚನಾ ಸಭೆಯು ಗುರುವಾರ ನಗರದಲ್ಲಿ ನಡೆಯಿತು.
ಕೇಂದ್ರ ಸಮಿತಿಯ ಅಧ್ಯಕ್ಷ ಬಾಂಡ್ ತಿಪ್ಪೆಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿಯ ಮಾಜಿ ಕುಲಸಚಿವ ಪ್ರೊ.ಎ.ಎಂ. ಖಾನ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಏಮ್ಸ್ ವಿದ್ಯಾ ಸಂಸ್ಥೆ (ರಿ)ಯ ಸ್ಥಾಪಕ ಟ್ರಸ್ಟಿ ಹಾಗೂ ಅಧ್ಯಕ್ಷೆ ಮರಿಯಂ ಫೌಝಿಯಾ ಬಿ.ಎಸ್ ಸಂಸ್ಥೆ ಹಾಗೂ ಜಿಲ್ಲಾ ಸಮಿತಿಯ ಧ್ಯೇಯ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.
ದ.ಕ.ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಶಾಲಿಮಾರ್ ರಿಯಲ್ಟಿ ಹೋಲ್ಡಿಂಗ್ಸ್‌ನ ಅಬ್ದುಲ್ ರಹಿಮಾನ್, ಗೌರವಾದ್ಯಕ್ಷರಾಗಿ ಎಂ. ಎಚ್. ಮೊಯ್ದಿನ್ ಹಾಜಿ ಅಡ್ಡೂರು, ಗೌರವ ಸಲಹೆಗಾರರಾಗಿ ಪ್ರೊ.ಪಟ್ಟಾಭಿರಾಮ ಸೋಮಯಾಜಿ, ಉಪಾಧ್ಯಕ್ಷರಾಗಿ ಅಡ್ಡೂರಿನ ರಿಫಾ ಪಾಲಿ ಕ್ಲಿನಿಕ್‌ನ ಡಾ. ಇ.ಕೆ.ಎ. ಸಿದ್ದೀಕ್, ಗ್ಲೋಬ್ ಟಿವಿಯ ಅಧ್ಯಕ್ಷ ಪೌಲ್ಸ್, ಪ್ರಧಾನ ಕಾರ್ಯದರ್ಶಿಗಳಾಗಿ ನಿವೃತ್ತ ಪ್ರಾಂಶುಪಾಲ ಡಾ. ಇಸ್ಮಾಯಿಲ್ ಎನ್, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಹಮೀದ್ ಕಣ್ಣೂರು, ಎಂ.ಜಿ. ಶಾಹುಲ್ ಹಮೀದ್ ಗುರುಪುರ, ಎ.ಕೆ. ರಿಯಾಝ್ ಅಡ್ಡೂರು, ಕೋಶಾಧಿಕಾರಿಯಾಗಿ ಸಾಜಿನಾ ಕಡಬ, ಸಂಘಟನಾ ಕಾರ್ಯದರ್ಶಿಯಾಗಿ ಬಾತಿಷ್ ಅಳಕೆಮಜಲು, ಸದಸ್ಯರಾಗಿ ಬಿ.ಮುಹಮ್ಮದ್ ಸಾಹೇಬ್, ಏಮ್ಸ್ ಜಿಲ್ಲಾ ಸದಸ್ಯರಾಗಿ ಪ್ರವೀಣಣ್ ಕುಮಾರ್ ಕೊಡಿಯಾಲ್ ಬೈಲ್, ಮೊಯಿದಿನ್ ಕುಟ್ಟಿ ಪೆರ್ನೆ ಉಪ್ಪಿನಂಗಡಿ, ದಿನೇಶ್ ಕಾಮತ್ ಪುತ್ತೂರು, ಲೋಕಯ್ಯ ಶಿಶಿಲ, ಅಲ್ತಾಫ್ ಅನ್ವರ್ ಬಿ. ಅವರನ್ನು ಆಯ್ಕೆ ಮಾಡಲಾಯಿತು.
ಸಂಸ್ಥೆಯ ಸ್ಥಾಪಕ ಟ್ರಸ್ಟಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೆಮೀರಾ ಕೆ.ಎ. ಸ್ವಾಗತಿಸಿದರು. ಸಾಜಿದಾ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಶಕೀಲಾ ಫರ್ವಿನ್ ವಂದಿಸಿದರು.