ವಿಕಲಚೇತನರಿಂದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು, ನ.4: ಶಿಶು ಅಭಿವೃದ್ಧಿ ಯೋಜನೆಯಡಿ ಮಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಗ್ರಾಪಂಗೆ ತಲಾ ಒಬ್ಬರಂತೆ 18ರಿಂದ 45 ವರ್ಷ ಪ್ರಾಯದ ಎಸೆಸ್ಸೆಲ್ಸಿಯಲ್ಲಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ವಿಕಲಚೇತನರಿಂದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯರ ಹುದ್ದೆಗೆ 9,000 ರೂ.ಗಳಂತೆ ಹಾಗೂ ಪದವಿ ಉತ್ತೀರ್ಣರಾದ ವಿಕಲಚೇತನರಿಂದ ತಾಲೂಕು ಮಟ್ಟದ ವಿವಿಧೊದ್ದೇಶ ಕಾರ್ಯಕರ್ತರ ಹುದ್ದೆಗೆ 15,000 ರೂ.ಗಳಂತೆ ಮಾಸಿಕ ಗೌರವಧನದಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
*ಮಂಗಳೂರು ತಾಲೂಕಿನ ಬಾಳ, ಗಂಜಿಮಠ, ಕಂದಾವರ, ಕುಪ್ಪೆಪದವು, ಮಲ್ಲೂರು, ಮುತ್ತೂರು, ಪಡುಪೆರಾರ, ಉಳಾಯಿಬೆಟ್ಟು ಮತ್ತು ಮೂಡುಬಿದಿರೆ ತಾಲೂಕಿನ ಧರೆಗುಡ್ಡೆ, ಹೊಸಬೆಟ್ಟು, ಇರುವೈಲು, ಪಡುಕೊಣಾಜೆ, ಪಾಲಡ್ಕ, ಪುತ್ತಿಗೆ, ಶಿರ್ತಾಡಿ, ತೆಂಕಮಿಜಾರು, ಮುಲ್ಕಿ ತಾಲೂಕಿನ ಬಳ್ಕುಂಜೆ, ಕೆಮ್ರಾಲ್, ಉಳ್ಳಾಲ ತಾಲೂಕಿನ ಅಂಬ್ಲಮೊಗರು, ಮಂಜನಾಡಿ, ಬೋಳಿಯಾರ್, ಕಿನ್ಯಾ, ಕೊಣಾಜೆ, ಮುನ್ನೂರು ಗ್ರಾಪಂಗಳಲ್ಲಿ ಗ್ರಾಮೀಣ ಪುನರ್ವಸತಿ ಹಾಗೂ ತಾಲೂಕು ಮಟ್ಟದ ವಿವಿಧೊದ್ದೇಶ ಕಾರ್ಯಕರ್ತರ ಹುದ್ದೆ ಖಾಲಿ ಇದೆ.
ಆಸಕ್ತರು ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, 1ನೇ ಮಹಡಿ ಜಿಲ್ಲಾ ಸ್ತ್ರೀಶಕ್ತಿ ಭವನ ಕಟ್ಟಡ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಬಿಜೈ, ಮಂಗಳೂರು-5 ಇಲ್ಲಿಂದ ಅರ್ಜಿ ಪಡೆದು ನ.30ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ: 0824-2263199ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.