‘ಖೇಲ್ ರತ್ನ’ ಪ್ರಶಸ್ತಿಗೆ ಟೇಬಲ್ ಟೆನಿಸ್ ತಾರೆ ಶರತ್ ಕಮಲ್ ಹೆಸರು ಶಿಫಾರಸು

ಹೊಸದಿಲ್ಲಿ: ಭಾರತ ಟೇಬಲ್ ಟೆನಿಸ್ ತಾರೆ ಅಚಂತಾ ಶರತ್ ಕಮಲ್ Table Tennis Star Sharath Kamal ಅವರನ್ನು ಪ್ರತಿಷ್ಠಿತ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಸಮಿತಿ ಶಿಫಾರಸು ಮಾಡಿದೆ. ಲಕ್ಷ್ಯ ಸೇನ್ (ಬ್ಯಾಡ್ಮಿಂಟನ್) ಹಾಗೂ ಅಂಶು ಮಲಿಕ್ (ಕುಸ್ತಿ) ಅರ್ಜುನ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೂರು ಚಿನ್ನ ಹಾಗೂ ಒಂದು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿರುವ 40 ರ ಹರೆಯದ ಶರತ್ ಕಮಲ್ 2022 ರಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ.
ಈ ವರ್ಷ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾದ ಏಕೈಕ ಕ್ರೀಡಾಪಟು ಶರತ್ ಎಂಬುದು ಗಮನಾರ್ಹ ಅಂಶವಾಗಿದೆ. ಶರತ್ ಕಮಲ್ ಕೂಡ ಎರಡು ಬಾರಿ ಏಷ್ಯನ್ ಗೇಮ್ಸ್ ಪದಕ ವಿಜೇತರಾಗಿದ್ದಾರೆ.
ಮಣಿಕಾ ಬಾತ್ರಾ ನಂತರ ಖೇಲ್ ರತ್ನ ಪಡೆಯಲಿರುವ ಎರಡನೇ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್.
ಅರ್ಜುನ ಪ್ರಶಸ್ತಿಗೆ ಲಕ್ಷ್ಯ ಸೇನ್, ನಿಖತ್ ಝರೀನ್, ಚೆಸ್ ತಾರೆ ಆರ್, ಪ್ರಜ್ಞಾನಂದ, ಅಂಶು ಮಲಿಕ್ ಹಾಗೂ ಸರಿತಾ ಮೋರ್ ಸೇರಿದಂತೆ ಒಟ್ಟು 25 ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಈ ವರ್ಷ ಅರ್ಜುನ ಪ್ರಶಸ್ತಿಗೆ ಯಾವುದೇ ಕ್ರಿಕೆಟಿಗನನ್ನು ಶಿಫಾರಸು ಮಾಡಿಲ್ಲ ಎಂಬುದು ಉಲ್ಲೇಖಾರ್ಹ.