ಕೊಡಾಜೆ: ಮದ್ರಸ ಕಟ್ಟಡ ಉದ್ಘಾಟನೆ, ಪಿ.ಕೆ.ಆದಂ ದಾರಿಮಿಗೆ ಬೀಳ್ಕೊಡುಗೆ

ವಿಟ್ಲ, ನ.6: ಮಾಣಿ - ಕೊಡಾಜೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಸುಮಾರು 32 ವರ್ಷಗಳ ಕಾಲ ಮುದರ್ರಿಸ್, ಖತೀಬರಾಗಿ ಸೇವೆ ಸಲ್ಲಿಸಿದ ಹಾಜಿ ಪಿ.ಕೆ.ಆದಂ ದಾರಿಮಿಯವರಿಗೆ ಬೀಳ್ಕೊಡುಗೆ ಹಾಗೂ ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದ್ರಸದ ಮೇಲಂತಸ್ತಿನ ಕಟ್ಟಡದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.
ಮುಹಮ್ಮದ್ ಶಮೀಮ್ ತಂಙಳ್ ಕುಂಬೋಳ್ ಮದ್ರಸ ಮೇಲಂತಸ್ತಿನ ಕಟ್ಟಡವನ್ನು ಉದ್ಘಾಟಿಸಿ ದುಆ ನೆರವೇರಿಸಿದರು. ಮಸೀದಿಯ ಅಧ್ಯಕ್ಷ ಇಬ್ರಾಹೀಂ ರಾಜ್ ಕಮಲ್ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ ಸ್ವೀಕರಿಸಿದ ಹಾಜಿ ಪಿ.ಕೆ.ಆದಂ ದಾರಿಮಿ ಮಾತನಾಡಿ, ನನ್ನ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದರು.
ಎಸ್.ಬಿ.ದಾರಿಮಿ ಮಾತನಾಡಿ ಶುಭ ಹಾರೈಸಿದರು.
ಕೆ.ಅಬೂಬಕರ್ ಕೊಡಾಜೆ, ಯೂಸುಫ್ ಹಾಜಿ ನೌಫಲ್, ಅದ್ದ ಹಾಜಿ ಕೊಡಾಜೆ, ಇಬ್ರಾಹೀಂ ಹಾಜಿ ಮಾಣಿ, ಮಸೀದಿ ಕೋಶಾಧಿಕಾರಿ ರಫೀಕ್ ಹಾಜಿ ಸುಲ್ತಾನ್, ಕಾರ್ಯದರ್ಶಿ ನವಾಝ್ ಭಗವಂತಕೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇವೇಳೆ ಆದಂ ದಾರಿಮಿಯವರಿಗೆ ಹೊಸ ಆಲ್ಟೋ 800 ಕಾರನ್ನು ಉಡುಗೊರೆಯಾಗಿ ನೀಡಲಾಯಿತು
ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪ್ರಸ್ತಾವನೆಗೈದರು. ಇಬ್ರಾಹೀಂ ಕೆ. ಮಾಣಿ ಸನ್ಮಾನಿತರನ್ನು ಪರಿಚಯಿಸಿದರು. ಇಲ್ಯಾಸ್ ನೇರಳಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.