ನ.6ರಂದು ಪ್ರೇರಣಾ ದಶಮಾನೋತ್ಸವ

ಉಡುಪಿ : ಪ್ರೇರಣಾ ಕರಾವಳಿ ಕ್ರಿಶ್ಚಿಯನ್ ಛೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀ ಉಡುಪಿ ಇದರ ದಶಮಾನೋತ್ಸವ ಸಮಾರಂಭ ಮತ್ತು ಸದಸ್ಯರ ಕುಟುಂಬ ಸಹಮಿಲನ ಕಾರ್ಯಕ್ರಮ ನ.6ರಂದು ಸಂಜೆ 6.30ಕ್ಕೆ ಕಡಿಯಾಳಿ ಮಾಂಡವಿ ಟ್ರೇಡ್ ಸೆಂಟರ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ದಾಯ್ಜಿ ವಲ್ಡ್ ಮಾಧ್ಯಮ ಸಂಸ್ಥಾಪಕ ವಾಲ್ಟರ್ ನಂದಳಿಕೆ ಉದ್ಘಾಟಿಸಲಿದ್ದು, ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಸನ್ಮಾನ, ಉದ್ಯಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಸದಸ್ಯ ಉದ್ಯಮಿಗಳಿಗೆ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Next Story





