ಸಿಟಿ ಗೋಲ್ಡ್‌ನಿಂದ ‘ವೆಡ್ಡಿಂಗ್ ಆಫ್ ವಂಡರ್ಸ್’ನ ಪ್ರದರ್ಶನ ಮೇಳಕ್ಕೆ ಗಣ್ಯರ ಭೇಟಿ

ಮಂಗಳೂರು : ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿರುವ ಸಿಟಿ ಗೋಲ್ಡ್ ವತಿಯಿಂದ ನಡೆಯುವ ‘ವೆಡ್ಡಿಂಗ್ ಆಫ್ ವಂಡರ್ಸ್’ (ವೋವ್) ಪ್ರಯುಕ್ತದ ಪ್ರದರ್ಶನ-ಮೇಳಕ್ಕೆ ಶುಕ್ರವಾರ ಪ್ರಸಿದ್ಧ ಮೇಕಪ್ ಆರ್ಟಿಸ್ಟ್‌ಗಳು ಹಾಗೂ ಮೋಡಲ್‌ಗಳು ಭೇಟಿ ನೀಡಿದರು.
ಮೇಕಪ್ ಆರ್ಟಿಸ್ಟ್‌ಗಳಾದ ಅಝ್ಮಿ ಅರಾಫತ್, ಸೆಮಿನಾಝ್, ಅಸ್ಮೀನಾ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಿ ಪುರಸ್ಕರಿಸಿದರಲ್ಲದೆ, ಶುಭ ಹಾರೈಸಿದರು.
ನ.3ರಂದು ಆರಂಭಗೊಂಡ ‘ವೆಡ್ಡಿಂಗ್ ಆಫ್ ವಂಡರ್ಸ್’ (ವೋವ್) ಡಿಸೆಂಬರ್ 15ರವರೆಗೆ ನಡೆಯಲಿದೆ. ಆ ಹಿನ್ನೆಲೆಯಲ್ಲಿ ನ.6ರವರೆಗೆ ಬೃಹತ್ ಪ್ರದರ್ಶನ ಮೇಳವು ಸಿಟಿ ಗೋಲ್ಡ್ ಶೋರೂಮ್‌ನಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story