ದ.ಕ.ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ಗೆ ತಾತ್ಕಾಲಿಕ ನಿರ್ಬಂಧಕಾಜ್ಞೆ

ಮಂಗಳೂರು : ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಹಾಲಿ ಸಮಿತಿಯ ವಿರುದ್ಧ ತಾತ್ಕಾಲಿಕ ನಿರ್ಬಂಧಕಾಜ್ಞೆ ಕೋರಿ ಸಲ್ಲಿಸಿರುವ 4ನೇ ಮಧ್ಯಂತರ ಅರ್ಜಿಯನ್ನು ನಾಲ್ಕನೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಪುರಸ್ಕರಿಸಿದ್ದಾರೆ.
ಸಂಘಟನೆಯ ಕಾರ್ಯದರ್ಶಿ ಐವಾನ್ ಪತ್ರಾವೋ ಸಹಿತ ಇತರ ಪದಾಧಿಕಾರಿಗಳ ವಿರುದ್ಧ ಸಂಘಟನೆಯ ಸದಸ್ಯರಾದ ದೀಪಕ್ ಕುಮಾರ್, ಸಂತೋಷ್ ಕುಮಾರ್ ಶೆಟ್ಟಿ ನ್ಯಾಯಾಲಯಕ್ಕೆ ದೂರು ನೀಡಿ ಸಂಘಟನೆಯ ಪದಾಧಿಕಾರಿಗಳು ಕಾನೂನು ಬದ್ಧವಾಗಿ ಆಯ್ಕೆಯಾಗಿಲ್ಲ. ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದ್ದರು.
ಅದರಂತೆ ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ಗೆ ಸಂಬಂಧಿಸಿದಂತೆ ಯಾವುದೇ ಸಾಮಾನ್ಯ ಸಭೆ ನಡೆಸದಂತೆ ಹಾಗೂ ಯಾವುದೇ ಪ್ರಾಧಿಕಾರ ಅಥವಾ ಸಂಸ್ಥೆ, ಬ್ಯಾಂಕ್‌ಗಳ ಮುಂದೆ ಅಸೋಸಿಯೇಶನ್ ಪರವಾಗಿ ಭಾಗವಹಿಸದಂತೆ ಹಾಗೂ ಸರಕಾರ, ಸಾರ್ವಜನಿಕರಿಂದ ಯಾವುದೇ ರೀತಿಯಲ್ಲಿ ವಂತಿಗೆಗಳನ್ನು ಸಂಗ್ರಹ ಮಾಡದಂತೆ ನ್ಯಾಯಾಲಯ ತಾತ್ಕಾಲಿಕ ನಿರ್ಬಂಧಕಾಜ್ಞೆ ನೀಡಿದೆ.
Next Story