ಭೂಮಿಗೆ ಅಪ್ಪಳಿಸಲಿದೆ ನಿಷ್ಕ್ರಿಯ ರಾಕೆಟ್‍ನ ಬೃಹತ್ ಭಾಗ: ವರದಿ

ವಾಷಿಂಗ್ಟನ್, ನ.3: ಚೀನಾ(China)ವು ತನ್ನದೇ ಆದ ಅಂತರಿಕ್ಷ ನಿಲ್ದಾಣವನ್ನು ನಿರ್ಮಿಸುತ್ತಿದ್ದು, ಈ ಯೋಜನೆಯಡಿ ಅಂತರಿಕ್ಷಕ್ಕೆ ಉಡಾಯಿಸಲಾದ ರಾಕೆಟ್‍ನ 23 ಟನ್ ತೂಕದ ಅವಶೇಷ ಭೂಮಿಯ ಮೇಲ್ಮೈಗೆ ಈ ವಾರಾಂತ್ಯ ಅಪ್ಪಳಿಸಲಿದೆ ಎಂದು ಕಕ್ಷೆಯಲ್ಲಿನ ಚಟುವಟಿಕೆಯ ಮೇಲೆ ನಿಗಾ ಇರಿಸಿರುವ `ಏರೋಸ್ಪೇಸ್ ಕಾರ್ಪೊರೇಷನ್' (``Aerospace Corporation'')ವರದಿ ಮಾಡಿದೆ.
ಬಾಹ್ಯಾಕಾಶಕ್ಕೆ ಉಡಾಯಿಸಲಾದ ಚೀನಾದ ಅತ್ಯಂತ ಬೃಹತ್ ರಾಕೆಟ್, 23 ಟನ್ ತೂಕದ `ಲಾಂಗ್ ಮಾರ್ಚ್ 5ಬಿ'(``Long March 5B'') ಭೂಮಿಯತ್ತ ಧಾವಿಸುತ್ತಿದೆ. ಭೂಮಿಯ ಕಕ್ಷೆಯನ್ನು ಪ್ರವೇಶಿಸಿದಾಗ ರಾಕೆಟ್ ಉರಿದುಹೋಗುತ್ತದೆ. ಆದರೆ ಅದರ ಕೆಲವು ಬೃಹತ್ ಭಾಗಗಳು ಹಾಗೂ ತ್ಯಾಜ್ಯಗಳು ಉಳಿಯುತ್ತದೆ ಮತ್ತು ಭೂಮಿಗೆ ಅಪ್ಪಳಿಸುತ್ತದೆ.
ಅದನ್ನು ಯಾರೂ ನಿಯಂತ್ರಿಸುತ್ತಿಲ್ಲವಾದ್ದರಿಂದ ಅದು ಎಲ್ಲಿಗೆ ಮತ್ತು ಯಾವಾಗ ಅಪ್ಪಳಿಸಲಿದೆ ಎಂಬ ಮಾಹಿತಿಯಿಲ್ಲ. ಶುಕ್ರವಾರ ಸಂಜೆಯಿಂದ ಶನಿವಾರ ರಾತ್ರಿಯವರೆಗಿನ ಅವಧಿಯಲ್ಲಿ ಭೂಮಿಗೆ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.
Next Story





