ಉದ್ಯೋಗ ಸೃಜನ ಯೋಜನೆ: ಅರ್ಜಿ ಆಹ್ವಾನ

ಮಂಗಳೂರು: ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಸ್ವಯಂ ಉದ್ಯೋಗ ಸ್ಥಾಪಿಸಲು ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿದಾರರಿಗೆ ಕನಿಷ್ಟ 18 ವರ್ಷ ವಯಸ್ಸಾಗಿರಬೇಕು. ಉತ್ಪಾದನಾ ಚಟುವಟಿಕೆಗಳಿಗೆ ಯೋಜನಾ ವೆಚ್ಚ 50 ಲಕ್ಷ ರೂ., ಸೇವಾ ಚಟುವಟಿಕೆಗಳಿಗೆ ಯೋಜನಾ ವೆಚ್ಚ 20 ಲಕ್ಷ ರೂ., ಉತ್ಪಾದನಾ ಚಟುವಟಿಕೆಗಳಿಗೆ 10 ಲಕ್ಷದ ಮೇಲಿನ ಯೋಜನೆಗಳಿಗೆ/ಸೇವಾ ಚಟುವಟಿಕೆಗಳಿಗೆ 5 ಲಕ್ಷದ ಮೇಲಿನ ಯೋಜನೆಗಳಿಗೆ ಕನಿಷ್ಟ 8ನೇ ತರಗತಿ ತೇರ್ಗಡೆ ಹೊಂದಿರಬೇಕು. ಈ ಯೋಜನೆಯಲ್ಲಿ ಹೊಸ ಘಟಕಗಳಿಗೆ ಮಾತ್ರ ಅವಕಾಶವಿರುತ್ತದೆ.
ಇತರೆ ಸ್ವಯಂ ಉದ್ಯೋಗ ಯೋಜನೆಯಡಿ ಸಹಾಯಧನವನ್ನು ಈಗಾಗಲೇ ಪಡೆದಿದ್ದಲ್ಲಿ ಈ ಯೋಜನೆಯಡಿ ಸಾಲ ಪಡೆಯಲು ಅರ್ಹತೆ ಇರುವುದಿಲ್ಲ. ಹೊಸ ಮಾರ್ಗಸೂಚಿ ಅನ್ವಯ ಹಾಲಿನ ಉತ್ಪನ್ನಗಳ ಘಟಕ ಸ್ಥಾಪಿಸಲು ಹಾಗೂ ಪೌಲ್ಟ್ರಿ, ಅಕ್ವಕಲ್ಚರ್, ಜೇನುಕೃಷಿ ಚಟುವಟಿಕೆಗಳಿಗೆ ಅವಕಾಶವಿರುತ್ತದೆ.
ಸಾಮಾನ್ಯ ವರ್ಗ ಫಲಾನುಭವಿಯ ವಂತಿಗೆ ಶೇ.10, ಸಹಾಯಧನ ನಗರ 15, ಗ್ರಾಮೀಣ 25, ವಿಶೇಷ ವರ್ಗ (ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ/ ಹಿಂದುಳಿದ ವರ್ಗ/ ಅಲ್ಪಸಂಖ್ಯಾತರು/ಮಹಿಳೆಯರು/ಮಾಜಿಸೈನಿಕರು/ಅಂಗವಿಕಲರು) ಫಲಾನುಭವಿಯ ವಂತಿಗೆ ಶೇ.5, ಸಹಾಯಧನ ನಗರ ಶೇ. 25, ಗ್ರಾಮೀಣ ಶೇ.35 ಲಭ್ಯವಿದೆ. ಆಸಕ್ತರು