Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮೊರ್ಬಿಯ ಬಗೆಗಿಷ್ಟು...

ಮೊರ್ಬಿಯ ಬಗೆಗಿಷ್ಟು...

ಕೃಪೆ: ದ ಇಂಡಿಯನ್ ಎಕ್ಸ್‌ಪ್ರೆಸ್ಕೃಪೆ: ದ ಇಂಡಿಯನ್ ಎಕ್ಸ್‌ಪ್ರೆಸ್4 Nov 2022 9:56 AM IST
share
ಮೊರ್ಬಿಯ ಬಗೆಗಿಷ್ಟು...

ಗುಜರಾತ್‌ನ ಮೊರ್ಬಿಯಲ್ಲಿ ರವಿವಾರ ರಾತ್ರಿ ನಡೆದ ತೂಗು ಸೇತುವೆ ಕುಸಿತ ದುರಂತದಲ್ಲಿ 140ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅಧಿಕಾರಸ್ಥರ ಬೇಜವಾಬ್ದಾರಿತನ ಮತ್ತು ಲಂಚಗುಳಿತನಕ್ಕೆ ಅಮಾಯಕ ಜನರು ತಮ್ಮ ಅಮೂಲ್ಯ ಜೀವಗಳನ್ನೇ ಬೆಲೆ ತೆತ್ತ ಘಟನೆಯಿಂದ ಮೊರ್ಬಿ ಈಗ ಕುಖ್ಯಾತವಾಗಿದೆ.

ಮೊರ್ಬಿ ಜಿಲ್ಲೆಯ ಇತಿಹಾಸ ಹಾಗೂ ಅಲ್ಲಿನ ವೈಶಿಷ್ಟಗಳ ಬಗ್ಗೆ ಗಮನ ಹರಿಸುವುದಾದರೆ ಈ ಮೊರ್ಬಿ ಜಿಲ್ಲೆಯನ್ನು ಇತರ ಹಲವಾರು ಹೊಸ ಜಿಲ್ಲೆಗಳೊಂದಿಗೆ 2013 ಆಗಸ್ಟ್ 15ರಂದು ರಚಿಸಲಾಗಿತ್ತು. ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ- ಮೊರ್ಬಿ, ಮಲಿಯ, ಟಂಕಾರ, ವಾಂಕನೆರ್ ಮತ್ತು ಹಲ್ವಾಡ್. ಹಿಂದೆ ವಾಂಕನೆರ್ ತಾಲೂಕು ರಾಜ್‌ಕೋಟ್ ಜಿಲ್ಲೆಯಲ್ಲಿತ್ತು ಮತ್ತು ಹಲ್ವಾಡ್ ತಾಲೂಕು ಸುರೇಂದ್ರನಗರ ಜಿಲ್ಲೆಯಲ್ಲಿತ್ತು.

ಮೊರ್ಬಿ ಜಿಲ್ಲೆಯ ಉತ್ತರದಲ್ಲಿ ಕಚ್, ಪೂರ್ವದಲ್ಲಿ ಸುರೇಂದ್ರನಗರ, ದಕ್ಷಿಣದಲ್ಲಿ ರಾಜ್‌ಕೋಟ್ ಮತ್ತು ಪಶ್ಚಿಮದಲ್ಲಿ ಜಾಮ್‌ನಗರ ಜಿಲ್ಲೆಗಳಿವೆ.

ಮೊರ್ಬಿಯು ಸಿರಾಮಿಕ್ ಉದ್ದಿಮೆಗೆ ಪ್ರಸಿದ್ಧವಾಗಿದೆ. ಜಿಲ್ಲೆಯಲ್ಲಿ ಹಲವು ನೂರು ಸಿರಾಮಿಕ್ ತಯಾರಿಕಾ ಕಾರ್ಖಾನೆಗಳಿವೆ. ಅವುಗಳ ಪೈಕಿ ಹೆಚ್ಚಿನವು ಮಧ್ಯಮ ಮತ್ತು ಸಣ್ಣ ಗಾತ್ರದ ಕಾರ್ಖಾನೆಗಳು. ಭಾರತದಲ್ಲಿ ತಯಾರಾಗುವ ಸುಮಾರು ಶೇ. 70 ಸಿರಾಮಿಕ್‌ಗಳು ಮೊರ್ಬಿಯಲ್ಲಿ ತಯಾರಾಗುತ್ತವೆ. ಇಲ್ಲಿ ತಯಾರಾಗುವ ಸಿರಾಮಿಕ್ ಟೈಲ್ಸ್‌ಗಳು ಮಧ್ಯಪ್ರಾಚ್ಯ, ಪೂರ್ವ ಏಶ್ಯ ಮತ್ತು ಆಫ್ರಿಕದ ದೇಶಗಳಿಗೆ ರಫ್ತಾಗುತ್ತವೆ.

ಮೊರ್ಬಿಯ ಸಿರಾಮಿಕ್ ಉದ್ಯಮದ ವಾರ್ಷಿಕ ವಹಿವಾಟು 50,000 ಕೋಟಿ ರೂಪಾಯಿ. ಅದರ ವಾರ್ಷಿಕ ರಫ್ತು ಸುಮಾರು 15,000 ಕೋಟಿ ರೂಪಾಯಿ. ಮೊರ್ಬಿ ಸಿರಾಮಿಕ್ ಉದ್ದಿಮೆಗೆ ಪ್ರಮುಖ ಸ್ಪರ್ಧೆ ಬರುತ್ತಿರುವುದು ಚೀನಾದಿಂದ ಮಾತ್ರ.

ಜೀವನಾಡಿ ನದಿ

ಮೊರ್ಬಿ ಪಟ್ಟಣವು ಮಚ್ಛು ನದಿಯ ದಂಡೆಯಲ್ಲಿದೆ. ಪಟ್ಟಣವು ಸಮುದ್ರದಿಂದ 35 ಕಿ.ಮೀ. ಮತ್ತು ರಾಜ್‌ಕೋಟ್‌ನಿಂದ 60 ಕಿ.ಮೀ. ದೂರದಲ್ಲಿದೆ. ಪಟ್ಟಣವು ಜಿಲ್ಲೆಯ ಆಡಳಿತ ಕೇಂದ್ರವಾಗಿದೆ.

ಮಚ್ಛು ಸಣ್ಣ ನದಿಯಾಗಿದ್ದು ಮಾಡ್ಲ ಬೆಟ್ಟದಲ್ಲಿ ಹುಟ್ಟುತ್ತದೆ ಹಾಗೂ 130 ಕಿ.ಮೀ. ದೂರ ಹರಿದು ಕಚ್ ರಣ್‌ವನ್ನು ಸೇರುತ್ತದೆ. 1979ರಲ್ಲಿ, ನದಿಯ ಅಡ್ಡಕ್ಕೆ ಕಟ್ಟಲಾಗಿರುವ ಅಣೆಕಟ್ಟೊಂದು ಒಡೆದು ಭಾರೀ ದೊಡ್ಡ ದುರಂತ ಸಂಭವಿಸಿತ್ತು. ಅಣೆಕಟ್ಟೆಯಿಂದ ಹೊರ ಹರಿದ ನೀರು ಇಡೀ ಮೊರ್ಬಿ ಪಟ್ಟಣವನ್ನು ಆವರಿಸಿತ್ತು. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರು. ಒಂದು ಅಂದಾಜಿನ ಪ್ರಕಾರ, ಅಂದು ಸತ್ತವರ ಸಂಖ್ಯೆ ಸುಮಾರು 25,000. ಈ ವಿಷಯದಲ್ಲಿ ಗುಜರಾತಿ ಭಾಷೆಯಲ್ಲಿ ‘ಮಚ್ಛು’ ಎಂಬ ಚಲನಚಿತ್ರವೊಂದು ನಿರ್ಮಾಣವಾಗಿತ್ತು.

ತೂಗು ಸೇತುವೆ

ಮಚ್ಛು ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ತೂಗು ಸೇತುವೆ ‘ಝೂಲ್ಟೊ ಪೂಲ್’ ಪಾದಚಾರಿ ತೂಗು ಸೇತುವೆಯಾಗಿದೆ. ಅದನ್ನು ಮೊರ್ಬಿಯ ಠಾಕೂರ್ ಸಾಹಿಬ್, ಸರ್ ವಾಗ್ಜಿ ರಾವಜಿ (1858-1922)ಯ ಅಧಿಕಾರಾವಧಿಯಲ್ಲಿ 1879ರಲ್ಲಿ ಉದ್ಘಾಟಿಸಲಾಗಿತ್ತು. ಇಡೀ ಮೊರ್ಬಿ ಪಟ್ಟಣದ ಯೋಜನೆ ಮತ್ತು ನಿರ್ಮಾಣದ ಹೊಣೆಯನ್ನು ಸರ್ ವಾಗ್ಜಿ ಹೊತ್ತಿದ್ದರು ಎಂದು ಹೇಳಲಾಗುತ್ತದೆ. ಪಟ್ಟಣದಲ್ಲಿ ಭಾರತದ ಮೊದಲ ಕಲಾ ಅರಮನೆ ಮತ್ತು ಗ್ರೀನ್ ಚೌಕ್ ಎಂಬ ಯುರೋಪಿಯನ್ ಮಾದರಿಯ ನಗರ ಮಧ್ಯದ ಚೌಕವನ್ನು ನಿರ್ಮಿಸಲಾಗಿತ್ತು.

ತೂಗು ಸೇತುವೆಯು 233 ಮೀಟರ್ ಉದ್ದ ಮತ್ತು 1.25 ಮೀಟರ್ ಅಗಲವಿದೆ ಎಂದು ಮೊರ್ಬಿ ಜಿಲ್ಲೆಯ ಅಧಿಕೃತ ವೆಬ್‌ಸೈಟ್ ಹೇಳುತ್ತದೆ. ಸೇತುವೆಯು ದರ್ಬಾರ್‌ಗಢ್ ಅರಮನೆ ಮತ್ತು ಲಾಖ್‌ದಿರ್ಜಿ ಇಂಜಿನಿಯರಿಂಗ್ ಕಾಲೇಜನ್ನು ಸಂಪರ್ಕಿಸುತ್ತದೆ. ಸೇತುವೆಯು ಪ್ರವಾಸಿ ಆಕರ್ಷಣೆಯಾಗಿತ್ತು. ಇದೊಂದು ಅಪೂರ್ವ ಇಂಜಿನಿಯರಿಂಗ್ ಚಮತ್ಕಾರ ಎಂಬುದಾಗಿ ಅಂದು ಬಣ್ಣಿಸಲಾಗಿತ್ತು. ‘‘ಸೇತುವೆಯು ಮೊರ್ಬಿ ಆಡಳಿತಗಾರರ ಪ್ರಗತಿಪರ ಮತ್ತು ವೈಜ್ಞಾನಿಕ ಮನೋಭಾವಕ್ಕೆ ಸಾಕ್ಷಿಯಾಗಿದೆ’’ ಎಂಬುದಾಗಿ ಜಿಲ್ಲೆಯ ವೆಬ್‌ಸೈಟ್ ಹೇಳುತ್ತದೆ.

ಈ ತೂಗು ಸೇತುವೆಯನ್ನು ದುರಸ್ತಿಗಾಗಿ ಎರಡು ವರ್ಷಗಳ ಹಿಂದೆ ಮುಚ್ಚಲಾಗಿತ್ತು. ಬಳಿಕ, ಐದು ದಿನಗಳ ಹಿಂದೆ, ಅಂದರೆ ಅಕ್ಟೋಬರ್ 26ರಂದು ಸಾರ್ವಜನಿಕರ ಬಳಕೆಗೆ ತೆರೆಯಲಾಗಿತ್ತು. ಆದರೆ, ಅದಕ್ಕಿಂತ ಮೊದಲು, ಸೇತುವೆಯ ಸುರಕ್ಷತಾ ಸಮೀಕ್ಷೆ ನಡೆಸಲಾಗಿಲ್ಲ ಎನ್ನಲಾಗಿದೆ.

share
ಕೃಪೆ: ದ ಇಂಡಿಯನ್ ಎಕ್ಸ್‌ಪ್ರೆಸ್
ಕೃಪೆ: ದ ಇಂಡಿಯನ್ ಎಕ್ಸ್‌ಪ್ರೆಸ್
Next Story
X