ನ.13ರಂದು ಟೇಬಲ್ ಟೆನ್ನಿಸ್ ಪಂದ್ಯಾವಳಿ

ಉಡುಪಿ, ನ.4: ಉಡುಪಿ ಮತ್ತು ದ.ಕ. ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಶನ್ ವತಿಯಿಂದ ಉಡುಪಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಫೌಂಡೇಶನ್, ಪಡುಕೋಣೆ ಟೇಬಲ್ ಟೆನ್ನಿಸ್ ಸೆಂಟರ್ ಫಾರ್ ಎಕ್ಸೆೆಲೆನ್ಸ್‌ನ ಸಹಯೋಗದಲ್ಲಿ ನ.13ರಂದು ಕಲ್ಯಾಣಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ರ್ಯಾಂಕಿಂಗ್ ಟೇಬಲ್ ಟೆನ್ನಿಸ್ ಪಂದ್ಯಾವಳಿ ನಡೆಯಲಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಪೌಂಡೇಶನ್ ಅಧ್ಯಕ್ಷ ಶ್ರೀರಾಮ ಕೌಡೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬಹುದು. ನ.9ಕ್ಕೆ ನೋಂದಣಿ ಕೊನೆಯ ದಿನಾಂಕವಾಗಿದ್ದು, 5 ವಿಭಾಗದಲ್ಲಿ ವಿವಿಧ ವಯೋಮಾನ ದವರಿಗೆ ಮುಕ್ತ ಪಂದ್ಯಾವಳಿ ನಡೆಯಲಿದೆ. 300ರಿಂದ 400 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಮಾಹಿತಿ ಮತ್ತು ನೋಂದಣಿಗೆ 9481675900, 8618403365 ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಡುಕೋಣೆ ಟೇಬಲ್ ಟೆನ್ನಿಸ್ ಸೆಂಟರ್ ಫಾರ್ ಎಕ್ಸೆಲೆನ್ಸನ ಅಶ್ವಿನ್ ಪಡುಕೋಣೆ ಉಪಸ್ಥಿತರಿದ್ದರು.





