ಎನ್‌ಪಿಎಸ್ ರದ್ಧತಿಗೆ ಸಮಾಜ ಕಲ್ಯಾಣ ಸಚಿವವರೊಂದಿಗೆ ಚರ್ಚೆ

ಉಡುಪಿ : ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರ ಸಂಘಟನೆ ಉಡುಪಿ ಜಿಲ್ಲಾ ಫಟಕ ಮತ್ತು ಕುಂದಾಪುರ ತಾಲೂಕು ಘಟಕದ ನಿಯೋಗ ವಿಧಾನ ಪರಿಷತ್ ಸಭಾನಾಯಕ ಮತ್ತು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿ ಎನ್‌ಪಿಎಸ್ ರದ್ದು ಮಾಡುವ ಕುರಿತು ಚರ್ಚಿಸಿದೆ.
ಎನ್‌ಪಿಎಸ್ ರದ್ದತಿಯಿಂದ ಸರಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ. ಸುಮಾರು ೬ ಲಕ್ಷ ಎನ್‌ಪಿಎಸ್ ನೌಕರರ ಸರಕಾರದ ವಂತಿಗೆ ಶೇ.೧೪ ಸೇರಿ ಪ್ರತಿ ತಿಂಗಳು ಸಾವಿರಾರು ಕೋಟಿ ರೂ. ಷೇರು ಮಾರುಕಟ್ಟೆ ಪಾಲಾಗುವುದನ್ನು ತಪ್ಪಿಸಿ ಸರಕಾರದ ಜನಪ್ರಿಯ ಯೋಜನೆಗಳ ಅನುಷ್ಟಾನಕ್ಕೆ ಬಳಸಿಕೊಳ್ಳಬಹುದು ಎಂದು ನಿಯೋಗ ಸಚಿವರಿಗೆ ಮನವರಿಕೆ ಮಾಡಿಸಿತು.
ಈಗಾಗಲೇ ಐದು ರಾಜ್ಯಗಳು ಎನ್‌ಪಿಎಸ್ ರದ್ದು ಮಾಡಿವೆ. ಎನ್‌ಪಿಎಸ್ ವ್ಯಾಪ್ತಿಗೆ ಬಂದು ನಿವೃತ್ತಿ ಮತ್ತು ಹೊಂದಿದ ಕುಟುಂಬಗಳು ಬೀದಿಗೆ ಪಾಲಾಗಿ ರುವುದನ್ನು ತಿಳಿಸಲಾಯಿತು. ರಾಜ್ಯಾಧ್ಯಕ್ಷ ಶಾಂತಾರಾಮ್ ನೇತೃತ್ವದಲ್ಲಿ ಎನ್‌ಪಿಎಸ್ ಸಂಕಲ್ಪಯಾತ್ರೆ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ ಶಾಸಕರು, ಸಚಿವರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಹಿರಿಯ ಅಧಿಕಾರಿಯವರಿಗೆ ಮನವಿ ಸಲ್ಲಿಸುತ್ತಿದೆ.
ಡಿ.೧೯ರಿಂದ ಮಾಡು ಇಲ್ಲವೇ ಮಡಿ ಹೋರಾಟ ನಡೆಯಲಿದ್ದು ಅನಿರ್ದಿ ಷ್ಟಾವಧಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ಇದರ ಪೂರ್ವದಲ್ಲಿ ಮುಖ್ಯಮಂತ್ರಿಯವರಿಗೆ ಎನ್‌ಪಿಎಸ್ ರದ್ದತಿ ಬಗ್ಗೆ ಒತ್ತಡ ತರುವಂತೆ ಸಚಿವ ರಲ್ಲಿ ಮನವಿ ಮಾಡಲಾಗುತ್ತಿದೆ ಎಂದು ನಿಯೋಗ ತಿಳಿಸಿತು. ಇದಕ್ಕೆ ಸಕಾರತ್ಮಕ ವಾಗಿ ಸ್ಪಂದಿಸಿದ ಸಚಿವರು ಹಳೆ ಪಿಂಚಣಿ ಬಗ್ಗೆ ಸದನದಲ್ಲಿ ಅನೇಕ ಚರ್ಚೆ ಗಳಾಗಿದ್ದು, ಪೂರಕವಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಿಯೋಗದಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಘವ ಶೆಟ್ಟಿ, ತಾಲೂಕು ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಮೆಸ್ಕಾಂನ ರಾಘವೇಂದ್ರ, ಭರತ್‌ರಾಜ್ ಶೆಟ್ಟಿ, ಅರಣ್ಯ ಇಲಾಖೆಯ ರವಿ, ಎನ್‌ಪಿಎಸ್ ನೌಕರರರು ಉಪಸ್ಥಿತರಿದ್ದರು.







