ಮಂಗಳೂರು: ‘ಅಮೃತಗಾಥಾ-ರಾಷ್ಟ್ರೀಯ ಕಥಾ ಕೀರ್ತನೋತ್ಸವ’ ಕಾರ್ಯಕ್ರವ

ಮಂಗಳೂರು: ಹರಿಕಥಾ ಪರಿಷತ್ ಮಂಗಳೂರು ವತಿಯಿಂದ ರಾಮಕೃಷ್ಣ ಮಠ ಮಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರವಿವಾರ ನಗರದ ರಾಮಕೃಷ್ಣ ಮಠದಲ್ಲಿ ‘ಅಮೃತಗಾಥ-ರಾಷ್ಟ್ರೀಯ ಕಥಾ ಕೀರ್ತನೋತ್ಸವ-22 ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜೀ ಮಹಾರಾಜ್ ಆಧ್ಯಾತ್ಮಿಕ ಸಂಸ್ಕೃತಿಯನ್ನು ಜನರ ಮನಸ್ಸಿಗೆ ಮುಟ್ಟಿಸುವುದಕ್ಕೆ ಪ್ರಮುಖ ಕಾರಣ ಹರಿಕಥೆ ಯಾಗಿದೆ. ಭಗವಂತನ ಚರಿತ್ರೆ ಮತ್ತು ಮಹಾತ್ಮರ ಜೀವನವನ್ನು ಅದ್ಭುತವಾದ ಕಂಠದಲ್ಲಿ ಜನರ ಮನಸ್ಸಿಗೆ ಆಳವಾಗಿ ಅರ್ಥವಾಗುವ ರೀತಿಯಲ್ಲಿ ಹೃದಯಕ್ಕೆ ಮುಟ್ಟುವಂತೆ ವಿವರಿಸಿ ಹೇಳುವುದು ಕೂಡ ವಿಶಿಷ್ಟ ಕಲೆಯಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಮಾತನಾಡಿದರು.
ಹರಿಕಥಾ ಪರಿಷತ್ ಮಂಗಳೂರು ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಹರಿಕಥಾ ಪರಿಷತ್ ಮಂಗಳೂರು ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಡಾ. ಎಸ್.ಪಿ.ಗುರುದಾಸ್ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಸುಧಾಕರ ರಾವ್ ಪೇಜಾವರ ವಂದಿಸಿದರು.
ಕಥಾ ಕೀರ್ತನೋತ್ಸವ
ಕೀರ್ತನೋತ್ಸವದಲ್ಲಿ ತೋನ್ಸೆ ಪುಷ್ಕಳ ಕುಮಾರ್ ಅವರಿಂದ ವೀರರಾಣಿ ಅಬ್ಬಕ್ಕ, ಶಂ.ನಾ.ಅಡಿಗ ಕುಂಬ್ಳೆ ಅವರಿಂದ ನೇತಾಜಿ ಸುಭಾಷ್ ಚಂದ್ರ ಬೋಸ್, ಪಿ.ವಿ.ರಾವ್ ಸುರತ್ಕಲ್ ಅವರಿಂದ ಮಹಾತ್ಮಾ ಗಾಂಧಿ, ಕೆ.ಮಹಾಬಲ ಶೆಟ್ಟಿ ಅವರಿಂದ ಕುದ್ಮುಲ್ ರಂಗರಾವ್, ವೈ. ಅನಂತಪದ್ಮನಾಭ ಭಟ್ ಕಾರ್ಕಳ ಅವರಿಂದ ಬಾಲಗಂಗಾಧರ ತಿಲಕ್, ಡಾ.ಎಸ್.ಪಿ. ಗುರುದಾಸ್ ಮಂಗಳೂರು ಅವರಿಂದ ಸ್ವಾಮಿ ವಿವೇಕಾನಂದ ಕಥಾ ಕೀರ್ತನೆ ಪ್ರಸ್ತುತಗೊಂಡಿತು.