ಅರೆಹೊಳೆ | ರಸ್ತೆ ಅಪಘಾತ: ಪತ್ರಿಕಾ ಏಜೆಂಟ್ ಮೃತ್ಯು

ಕುಂದಾಪುರ, ನ.4: ಬೈಕೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಪತ್ರಿಕಾ ಏಜೆಂಟ್, ಯುವ ಉದ್ಯಮಿ ಮೃತಪಟ್ಟ ಘಟನೆ ಅರೆಹೊಳೆ ಕ್ರಾಸ್ ಬಳಿ ಗುರುವಾರ ರಾತ್ರಿ ಸಂಭವಿಸಿದೆ.
ಕಿರಿಮಂಜೇಶ್ವರ ಗ್ರಾಮದ ಅರೆಹೊಳೆ ಕ್ರಾಸ್ ಸಿಲ್ವರ್ ಕಾಲನಿ ನಿವಾಸಿ ಗಿರೀಶ ಮೋಗವೀರ (27) ಮೃತಪಟ್ಟವರು.
ಗಿರೀಶ ನ.2ರಂದು ರಾತ್ರಿ ನಾವುಂದ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಕೊಂಡು ಮನೆ ಕಡೆಗೆ ಹೋಗುತ್ತಿದ್ದ ಸಂದರ್ಭ ಬೈಕ್ ಸ್ಕಿಡ್ ಉರುಳಿ ಬಿತ್ತೆನ್ನಲಾಗಿದೆ. ಈ ವೇಳೆ ರಸ್ತೆಗೆಸೆಲ್ಪಟ್ಟ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ತತ್‌ಕ್ಷಣ ಕುಂದಾಪುರ ಖಾಸಗಿ ಆಸ್ಪತ್ರೆಗೆ ಸಾಗಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
Next Story





