ಸುಶಿಕ್ಷಿತ ಪೋಷಕರ ಒಣಪ್ರತಿಷ್ಠೆಯಿಂದ ಮಕ್ಕಳ ಶೋಷಣೆ ಪ್ರಕರಣ: ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ

ಬೆಂಗಳೂರು: ಸುಶಿಕ್ಷಿತ ಪೋಷಕರಿಂದ ಮಕ್ಕಳ ಕಿರುಕುಳ ಪ್ರಕರಣಗಳು ಸಂಭವಿಸುತ್ತಿದ್ದು, ಇದನ್ನು ಸೂಕ್ತ ಶಾಸನ ತರುವ ಮೂಲಕ ಭಿನ್ನವಾಗಿ ನಿಭಾಯಿಸಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಹೈಕೋರ್ಟ್‍ನ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಪೋಕ್ಸೋ ಕಾಯ್ದೆಯ ಅನುಷ್ಠಾನ ಕುರಿತ ರಾಜ್ಯಮಟ್ಟದ ಹಕ್ಕುದಾರರ ಸಭೆಯಲ್ಲಿ ಮಾತನಾಡಿದ ಅವರು, ಇಬ್ಬರೂ ಸುಶಿಕ್ಷಿತ ಪೋಷಕರನ್ನು ಒಳಗೊಂಡ ಮಕ್ಕಳ ಪ್ರಣಯ ಪ್ರಕರಣಗಳು ಮತ್ತು ಲೈಂಗಿಕ ಕಿರುಕುಳಕ್ಕೆ ತುತ್ತಾದ ಮಕ್ಕಳನ್ನು ಇಬ್ಬರೂ ಸುಶಿಕ್ಷಿತ ಪೋಷಕರು ವಶಕ್ಕೆ ಪಡೆಯುವ ಪ್ರಕರಣಗಳನ್ನು ಭಿನ್ನವಾಗಿ ಪರಿಗಣಿಸುವ ಸಂಬಂಧ ಕಾನೂನಾತ್ಮಕ ಬದಲಾವಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
"ಯುನಿಸೆಫ್ ಹಾಗೂ ಸರ್ಕಾರಗಳು ಸೂಕ್ತ ಶಾನಸವನ್ನು ತಂದು ತಂದೆ ಹಾಗೂ ತಾಯಿಯನ್ನು ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಿದಲ್ಲಿ ಮಕ್ಕಳ ವಿರುದ್ಧದ ಶೋಷಣೆ ನಿಲ್ಲಬಹುದು ಎಂದು ಹೇಳಿದರು.
ಹೈಕೋರ್ಟ್ ಮುಂದೆ ಬರುವ ಮಕ್ಕಳನ್ನು ವಶಕ್ಕೆ ಪಡೆಯುವ ಪ್ರಕರಣಗಳಲ್ಲಿ ಇಂಥ ಪೋಷಕರ ಒಣಪ್ರತಿಷ್ಠೆಯಿಂದ ಮಕ್ಕಳು ಯಾತನೆ ಅನುಭವಿಸಬೇಕಾಗುತ್ತದೆ ಎಂದು ವಿಶ್ಲೇಷಿಸಿದರು. ಬಹುತೇಕ ಮಕ್ಕಳ ಶೋಷಣೆ ಪೋಷಕರಿಂದ ಮತ್ತು ಅವರ ಒಣಪ್ರತಿಷ್ಠೆಯಿಂದ ನಡೆಯುತ್ತದೆ. ಸುಶಿಕ್ಷಿತ ಪೋಷಕರು ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಈ ಬಗ್ಗೆ timesofindia.com ವರದಿ ಮಾಡಿದೆ.







