ಟ್ವೆಂಟಿ-20 ವಿಶ್ವಕಪ್: ಝಿಂಬಾಬ್ವೆಗೆ 187 ರನ್ ಸವಾಲು ನೀಡಿದ ಭಾರತ
ಕೆ.ಎಲ್.ರಾಹುಲ್, ಸೂರ್ಯಕುಮಾರ್ ಅರ್ಧಶತಕ

ಕೆ.ಎಲ್.ರಾಹುಲ್, ಸೂರ್ಯಕುಮಾರ್ ಅರ್ಧಶತಕ
ಮೆಲ್ಬೋರ್ನ್: ಟ್ವೆಂಟಿ-20 ವಿಶ್ವಕಪ್ ನ ಸೂಪರ್-12ರ ಸುತ್ತಿನ ತನ್ನ ಕೊನೆಯ ಪಂದ್ಯದಲ್ಲಿ ಭಾರತವು ಝಿಂಬಾಬ್ವೆ ತಂಡದ ಗೆಲುವಿಗೆ 187 ರನ್ ಗುರಿ ನೀಡಿದೆ.
ರವಿವಾರ ಟಾಸ್ ಜಯಿಸಿದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಭಾರತವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ186 ರನ್ ಗಳಿಸಿತು.
ಭಾರತದ ಪರ ಆರಂಭಿಕ ಬ್ಯಾಟರ್ ಕೆ.ಎಲ್.ರಾಹುಲ್ (51 ರನ್, 35 ಎಸೆತ, 3 ಬೌಂಡರಿ, 3 ಸಿಕ್ಸರ್)ಹಾಗೂ ಸೂರ್ಯಕುಮಾರ್ ಯಾದವ್(ಔಟಾಗದೆ 61, 25 ಎಸೆತ, 6 ಬೌಂಡರಿ, 4 ಸಿಕ್ಸರ್)ಅರ್ಧಶತಕದ ಕೊಡುಗೆ ನೀಡಿದರು.
ವಿರಾಟ್ ಕೊಹ್ಲಿ 26 ರನ್, ರೋಹಿತ್ ಶರ್ಮಾ 15 ರನ್ ಹಾಗೂ ಹಾರ್ದಿಕ್ ಪಾಂಡ್ಯ 18 ರನ್ ಗಳಿಸಿ ಔಟಾದರು.
ಝಿಂಬಾಬ್ವೆ ಪರ ಸಿಯಾನ್ ವಿಲಿಯಮ್ಸ್(2-9) ಯಶಸ್ವಿ ಬೌಲರ್ ಎನಿಸಿಕೊಂಡರು.
ಇಂದು ಬೆಳಗ್ಗೆ ದಕ್ಷಿಣ ಆಫ್ರಿಕಾ ತಂಡ ತನ್ನ ಕೊನೆಯ ಸೂಪರ್-12 ಪಂದ್ಯದಲ್ಲಿ ನೆದರ್ ಲ್ಯಾಂಡ್ಸ್ ತಂಡಕ್ಕೆ 13 ರನ್ನಿಂದ ಸೋತ ಕಾರಣ ಭಾರತವು ಗ್ರೂಪ್-2ರಿಂದ ಸೆಮಿ ಫೈನಲ್ ಗೆ ತಲುಪಿತ್ತು.
Next Story