ಸೌದಿ ಅರೆಬಿಯಾ: ಪ್ರಥಮ ಇಲೆಕ್ಟ್ರಿಕ್ ವಾಹನದ ಬ್ರಾಂಡ್ ಬಿಡುಗಡೆ

ರಿಯಾದ್, ನ.3: ಸೌದಿ ಅರೆಬಿಯಾದ ಪ್ರಪ್ರಥಮ ಇಲೆಕ್ಟ್ರಿಕ್ ವಾಹನದ ಲಾಂಚನ `ಸಿಯರ್'(``cheer'')ಗೆ ಸೌದಿ ಅರೆಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ (Muhammad bin Salman)ಗುರುವಾರ ಚಾಲನೆ ನೀಡಿದ್ದಾರೆ. ಈ ವಾಹನ 2025ರ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ನಿರೀಕ್ಷೆಯಿದೆ ಎಂದು ಸ್ಟೇಟ್ ನ್ಯೂಸ್ ಏಜೆನ್ಸಿ(ಎಸ್‍ಪಿಎ) ವರದಿ ಮಾಡಿದೆ.
ಈ ವಾಹನವು ಸುಮಾರು 150 ದಶಲಕ್ಷ ಡಾಲರ್ ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಲಿದೆ ಮತ್ತು 2034ರ ವೇಳೆಗೆ ದೇಶದ ಜಿಡಿಪಿಗೆ ನೇರವಾಗಿ 8 ಶತಕೋಟಿ ಡಾಲರ್‍ನಷ್ಟು ಕೊಡುಗೆ ನೀಡಲಿದೆ. ಈ ಯೋಜನೆ ಸೌದಿ ಪಬ್ಲಿಕ್ ಇನ್‍ವೆಸ್ಟ್‍ಮೆಂಟ್ ಫಂಡ್(ಪಿಐಎಫ್) ಮತ್ತು ಹಾನ್ ಹಾಯಿ ಪ್ರಿಸಿಷನ್ ಇಂಡಸ್ಟ್ರಿ(ಫಾಕ್ಸ್‍ಕಾನ್)ನ ಜಂಟಿ ಉಪಕ್ರಮವಾಗಿದೆ ಎಂದು ವರದಿ ಹೇಳಿದೆ.
Next Story





