ಪ್ರಯಾಗರಾಜ್: ಹಿರಿಯ ಕ್ರಿಕೆಟಿಗ ಹೈದರ್ ಅಲಿ ನಿಧನ

ಪ್ರಯಾಗ್‌ರಾಜ್: ಖ್ಯಾತ ಕ್ರಿಕೆಟಿಗ, ಕೋಚ್ ಹಾಗೂ ಸಂಗಮ್ ಸಿಟಿ ಆಯ್ಕೆಗಾರ ಹೈದರ್ ಅಲಿ ಶನಿವಾರ ದರಿಯಾಬಾದ್ ಪ್ರದೇಶದ ತಮ್ಮ ಪೂರ್ವಜರ ನಿವಾಸದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಅಲಹಾಬಾದ್ ನ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಅಲಿ 1963-1988 ರ ನಡುವೆ 25 ವರ್ಷಗಳಕಾಲ ಸುದೀರ್ಘ ಕ್ರಿಕೆಟ್ ವೃತ್ತಿಜೀವನ ಸಾಗಿಸಿದ್ದರು.
ಅವರು ಹಲವು ವರ್ಷಗಳ ಕಾಲ ರಣಜಿ ಟ್ರೋಫಿಯಲ್ಲಿ ಭಾರತೀಯ ರೈಲ್ವೇಸ್ ತಂಡದ ನಾಯಕರಾಗಿದ್ದರು ಹಾಗೂ ದುಲೀಪ್ ಟ್ರೋಫಿಯಲ್ಲಿ ಕೇಂದ್ರ ವಲಯದ ಪರವಾಗಿಯೂ ಆಡಿದ್ದರು.
ಎಡಗೈ ಸಾಂಪ್ರದಾಯಿಕ ಸ್ಪಿನ್‌ಗೆ ಹೆಸರುವಾಸಿಯಾದ ಅಲಿ ಅವರು ಎಡಗೈ ಬ್ಯಾಟ್ಸ್‌ಮನ್ ಕೂಡ ಆಗಿದ್ದರು. ದುರದೃಷ್ಟವಶಾತ್ ಅವರು ಭಾರತದ ಪರ ಆಡುವ ಅವಕಾಶ ಪಡೆದಿರಲಿಲ್ಲ.
Next Story





