ಉಳ್ಳಾಲ ಅಳೇಕಲ: ಬ್ರೈಟ್ ಮದನಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಭೆ

ಮಂಗಳೂರು : ಉಳ್ಳಾಲ ಅಳೇಕಲದ ಬ್ರೈಟ್ ಮದನಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಕ ರಕ್ಷಕ ಸಭೆಯು ಶನಿವಾರ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಸಂಸ್ಥೆಯ ಉಪಾಧ್ಯಕ್ಷ ಹಾಜಿ ಯು.ಎಸ್.ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಟಿ.ಇಸ್ಮಾಯಿಲ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಅಬ್ದುಲ್ ಪತಾಕ್,ಕೋಶಾಧಿಕಾರಿ ಹಾಜಿ ಯು.ಪಿ ಅರಬಿ, ಪ್ರೌಢಶಾಲಾ ವಿಭಾಗ ಹಾಗೂ ಕಾಲೇಜು ವಿಭಾಗದ ಸಂಚಾಲಕರಾದ ಹಾಜಿ ಯು.ಕೆ ಇಬ್ರಾಹಿಂ, ಶೈಕ್ಷಣಿಕ ಸಲಹೆಗಾರ ಹಾಜಿ ಯು.ಟಿ. ಇಕ್ಬಾಲ್, ಆಂಗ್ಲ ಮಾಧ್ಯಮ ವಿಭಾಗದ ಸಂಚಾಲಕ ಸೈಯದ್ ತಾಹಿರ್ ತಂಳ್,ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷ ಅಸ್ಗರ್, ಉಪಾಧ್ಯಕ್ಷೆ ಸುಮಯ್ಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸುಹಾ ಫಾತಿಮಾ ಪ್ರಾರ್ಥನೆಗೈದರು. ಮುಖ್ಯ ಶಿಕ್ಷಕಿ ಝುಹೇನಾ ಪರ್ವೀನ್ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಶ್ವೇತಾ ವಂದಿಸಿದರು. ಶಿಕ್ಷಕಿ ಶಬನಾ ಕಾರ್ಯಕ್ರಮ ನಿರೂಪಿಸಿದು.
Next Story