ಸೆಲಿನಾ ಕರ್ಕಡಗೆ ಶ್ರದ್ಧಾಂಜಲಿ ಸಭೆ

ಉಡುಪಿ : ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಇತ್ತೀಚೆಗೆ ಅಗಲಿದ ನಗರಸಭಾ ಸದಸ್ಯೆ ಸೆಲಿನಾ ಕರ್ಕಡ ಅವರ ಶ್ರದ್ಧಾಂಜಲಿ ಸಭೆ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಜರಗಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕುಶಾಲ್ ಶೆಟ್ಟಿ, ಜಿಪಂ ಮಾಜಿ ಸದಸ್ಯ ದಿವಾಕರ್ ಕುಂದರ್, ನಗರಸಭಾ ಸದಸ್ಯ ಅಮೃತ ಕೃಷ್ಣಮೂರ್ತಿ ಆಚಾರ್ಯ, ಮುಖಂಡರಾದ ನಾಗೇಶ್ ಕುಮಾರ್ ಉದ್ಯಾವರ ಹಾಗೂ ಉಡುಪಿ ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಗಣೇಶ್ ನೆರ್ಗಿ ನುಡಿನಮನ ಸಲ್ಲಿಸಿದರು.
ಸಭೆಯಲ್ಲಿ ಮುಖಂಡರಾದ ನರಸಿಂಹಮೂರ್ತಿ, ಪ್ರಖ್ಯಾತ್ ಶೆಟ್ಟಿ, ಹರೀಶ್ ಕಿಣಿ, ಪ್ರಶಾಂತ್ ಜತ್ತನ್ನ, ಮೀನಾಕ್ಷಿ ಮಾಧವ ಬನ್ನಂಜೆ, ಆನಂದಿ, ವಿಜಯ್ ಪೂಜಾರಿ, ಶಾಂತಾರಾಮ್ ಸಾಲ್ವಂಕರ್, ಯತೀಶ್ ಕರ್ಕೇರ, ಸುರೇಶ್ ಶೆಟ್ಟಿ ಬನ್ನಂಜೆ, ದಯಾನಂದ್ ಗೋಪಾಲಪುರ, ಮಾರ್ಟಿನ್ ಜತ್ತನ್ನ, ತಾರಾನಾಥ್ ಸುವರ್ಣ, ಫಾ.ವಿಲಿಯಮ್ ಮಾರ್ಟಿಸ್, ಮುಹಮ್ಮದ್ ಶೀಶ್, ಅನಂತ್ ನಾಯ್ಕ್, ಮ್ಯಾಕ್ಸಿಮ್ ಡಿಸೋಜ, ಹಸನ್ ಸಾಹೇಬ್, ಮುಹಮ್ಮದ್, ಗಣೇಶ್ ದೇವಾಡಿಗ, ಶಶಿರಾಜ್ ಕುಂದರ್, ಸತೀಶ್ ಪುತ್ರನ್, ಲಕ್ಷ್ಮಣ್ ಪೂಜಾರಿ, ಮಮತಾ ಶೆಟ್ಟಿ, ಜಯಕುಮಾರ್, ಸುಕನ್ಯಾ ಪೂಜಾರಿ, ಲತಾ ಆನಂದ ಶೇರಿಗಾರ್, ಸಾಧನಾ ಕಿಣಿ, ಪ್ರಶಾಂತ್ ಪೂಜಾರಿ, ಶರತ್ ಶೆಟ್ಟಿ, ಸಾಯಿರಾಜ್ ಕಿದಿಯೂರು, ಜಯವೀರ್, ರವಿರಾಜ್, ವೆಂಕಟೇಶ್ ಪೆರಂಪಳ್ಳಿ, ಡಿಯೋನ್ ಡಿಸೋಜ, ಸಾಗರ್, ಸುನಿಲ್ ಬೈಲಕರೆ, ರಿಕಿತ್, ರೀಟಾ, ಭೂಮಿಕಾ, ಸಂಜಯ್ ಆಚಾರ್ಯ ಉಪಸ್ಥಿತರಿದ್ದರು. ಸತೀಶ್ ಕುಮಾರ್ ಮಂಚಿ ಸ್ವಾಗತಿಸಿ ದರು. ಸುಕೇಶ್ ಕುಂದರ್ ವಂದಿಸಿದರು.







