ನ.6: ಮಂಗಳೂರು ಮ್ಯಾರಥಾನ್

ಮಂಗಳೂರು, ನ.5: ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಮಂಗಳೂರು ರನ್ನರ್ಸ್ ಕ್ಲಬ್ ವತಿಯಿಂದ ನ.6ರಂದು ಮುಂಜಾನೆ 5ಕ್ಕೆ ನಗರದ ಮಂಗಳಾ ಸ್ಟೇಡಿಯಂನಲ್ಲಿ ಮಂಗಳೂರು ಮ್ಯಾರಥಾನ್-2022 ಎಂಬ ಮೊದಲ ಆವೃತ್ತಿಯ ಮಂಗಳೂರು ಮ್ಯಾರಥಾನ್‌ಗೆ ಚಾಲನೆ ನೀಡಲಾಗುತ್ತದೆ.
ನಗರದಿಂದ ಹೊರಡುವ ಮ್ಯಾರಥಾನ್ ತಣ್ಣೀರು ಬಾವಿ ಬೀಚ್‌ವರೆಗೆ ಸಾಗಲಿದೆ. ಈ ಮ್ಯಾರಥಾನ್‌ನಲ್ಲಿ ಹಾಫ್ ಮ್ಯಾರಥಾನ್ (21.1ಕಿ.ಮೀ), 10ಕಿ.ಮೀ, 5ಕಿ.ಮೀ, ಮತ್ತು 2ಕಿ.ಮಿ ಓಟದಲ್ಲಿ ಭಾಗವಹಿಸುವ ವಿವಿಧ ವಯೋಮಾನದ 2000ಕ್ಕೂ ಹೆಚ್ಚಿನ ಸ್ಪರ್ಧಿಗಳಿಗೆ 2 ಲಕ್ಷ ರೂ.ವರೆಗಿನ ಬಹುಮಾನಗಳಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
Next Story