ವಾಯು ಮಾಲಿನ್ಯ ಹಿನ್ನೆಲೆ: ಶೇ. 50 ರಷ್ಟು ದಿಲ್ಲಿ ಸರಕಾರಿ ಅಧಿಕಾರಿಗಳು ಮನೆಯಿಂದಲೇ ಕೆಲಸ

ಹೊಸದಿಲ್ಲಿ: ಶೇ. 50 ರಷ್ಟು ದಿಲ್ಲಿ ಸರಕಾರಿ ಅಧಿಕಾರಿಗಳು ಮನೆಯಿಂದಲೇ ಕೆಲಸ ಮಾಡುತ್ತಾರೆ ಎಂದು ಪರಿಸರ ಸಚಿವ ಗೋಪಾಲ್ ರೈ Environment Minister Gopal Rai ಶುಕ್ರವಾರ ಹೇಳಿದ್ದಾರೆ.
ಶೇ. 50 ರಷ್ಟು ದಿಲ್ಲಿ ಸರಕಾರಿ ಅಧಿಕಾರಿಗಳು ಮನೆಯಿಂದಲೇ ಕೆಲಸ ಮಾಡುತ್ತಾರೆ ಎಂದ ರೈ ಖಾಸಗಿ ಕಚೇರಿಗಳಿಗೂ ಇದನ್ನು ಅನುಸರಿಸುವಂತೆ ಸಲಹೆ ನೀಡಿದರು.
"ಕಂದಾಯ ಆಯುಕ್ತರು ಮಾರುಕಟ್ಟೆಗಳು ಹಾಗೂ ಕಚೇರಿಗಳಿಗೆ ಸಮಯದ ಯೋಜನೆಯನ್ನು ಸಿದ್ಧಪಡಿಸುತ್ತಾರೆ" ಎಂದು ರೈ ಹೇಳಿದರು.
ದಿಲ್ಲಿಯ ಹಾಟ್‌ಸ್ಪಾಟ್‌ಗಳಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟಲು ವಿಶೇಷ ಕಾರ್ಯಪಡೆಗಳನ್ನು ಸ್ಥಾಪಿಸಲಾಗುವುದು ಎಂದು ರೈ ಘೋಷಿಸಿದರು
ಶುಕ್ರವಾರದ ಅಧಿಕೃತ ಅಂಕಿಅಂಶಗಳು ಪಂಜಾಬ್‌ನಲ್ಲಿನ ಹುಲ್ಲು ಸುಡುವಿಕೆಯು ದಿಲ್ಲಿಯ ಮಾಲಿನ್ಯಕ್ಕೆ ಶೇಕಡಾ 34 ರಷ್ಟು ಕೊಡುಗೆ ನೀಡಿದೆ ಎಂದು ಬಹಿರಂಗಪಡಿಸಿದೆ.
Next Story





