ಟಿ-ಟ್ವೆಂಟಿ ವಿಶ್ವಕಪ್: ಝಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಮೆಲ್ಬೋರ್ನ್: ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಟಿ-ಟ್ವೆಂಟಿ ವಿಶ್ವಕಪ್ ಪಂದ್ಯಾಟದ ಸೂಪರ್-12 ಹಂತದಲ್ಲಿ ಝಿಂಬಾಬ್ವೆ ತಂಡವನ್ನು ಭರ್ಜರಿಯಾಗಿ ಸೋಲಿಸಿದೆ. ಭಾರತ ಒಟ್ಟು 71 ರನ್ ಗಳ ಅಂತರದಿಂದ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಕೆ.ಎಲ್ ರಾಹುಲ್ 51 ಹಾಗೂ ಸೂರ್ಯಕುಮಾರ್ ಯಾದವ್‌ರ ಆಕರ್ಷಕ 61 ರನ್ ಗಳ ಮೂಲಕ ಇಪ್ಪತ್ತು ಓವರ್‌ಗಳಲ್ಲಿ ಒಟ್ಟು 186 ರನ್ ಗಳನ್ನು ಪೇರಿಸಿತು. ಝಿಂಬಾಬ್ವೆ ಪರ ಶಾನ್ ವಿಲಿಯಮ್ಸ್ 2 ವಿಕೆಟ್ ಗಳಿಸಿದರು.
ಬಳಿಕ ಬ್ಯಾಟಿಂಗ್ ಗೆ ಇಳಿದ ಝಿಂಬಾಬ್ವೆ ತಂಡದ ಪರ ಸಿಕಂದರ್ ರಝಾ 34 ಹಾಗೂ ರ್ಯಾನ್ ಬರ್ಲ್ 35 ರನ್ ಗಳನ್ನು ಗಳಿಸಿದರು. 17.2 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡ ಝಿಂಬಾಬ್ವೆ ಕೇವಲ 115 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಅಶ್ವಿನ್ ಮೂರು ವಿಕೆಟ್ ಹಾಗೂ ಮುಹಮ್ಮದ್ ಶಮಿ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಗಳನ್ನು ಪಡೆದರು.
Next Story