ಭೂಮಿ ಹಕ್ಕುಪತ್ರ ಮಂಜೂರು ಮಾಡುವಂತೆ ಧರಣಿ

ಬೈಂದೂರು: ಅಖಿಲ ಭಾರತ ಕೃಷಿಕೂಲಿಕಾರರ ಸಂಘ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಭೂಮಿ ಯಲ್ಲಿ ವಾಸವಾಗಿರುವ ಹಾಗೂ ನಿವೇಶನ ಸ್ಥಳ ಕೋರಿ ಸಲ್ಲಿಸಿದ ಅರ್ಜಿದಾರರಿಗೆ ಭೂಮಿ ಹಕ್ಕು ಪತ್ರ ಮಂಜೂರು ಮಾಡಲು ಒತ್ತಾಯಿಸಿ ರೈತ ಕೃಷಿಕೂಲಿಕಾರರು ಇಂದು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಕುರಿತ ಮನವಿಯನ್ನು ತಹಶೀಲ್ದಾರ್ ಶ್ರೀಕಾಂತ ಎಸ್.ಹೆಗ್ಡೆ ಅವರಿಗೆ ಸಲ್ಲಿಸಲಾಯಿತು. ಕೃಷಿಕೂಲಿಕಾರರ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಸಿ ವೆಂಕಟೇಶ್ ಕೋಣಿ, ಕಾರ್ಯದರ್ಶಿ ನಾಗರತ್ನ ನಾಡ, ನಾಗರತ್ನ ಪಡು ವರಿ, ಸಿಐಟಿಯು ತಾಲೂಕು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಮೊದಲಾದವರು ಉಪಸ್ಥಿತರಿದ್ದರು.
Next Story





