ಟ್ವೆಂಟಿ-20 ವಿಶ್ವಕಪ್: ಪಾಕಿಸ್ತಾನ ಸೆಮಿ ಫೈನಲ್ ಗೆ ಲಗ್ಗೆ
ಅಡಿಲೇಡ್: ಮುಹಮ್ಮದ್ ಹ್ಯಾರಿಸ್ ಕೇವಲ 12 ಎಸೆತಗಳಲ್ಲಿ 31 ರನ್ ಗಳಿಸುವ ಮೂಲಕ ಪಾಕಿಸ್ತಾನ ತಂಡವು 5 ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಸ್ಥಾನ ಗಳಿಸಿದೆ.
ರವಿವಾರ ನಡೆದ ತನ್ನ ಕೊನೆಯ ಸೂಪರ್-12 ಪಂದ್ಯದಲ್ಲಿ ಗೆಲ್ಲಲು 128 ರನ್ ಗುರಿ ಪಡೆದಿದ್ದ ಪಾಕ್ ತಂಡ 18.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗೆಲುವಿನ ರನ್ ದಾಖಲಿಸಿತು.
ಪಾಕಿಸ್ತಾನವು ಈಗ ಗ್ರೂಪ್ 2 ರಿಂದ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ದಕ್ಷಿಣ ಆಫ್ರಿಕಾವು ನೆದರ್ ಲ್ಯಾಂಡ್ ವಿರುದ್ಧ ಸೋತ ಕಾರಣ ಭಾರತ ಸೆಮಿ ಫೈನಲ್ ಗೆ ಅರ್ಹತೆ ಪಡೆದಿದೆ. ಭಾರತ ರವಿವಾರ ಝಿಂಬಾಬ್ವೆ ವಿರುದ್ಧ ಕೊನೆಯ ಸೂಪರ್-12 ಪಂದ್ಯವನ್ನು ಆಡಲಿದ್ದು, ಅಗ್ರಸ್ಥಾನದೊಂದಿಗೆ ಮುಂದಿನ ಸುತ್ತಿಗೇರುವ ವಿಶ್ವಾಸದಲ್ಲಿದೆ.
ಇದಕ್ಕೂ ಮೊದಲು, ಶಾಹೀನ್ ಶಾ ಆಫ್ರಿದಿ (4/22) ಸಾಹಸದಿಂದ ಪಾಕಿಸ್ತಾನವು ಬಾಂಗ್ಲಾದೇಶವನ್ನು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 127 ರನ್ ಗೆ ನಿರ್ಬಂಧಿಸಿತು.
Next Story