'ಕೇದಾರ್-(ಹೈ ಲಿವಿಂಗ್ ಲಕ್ಷುರಿ ಹೋಮ್ಸ್) ವಸತಿ ಸಮುಚ್ಚಯ ಯೋಜನೆಗೆ ಚಾಲನೆ

ಮಂಗಳೂರು, ನ.3: ಮಂಗಳೂರು ವಿಮಾನ ನಿಲ್ದಾಣ ರಸ್ತೆಯ ದೇರೆಬೈಲ್‌ನಲ್ಲಿ ನಿರ್ಮಾಣ ಗೊಳ್ಳಲಿರುವ ಕೇದಾರ್ ವಸತಿ ಸಮುಚ್ಚಯ ಕ್ಕೆ ಅತಿಥಿಗಳ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿದ ಬಳಿಕ ದೇರೆಬೈಲ್ ಚರ್ಚ್ನ ಧರ್ಮ ಗುರು ವಂ.ಜೋಸೆಫ್ ಮಾರ್ಟಿಸ್ ಆಶೀರ್ವಚನ ನೀಡಿ ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ರೆಡೈ ಕರ್ನಾಟಕದ ಉಪಾಧ್ಯಕ್ಷ ಡಿ.ಬಿ.ಮೆಹ್ತಾ ಮಾತನಾಡಿ, ರಿಯಲ್ ಎಸ್ಟೇಟ್ ಮನೆಗಳನ್ನು ನಿರ್ಮಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಕ್ರೆಡೈ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೇದಾರ್ ಯೋಜನೆಗೆ ಶುಭ ಹಾರೈಸಿದರು.
ಮನಪಾ ಮೇಯರ್ ಜಯಾನಂದ ಶುಭ ಹಾರೈಸಿದರು. ಮಾಜಿ ಮೇಯರ್ ಶಶಿಧರ ಹೆಗ್ಡೆ ಮಾತನಾಡಿ, ಮಂಗಳೂರು ಅಭಿವೃದ್ಧಿ ಗೆ ಬಿಲ್ಡರ್ ಗಳು ಕೊಡುಗೆ ನೀಡಿದ್ದಾರೆ. ಜನರಿಗೆ ಶಾಂತಿ, ನೆಮ್ಮದಿ, ಸುರಕ್ಷತೆಯನ್ನು ತಾವಿರುವ ಮನೆ ನೀಡುತ್ತದೆ ಆ ರೀತಿಯ ಕನಸಿನ ಮನೆ ಕೇದಾರ್ ವಸತಿ ಸಂಕೀರ್ಣದ ಮೂಲಕ ಸಾಕಾರ ಗೊಳ್ಳಲು ಸಾಧ್ಯ. ಈ ಕನಸು ನನಸಾಗಲಿ ಎಂದು ಹಾರೈಸಿದರು.
ಯೋಜನೆಯ ಪ್ರವರ್ತಕ ರಾದ ಗುರುದತ್ತ ಶೆಣೈ ಯೋಜನೆಯ ಬಗ್ಗೆ ಮಾತನಾಡಿ, ‘ಮುಕುಂದ್ ಎಂಜಿಎಂ ರಿಯಾಲ್ಟಿ’ ಸಂಸ್ಥೆಯು ಇದೀಗ ನಗರದ ಜನತೆಗೆ ಎಲ್ಲಾ ಸೌಕರ್ಯ ಗಳನ್ನು ಒಳಗೊಂಡ ಅಪಾರ್ಟ್‌ಮೆಂಟ್ ‘ಕೇದಾರ್-ಹೈ ಲಿವಿಂಗ್ ಲಕ್ಶುರಿ ಹೋಮ್ಸ್’ ವಸತಿ ಸಮುಚ್ಚಯ.ಈ ಅಪಾರ್ಟ್ ಮೆಂಟ್ ನಲ್ಲಿ ಉತ್ತಮ ಗುಣಮಟ್ಟದ ಎಲ್ಲಾ ರೀತಿಯ ಐಶಾರಾಮಿ ಸೌಕರ್ಯಗಳು,ಮಿತ ದರದಲ್ಲಿ ಲಭ್ಯವಾಗಲಿವೆ. ನಿರ್ಮಾಣ ಮತ್ತು ಸೌಕರ್ಯ ಕಲ್ಪಿಸುವುದರಲ್ಲಿ ಉತ್ತಮ ಹೆಸರು ಪಡೆದಿರುವ ಸಂಸ್ಥೆಯು ಕೇದಾರ್ ವಸತಿ ಸಮುಚ್ಚಯದಲ್ಲಿ 16 ಅಂತ ಸ್ತುಗಳನ್ನು ಒಳಗೊಂಡ 78 ಮನೆಗಳನ್ನು ವಾಸ್ತು ಪ್ರಕಾರದಲ್ಲಿ ನಿರ್ಮಿಸಲಿದೆ.ಈ ಯೋಜನೆಯಲ್ಲಿ 2 ಮತ್ತು 3 ಬಿಎಚ್‌ಕೆ ಫ್ಲ್ಯಾಟ್‌ಗಳಲ್ಲದೆ ಐಶಾರಾಮಿಯಾದ 4 ಬಿಎಚ್‌ಕೆ ಫ್ಲ್ಯಾಟ್‌ಗಳೂ ನಿರ್ಮಾಣ ಗೊಳ್ಳಲಿವೆ. ಅಲ್ಲದೆ ಫ್ಲ್ಯಾಟ್ ಖರೀದಿಸಿದ ಗ್ರಾಹಕರಿಗೆ ಮುಕ್ತ ವಾತಾವರಣ ಅನುಭವ ವನ್ನು ಒದಗಿಸುವ ಉದ್ದೇಶದಿಂದ ಸುಮಾರು 15,000 ಚದರ ಅಡಿಯಷ್ಟು ಸ್ಥಳವನ್ನು ಲ್ಯಾಂಡ್ ಸ್ಕೇಪಡ್ ಗಾರ್ಡನ್ ಆಗಿ ರೂಪಾಂತರಗೊಳಿಸಲಾಗಿದೆ ಎಂದು ಗುರುದತ್ತ ಶೆಣೈ ತಿಳಿಸಿದ್ದಾರೆ.
ಸಮಾರಂಭದಲ್ಲಿ ಮನಪಾ ಸದಸ್ಯೆ ರಂಜಿನಿ ಎಲ್. ಕೋಟ್ಯಾನ್, ಸಂಸ್ಥೆಯ ಪ್ರವರ್ತಕರಾದ ಗುರುದತ್ತ ಶೆಣೈ, ಮಂಗಲ್‌ದೀಪ್, ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು.
ಜಾಗದ ಮಾಲಕ ಎಲ್ಯಾಸ್ ಸ್ಯಾಂಕ್ಟಿಸ್ ಸ್ವಾಗತಿಸಿದರು.ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿದರು.
ಕೇದಾರ್ ವಸತಿ ಸಮುಚ್ಚಯ ದಲ್ಲಿಆಧುನಿಕ ಮಾದರಿಯ ಸೌಕರ್ಯಗಳು:
- ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್ ಆನ್ ರೂಫ್ ಟಾಪ್
- ಸ್ನೇಕ್ಸ್ ಆ್ಯಂಡ್ ಲ್ಯಾಡರ್ಸ್ ಔಟ್‌ಡೋರ್ ಗೇಮ್
- ಬಾಡ್‌ಮಿಂಟನ್ ಕೋರ್ಟ್
- ಓಪನ್ ಆ್ಯರ್ ಥಿಯೇಟರ್
- ಔಟ್‌ಡೋರ್ ಓಪನ್ ಜಿಮ್ನಾಷಿಯಮ್
- ಒಳಾಂಗಣ ಹಾಗೂ ಹೊರಾಂಗಣ ಆಟದ ತಾಣ
- ಮಕ್ಕಳ ಆಟದ ತಾಣ
- ಲೈಬ್ರೆರಿ
- ಯೋಗಾ ಪೆವಿಲಿಯನ್
- ವಿಶಾಲವಾದ ಡಬಲ್ ಹೈಟ್ ಹೊಂದಿರುವ ವಿಸಿಟರ್ಸ್ ಲೋಬಿ
- ಇಂಟರ್‌ಕಾಮ್ ಮತ್ತು ಆ್ಯಕ್ಸೆಸ್ ಕಂಟ್ರೋಲ್ಡ್ ಲಾಬಿ ಎಂಟ್ರೆನ್ಸ್
- ಸೋಲಾರ್ ಇಲೆಕ್ಟ್ರಿಕಲ್ ಪ್ಯಾನೆಲ್ಸ್
- ಸಿಸಿ ಟಿವಿ ಕ್ಯಾಮರಾ
- ಸ್ವಯಂಚಾಲಿತ ಎರಡು ಲಿಫ್ಟ್
- ಕಾರ್ ಪಾರ್ಕಿಂಗ್ ಮತ್ತು ಜನರೇಟರ್ ವ್ಯವಸ್ಥೆ ಇರುತ್ತದೆ.
ಕೇದಾರ್ ಅಪಾರ್ಟ್‌ಮೆಂಟ್‌ನ ಬುಕ್ಕಿಂಗ್‌ಗಾಗಿ ಗ್ರಾಹಕರು ನಗರದ ಕಾಪಿಕಾಡ್‌ನ ಸುಪ್ರಭಾತ್ ಬಿಲ್ಡಿಂಗ್‌ನಲ್ಲಿರುವ ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ www.mukundmgmrealty.comನ್ನು ಲಾಗ್‌ಆನ್ ಮಾಡಬಹುದು ಅಥವಾ 9611730555/ 7090933900ಕ್ಕೆ ಕರೆ ಮಾಡಬಹುದು ಎಂದು ಸಂಘಟಕರು ತಿಳಿಸಿದ್ದಾರೆ.