ಚಾಮರಾಜನಗರ: ಅಂತರಾಜ್ಯ ಸ್ಪಿರಿಟ್ ಸಾಗಾಟ ಪತ್ತೆ; ಮೂವರ ಬಂಧನ
ಚಾಮರಾಜನಗರ: ಅಂತರಾಜ್ಯ ಸ್ಪಿರಿಟ್ ಕಳ್ಳಸಾಗಣೆಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳ ಮೂಲದ ಹರಿ, ಪೋಸಟ್, ವಿನೋದ್ ಕುಮಾರ್ ಬಂಧಿತರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಾಮರಾಜನಗರ ಪುಣಜನೂರು ಚಕ್ ಪೋಸ್ಟ್ ನಲ್ಲಿ ಸುಮಾರು 5 ಲಕ್ಷ ರೂ. ಮೌಲ್ಯದ ಸ್ಪಿರಿಟ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
35 ಲೀಟರ್ ಸಾಮರ್ಥ್ಯದ 202 ಕ್ಯಾನ್‌ಗಳಲ್ಲಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ 7,070 ಲೀಟರ್ ಸ್ಪಿರಿಟ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story