ಪತ್ನಿಯಿಂದ ಪೊಲೀಸರಿಗೆ ದೂರು: ವಿಚಾರಣೆಗೆ ಹಾಜರಾಗದೆ ಪತಿ ನಾಪತ್ತೆ

ಬ್ರಹ್ಮಾವರ: ಪತ್ನಿ ಪೊಲೀಸರಿಗೆ ನೀಡಿದ ದೂರು ಅರ್ಜಿಯ ವಿಚಾರಣೆಗೆ ಹಾಜರಾಗದೆ ಪತಿ ನಾಪತ್ತೆಯಾಗಿರುವ ಘಟನೆ ನ.1ರಂದು ನಡೆದಿದೆ.
ನಾಪತ್ತೆಯಾದವರನ್ನು ಹಾರಾಡಿ ಗ್ರಾಮದ ಮೂಡುಕುಕ್ಕುಂಡೆ ಲಕ್ಷ್ಮೀ ನಗರ ನಿವಾಸಿ ದಯಾನಂದ ಎಂದು ಗುರುತಿಸಲಾಗಿದೆ. ಇವರು ವಿಪರೀತ ಶರಾಬು ಕುಡಿದು ಬಂದು ಪತ್ನಿ ಸಂಗೀತಾ ಅವರೊಂದಿಗೆ ಗಲಾಟೆ ಮಾಡುತ್ತಿದ್ದು, ಈ ಬಗ್ಗೆ ನ.1ರಂದು ಸಂಗೀತಾ ಪತಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ಅರ್ಜಿ ನೀಡಿದ್ದರು.
ನಂತರ ಅರ್ಜಿ ವಿಚಾರಣೆಯ ಬಗ್ಗೆ ದಯಾನಂದ ಠಾಣೆಗೆ ಬಾರದೆ ಇದ್ದು, ಅದೇ ದಿನ ಬೆಳಗ್ಗೆ ಮನೆಯಿಂದ ಸ್ಕೂಟರನ್ನು ತೆಗೆದುಕೊಂಡು ಹೋಗಿ ದೂಪದ ಕಟ್ಟೆಯ ರಸ್ತೆಯ ಬದಿಯಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





