ದಿಲ್ಲಿ: ಬುಧವಾರದಿಂದ ಪ್ರಾಥಮಿಕ ಶಾಲೆಗಳು ಪುನರಾರಂಭ

ಹೊಸದಿಲ್ಲಿ: ದಿಲ್ಲಿಯ ಪ್ರಾಥಮಿಕ ಶಾಲಾ ತರಗತಿಗಳು ಬುಧವಾರ ಪುನರಾರಂಭ ವಾಗಲಿದ್ದು, ಸರಕಾರಿ ನೌಕರರಿಗೆ ಶೇ.50ರಷ್ಟು ವರ್ಕ್ ಫಾರ್ ಹೋಮ್ ಆರ್ಡರ್ ಅನ್ನು ಹಿಂಪಡೆಯಲಾಗಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ಇಂದು ಪ್ರಕಟಿಸಿದ್ದಾರೆ.
"ದಿಲ್ಲಿ ಸರಕಾರಿ ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡುವ ಆದೇಶವನ್ನು ಹಿಂಪಡೆಯಲಾಗಿದೆ. ಸೋಮವಾರದಿಂದ ಸರಕಾರಿ ಕಚೇರಿಗಳು ಪೂರ್ಣ ಸಾಮರ್ಥ್ಯದೊಂದಿಗೆ ಪುನರಾರಂಭಗೊಳ್ಳುತ್ತವೆ" ಎಂದು ರೈ ಹೇಳಿದರು.
ನಗರದಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುತ್ತಿದ್ದಂತೆ, ರೈ ಅವರು ಹೆದ್ದಾರಿಗಳು, ರಸ್ತೆಗಳು, ಮೇಲ್ಸೇತುವೆಗಳು ಇತ್ಯಾದಿಗಳಿಗೆ ಸಂಬಂಧಿಸಿದ ನಿರ್ಮಾಣ ಕಾರ್ಯಗಳ ಮೇಲಿನ ನಿಷೇಧವನ್ನು ತೆಗೆದುಹಾಕುವುದಾಗಿ ಘೋಷಿಸಿದರು. ಆದರೆ, ಖಾಸಗಿ ಕಟ್ಟಡ ಕಾಮಗಾರಿಗೆ ನಿರ್ಬಂಧ ಮುಂದುವರಿಯಲಿದೆ ಎಂದರು.
Next Story