ಕವಿಯು ನಾಟಕಕಾರರನಲ್ಲ, ಪಾತ್ರದಾರಿ: ಡಾ.ಬಂಜಗೆರೆ ಜಯಪ್ರಕಾಶ್
ಬೆಂಗಳೂರು, ನ. 4: ‘ಕವಿಯ ವ್ಯಕ್ತಿತ್ವ ಎಷ್ಟು ಸತ್ಯವೋ, ಕವಿತೆಯು ಅಷ್ಟೇ ಸತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಕವಿಯು ನಾಟಕಕಾರರನಲ್ಲ’ ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸಂತ ಜೋಸೆಫರ ವಾಣಿಜ್ಯ ಕಾಲೇಜಿನ ಕನ್ನಡ ಸಂಘವು ಆಯೋಜಿಸಿದ್ದ ‘ಸಮಾಧಿಗಳು ಪ್ರತಿಭಟಿಸುವುದಿಲ್ಲ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕವಿಯು ಪಾತ್ರದಾರಿ ಆಗಿರುತ್ತಾನೆ. ಕಾವ್ಯವೂ ನಾಟಕವಾಗಿರುತ್ತದೆ. ಹಾಗಾಗಿ ಕವಿಯು ನಾಟಕಕಾರನಾಗಿರುವುದಿಲ್ಲ. ಕವಿಗೆ ಏನನ್ನು ಹೇಳಬೇಕು ಮತ್ತು ಯಾರಿಗೆ ಹೇಳಬೇಕು ಎಂಬುದರ ಬಗ್ಗೆ ಸ್ಪಷ್ಟನೆ ಇರಬೇಕು. ಹಾಗೆಯೇ ಕವಿತೆಯ ಪರಿಣಾಮವನ್ನು ಎದುರಿಸುವ ಗುಣವೂ ಕವಿಗೆ ಇರಬೇಕು’ ಎಂದರು.
ಕಾರ್ಯಕ್ರಮದಲ್ಲಿ ಕವಿಯತ್ರಿ ಡಾ.ಎಚ್.ಎಲ್.ಪುಷ್ಪ, ಸಂತ ಜೋಸೆಫರ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ.ಚಾಲ್ರ್ಸ್ ಲಸ್ರಾಡೋ ಯೇ.ಸ, ಕೃತಿಯ ಲೇಖಕ ಡಾ.ಟಿ.ಎಚ್.ಲವಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Next Story